ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಬಯಲಾದ ಸ್ಫೋಟಕ ಸತ್ಯ

ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕೆಲ ದಿನಗಳ ಹಿಂದೆ ಸಂಭವಿಸಿದ ಕಾರು ಬಾಂಬ್ ಸ್ಫೋಟ ಪ್ರಕರಣದಿಂದಾಗಿ ದಿಗಿಲುಗೊಂಡವರು ಒಬ್ಬಿಬ್ಬರಲ್ಲ. ಈ ಪ್ರಕರಣ ವನ್ನು ಭೇದಿಸಲು ಮುಂದಾಗಿರುವ ತನಿಖಾಧಿಕಾರಿಗಳ ಸಮ್ಮುಖದಲ್ಲಿ, ಆರೋಪಿಗಳಲ್ಲಿ ಒಬ್ಬನಾದ ಡಾ.ಮುಜಮ್ಮಿಲ್ ಶಕೀಲ್, ತಾನು ಆರೂವರೆ ಲಕ್ಷ ರುಪಾಯಿ ಪಾವತಿಸಿ ಎಕೆ-47 ಬಂದೂಕು ಖರೀದಿಸಿದ್ದನ್ನು ಒಪ್ಪಿಕೊಂಡಿದ್ದಾನೆ.

ಮಾತ್ರವಲ್ಲ, ದೆಹಲಿಯಲ್ಲಿನ ಸ್ಫೋಟದಂತೆಯೇ ದೇಶದ ಹತ್ತು ಹಲವು ಕಡೆ ಸ್ಫೋಟ ಗಳನ್ನು ನಡೆಸಲು ಈ ದುರುಳರ ತಂಡವು ತಯಾರಿ ನಡೆಸುತ್ತಿತ್ತು ಎಂಬ ಆಘಾತಕಾರಿ ಸತ್ಯವೂ ಈತನ ವಿಚಾರಣೆಯ ವೇಳೆ ಬಯಲಾಗಿದೆ. ಉಗ್ರವಾದ ಎಂಬುದು ಕೇವಲ ರೆಂಬೆ ಗಳನ್ನಷ್ಟೇ ಕತ್ತರಿಸಿದರೆ ಕೆಳಗುರುಳುವ ವಿಷವೃಕ್ಷವಲ್ಲ, ನೆಲವನ್ನು ಅಗೆದು ಇದರ ಬೇರು ಗಳನ್ನೂ ಬಗೆದು ಒಂದು ಗತಿ ಕಾಣಿಸಬೇಕು ಎಂಬ ಕಹಿಸತ್ಯವನ್ನು ಇಂಥ ನಿದರ್ಶನಗಳು ಪುಷ್ಟೀಕರಿಸಬಲ್ಲವು.

ಇದನ್ನೂ ಓದಿ: Vishwavani Editorial: ಯುದ್ಧ ಸನ್ನದ್ಧತೆಗೆ ಸಿಕ್ಕ ಬಲ

ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಮಾರಣಹೋಮಕ್ಕೆ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಮೂಲಕ ಭಾರತವು ಬಿಸಿ ಮುಟ್ಟಿಸಿದ್ದರೂ ಅದರಿಂದ ಉಗ್ರರು ಪಾಠ ಕಲಿತಿಲ್ಲ ಮತ್ತು ಕಲಿಯುವುದೂ ಇಲ್ಲ; ಇನ್ನೇನು ಎಲ್ಲವೂ ಬಗೆಹರಿಯಿತು, ಶಾಂತಿ ನೆಲೆಸಿತು ಎಂದು ಜನರು ಮತ್ತು ವ್ಯವಸ್ಥೆ ನಿರಾಳವಾಗುವಷ್ಟರಲ್ಲಿ ಉಗ್ರವಾದವೆಂಬ ಘಟಸರ್ಪವು ಮತ್ತೆ ಹೆಡೆಯೆತ್ತಲು ಹವಣಿಸುತ್ತದೆ ಎಂಬುದು ನಾವು ಅರ್ಥಮಾಡಿ ಕೊಳ್ಳಬೇಕಿರುವ ಸತ್ಯ.

ಭಾರತದ ಮಿಲಿಟರಿ ಕಾರ್ಯಾಚರಣೆಯಲ್ಲಿ ಬರೆ ಹಾಕಿಸಿಕೊಂಡಿದ್ದರೂ, ದೇಶದ ವಿವಿಧೆಡೆ ಮತ್ತೆ ಸ್ಫೋಟಗಳನ್ನು ಕೈಗೊಳ್ಳಲು ಉಗ್ರರು ಸಂಚು ಹೂಡಿದ್ದರು ಎಂದಾದರೆ ಅವರ ಧಾರ್ಷ್ಟ್ಯ ಎಷ್ಟಿರಬೇಕು? ಇಲ್ಲ, ಇದು ಕೈಕಾಲುಗಳನ್ನು ನಿರಾಳವಾಗಿ ಚಾಚಿಕೊಂಡು ಕೂರುವ ಕಾಲವಲ್ಲ, ನಮ್ಮ ವ್ಯವಸ್ಥೆಗಿಂತ ಹತ್ತು ಹೆಜ್ಜೆ ಮುಂದೆ ಹೋಗಿ ಆಲೋಚಿಸಿ ಕುತಂತ್ರಗಳನ್ನು ಹೆಣೆಯುವ ಸಂಚುಕೋರರೇ ತುಂಬಿರುವ ಉಗ್ರರ ಪಡೆಯನ್ನು ಮೂಲೋತ್ಪಾಟನ ಮಾಡಬೇಕಿದೆ. ಇಲ್ಲವಾದಲ್ಲಿ, ರಕ್ತಬೀಜಾಸುರರಂತೆ ಅವರ ಸಂತತಿಯ ವರ್ಧನೆ ಆಗುತ್ತಲೇ ಇರುತ್ತದೆ...