Vishwavani Editorial: ಯುದ್ಧ ಸನ್ನದ್ಧತೆಗೆ ಸಿಕ್ಕ ಬಲ
ಒಟ್ಟಿನಲ್ಲಿ, ಭಾರತದ ರಕ್ಷಣಾ ಕೋಠಿಯೊಳಗೆ ತುಂಬಿಕೊಳ್ಳಲು ವೈವಿಧ್ಯ ಮಯ ಶಸ್ತ್ರಾಸ್ತ್ರಗಳು ಸನ್ನದ್ಧವಾಗಿವೆ ಎಂದಾಯಿತು. ಇದು ಅರ್ಥವಾಗಬೇಕಿರುವುದು ‘ಮಗ್ಗುಲುಮುಳ್ಳು’ ರಾಷ್ಟ್ರ ಎಂದೇ ಕರೆಯಲ್ಪಡುವ ಪಾಕಿಸ್ತಾನಕ್ಕೆ. ಬೆಂಕಿ ಕಡ್ಡಿ ಗೀರಿ ಓಡಿ ಹೋಗುವ ಚಿತ್ತಸ್ಥಿತಿಯ ಮತ್ತು ಉತ್ತರ ಕುಮಾರನ ಪೌರುಷದ ಪಾಕಿಸ್ತಾನವು, ಭಾರತವನ್ನು ಸುಖಾಸುಮ್ಮನೆ ಕೆಣಕದೆ ತನ್ನ ಪ್ರಜೆಗಳ ಹಿತರಕ್ಷಣೆ ಯಲ್ಲಿ ಇನ್ನಾದರೂ ತೊಡಗಲಿ ಎಂಬುದು ಸಹೃದಯಿಗಳ ಆಶಯ ಮತ್ತು ನಿರೀಕ್ಷೆ.
-
ಅಮೆರಿಕವು ‘ಜಾವೆಲಿನ್ ಮಿಸೈಲ್ ಸಿಸ್ಟಂ’ ಮತ್ತು ‘ಎಕ್ಸ್ ಕ್ಯಾಲಿಬರ್ ಪ್ರಾಜೆಕ್ಟೀಸ್’ ಎಂಬ ಯುದ್ಧೋಪಕರಣ ವ್ಯವಸ್ಥೆಗಳನ್ನು ಭಾರತಕ್ಕೆ ಮಾರಾಟ ಮಾಡಲು ತುದಿಗಾಲಲ್ಲಿ ನಿಂತಿದೆ ಎಂಬ ಸುದ್ದಿ ವರದಿಯಾಗಿದೆ. ಮತ್ತೊಂದೆಡೆ, ಭಾರತದ ಪರಮಾಪ್ತ ಮಿತ್ರ ರಷ್ಯಾ ದೇಶವು ತನ್ನ ಬಲು ಶಕ್ತಿಶಾಲಿಯಾದ ‘ಸುಖೋಯ್ ಎಸ್‌ಯು-57ಇ’ ಯುದ್ಧವಿಮಾನವನ್ನೂ, ಸಂಬಂಧಿತ ತಂತ್ರಜ್ಞಾನವನ್ನೂ ಭಾರತಕ್ಕೆ ಕೊಡಲು ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.
ಜತೆಗೆ, ಭಾರತವು ಯಾವುದೇ ಶಸ್ತ್ರ, ವಿಮಾನಗಳನ್ನು ಕೇಳಿದರೂ ಕೊಡಲು ತಾನು ಸಿದ್ಧ ಎಂಬ ಭರವಸೆಯ ಮಾತು ರಷ್ಯಾದ ರಕ್ಷಣಾ ಕ್ಷೇತ್ರದ ಕಡೆಯಿಂದ ಹೊಮ್ಮಿದೆ. ಈ ಎರಡು ಪ್ರಸ್ತಾವನೆಗಳ ಪೈಕಿ ಅಮೆರಿಕದ್ದು ‘ಪಕ್ಕಾ ಮಾರಾಟಗಾರನ ಚಿತ್ತಸ್ಥಿತಿ’ ಆಗಿದ್ದರೆ, ರಷ್ಯಾ ದೇಶದ್ದು ವಾಡಿಕೆಯ ನಡೆ. ಅಂದರೆ ಅದು, ದ್ವಿಪಕ್ಷೀಯ ಮಿತ್ರತ್ವವನ್ನು ಮತ್ತಷ್ಟು ಬಲಪಡಿಸುವ ನಡೆಯಾಗಿದೆ ಎನ್ನಲಡ್ಡಿಯಿಲ್ಲ.
ಇದನ್ನೂ ಓದಿ: Vishwavani Editorial: ಕಟ್ಟುನಿಟ್ಟಿನ ಸುರಕ್ಷತೆ ಅಗತ್ಯ
ಒಟ್ಟಿನಲ್ಲಿ, ಭಾರತದ ರಕ್ಷಣಾ ಕೋಠಿಯೊಳಗೆ ತುಂಬಿಕೊಳ್ಳಲು ವೈವಿಧ್ಯ ಮಯ ಶಸ್ತ್ರಾಸ್ತ್ರ ಗಳು ಸನ್ನದ್ಧವಾಗಿವೆ ಎಂದಾಯಿತು. ಇದು ಅರ್ಥವಾಗಬೇಕಿರುವುದು ‘ಮಗ್ಗುಲುಮುಳ್ಳು’ ರಾಷ್ಟ್ರ ಎಂದೇ ಕರೆಯಲ್ಪಡುವ ಪಾಕಿಸ್ತಾನಕ್ಕೆ. ಬೆಂಕಿ ಕಡ್ಡಿ ಗೀರಿ ಓಡಿ ಹೋಗುವ ಚಿತ್ತ ಸ್ಥಿತಿಯ ಮತ್ತು ಉತ್ತರ ಕುಮಾರನ ಪೌರುಷದ ಪಾಕಿಸ್ತಾನವು, ಭಾರತವನ್ನು ಸುಖಾ ಸುಮ್ಮನೆ ಕೆಣಕದೆ ತನ್ನ ಪ್ರಜೆಗಳ ಹಿತರಕ್ಷಣೆ ಯಲ್ಲಿ ಇನ್ನಾದರೂ ತೊಡಗಲಿ ಎಂಬುದು ಸಹೃದಯಿಗಳ ಆಶಯ ಮತ್ತು ನಿರೀಕ್ಷೆ.
ಆದರೆ, ಪಾಕಿಸ್ತಾನದ ಆಳುಗರೂ ಮತ್ತು ಮಿಲಿಟರಿಯ ಮಹಾಯೋಧರೂ ಈ ವಸ್ತುಸ್ಥಿತಿ ಯನ್ನು ಅರಿಯದೆ, ಭಾರತದ ಮಿಲಿಟರಿ ತಾಕತ್ತನ್ನು ಕೀಳಂದಾಜು ಮಾಡಿ, ಕಾಲು ಕೆರೆದು ಕೊಂಡು ಯುದ್ಧಕ್ಕೆ ಆಹ್ವಾನಿಸುವ ಚಾಳಿಯನ್ನು ರೂಢಿಸಿಕೊಂಡು ಬಿಟ್ಟಿದ್ದಾರೆ. ಅಮೆರಿಕ ಮತ್ತು ರಷ್ಯಾ ದೇಶಗಳು ಭಾರತದ ಸಮ್ಮುಖದಲ್ಲಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಕಂಡಾ ದರೂ ಪಾಕಿಸ್ತಾನವು ಬಾಲ ಮುದುರಿಕೊಂಡಿದ್ದರೆ ಕ್ಷೇಮ..!