ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಡಿಜಿಟಲ್ ವಂಚಕರಿದ್ದಾರೆ, ಎಚ್ಚರಿಕೆ

ಸಂಬಂಧಪಟ್ಟ ಇಲಾಖೆಗಳ ವತಿಯಿಂದ ಎಷ್ಟೇ ಮಾಹಿತಿ ಮತ್ತು ಮುನ್ನೆಚ್ಚರಿಕೆಗಳನ್ನು ನೀಡುತ್ತಿದ್ದರೂ, ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆ ಇತ್ಯಾದಿಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಹೀಗೆ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ ಹತ್ತತ್ತಿರ 32 ಕೋಟಿ ರುಪಾಯಿಗಳನ್ನು ಕಳೆದುಕೊಂಡಿರುವುದು ಇತ್ತೀಚಿನ ಉದಾಹರಣೆ.

‘ನಿಷೇಧಿತ ಎಂಡಿಎಂ ಮಾದಕ ದ್ರವ್ಯವನ್ನು ಒಳಗೊಂಡ ಕೊರಿಯರ್ ಪಾರ್ಸೆಲ್ ನಿಮಗೆ ಬಂದಿದ್ದು, ಅದೀಗ ಮುಂಬೈನಲ್ಲಿನ ಕೇಂದ್ರ ಕಚೇರಿಯಲ್ಲಿದೆ’ ಎಂದು ಭಯ ಹುಟ್ಟಿಸುವ ಮೂಲಕ ದುರುಳನೊಬ್ಬ ವಂಚಿಸಿದ ಪ್ರಕರಣವಿದು. ಮತ್ತೊಂದೆಡೆ, ತಮ್ಮ ಕುಟುಂಬದ ಸದಸ್ಯರೊಬ್ಬರು ಹೀಗೆಯೇ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ 20 ಕೋಟಿ ರುಪಾಯಿಗಳನ್ನು ಕಳೆದುಕೊಂಡ ಸಂಗತಿಯನ್ನೂ ತೆಲುಗು ಚಿತ್ರನಟ ನಾಗಾರ್ಜುನ ಅಕ್ಕಿನೇನಿ ಹೇಳಿಕೊಂಡಿ ದ್ದಾರೆ.

ಇದನ್ನೂ ಓದಿ: Vishwavani Editorial: ಬೀಗಿದವ ಬಾಗಲೇಬೇಕು...

‘ಮುಂದುವರಿದ ತಂತ್ರ ಜ್ಞಾನದ ಕಾಲಘಟ್ಟದಲ್ಲಿರುವವರು ನಾವು’ ಎಂದು ಇನ್ನಿಲ್ಲದಂತೆ ಹೆಮ್ಮೆ ಪಟ್ಟುಕೊಳ್ಳುವ ಜನರು ಕೊಂಚವೇ ಯಾಮಾರಿದರೂ ಅವರನ್ನು ವಂಚನೆಯ ಕೂಪಕ್ಕೆ ತಳ್ಳಲು ಕೆಲವರು ಹೊಂಚುಹಾಕುತ್ತಿರುತ್ತಾರೆ ಎಂಬುದಕ್ಕೆ ಇಂಥ ಬೆಳವಣಿಗೆಗಳು ಪುಷ್ಟಿ ನೀಡಬಲ್ಲವು.

‘ಸುಲಭಕ್ಕೆ ಮೋಸ ಹೋಗುವವರು ಇರುವವರೆಗೂ, ಮೋಸ ಮಾಡುವವರು ಇದ್ದೇ ಇರು ತ್ತಾರೆ’ ಎಂಬ ಮಾತು ಗೊತ್ತಿರುವಂಥದ್ದೇ. ಆದ್ದರಿಂದ, ನಮ್ಮ ಜನರು ಇನ್ನಷ್ಟು ಮತ್ತಷ್ಟು ಮಾಹಿತಿವಂತರಾಗಬೇಕಿದೆ. ಇಂಥ ಯಾವುದೇ ಅನುಮಾನಾಸ್ಪದ ಅಥವಾ ಅನಾಮಿಕ ಕರೆಗಳು ಬಂದಾಗ, ಮತ್ತು ಅವು ಬೆದರಿಸುವ ಸ್ವರೂಪದಲ್ಲಿ ಇದ್ದಾಗ ಕಂಗೆಡದೆ, ಅವರು ನೀಡುವ ಲಿಂಕ್‌ಗಳನ್ನು ಒತ್ತದೆ, ಸನಿಹದ ಪೊಲೀಸ್ ಠಾಣೆಗೆ ದೂರು ನೀಡುವುದು ಅಪೇಕ್ಷ ಣೀಯವಾಗಿರುತ್ತದೆ.

ಬೆವರು-ರಕ್ತವನ್ನು ಬಸಿದು ಸಂಪಾದಿಸಿದ ದುಡ್ಡು, ಕಳ್ಳ-ಕಾಕರ ಕೈಸೇರಬಾರದು ಎಂದಿ ದ್ದರೆ, ನಾವು ಒಂದಿಷ್ಟು ಎಚ್ಚರದಿಂದ ಇರಲೇಬೇಕು...