Vishwavani Editorial: ಶಿಸ್ತಿನ ಪಕ್ಷದಲ್ಲಿ ಅಶಿಸ್ತಿನ ತಾಂಡವ
ಸಂಡೂರು ಚುನಾವಣೆ ಸೋಲಿಗೆ ಶ್ರೀರಾಮುಲು ಕಾರಣ ಎಂದು ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತು ಹೈಕಮಾಂಡ್‌ಗೆ ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಾಮುಲು ಅವರು ಶ್ರೀರಾಮುಲು ಅವರನ್ನು ತರಾಟೆಗೆ ತೆಗೆದು ಕೊಂಡಿದ್ದರು
ಬಿಜೆಪಿ ಬಣ ಜಗಳ ತಾರಕಕ್ಕೇರಿದೆ. ಪಕ್ಷದ ಇನ್ನೊಬ್ಬ ಹಿರಿಯ ನಾಯಕ ಮಾಜಿ ಸಚಿವ ಶ್ರೀರಾಮುಲು ಒಂದು ಕಾಲದ ತಮ್ಮ ಆಪ್ತ ಸ್ನೇಹಿತ ಜನಾರ್ದನ ರೆಡ್ಡಿ ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ಸಂಡೂರು ಚುನಾವಣೆ ಸೋಲಿಗೆ ಶ್ರೀರಾಮುಲು ಕಾರಣ ಎಂದು ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತು ಹೈಕಮಾಂಡ್‌ಗೆ ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಾಮುಲು ಅವರು ಶ್ರೀರಾಮುಲು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನೂ ಓದಿ: Vishwavani Editorial: ನವಸಂಕಲ್ಪದ ಪರ್ವಕಾಲ ವಾಗಲಿ
ಇದರಿಂದ ಅಸಮಾಧಾನಗೊಂಡ ರಾಮುಲು, “ಜನಾರ್ದನ ರೆಡ್ಡಿ ನನ್ನ ಟಾರ್ಗೆಟ್ ಮಾಡ್ತಾ ಇzರೆ. ಸಭೆಯಲ್ಲಿ ವಿಜಯೇಂದ್ರ ನನ್ನ ಪರ ಇರಲಿಲ್ಲ. ನಾನು ಪಕ್ಷ ಬಿಡುತ್ತೇನೆ, ನಿಮಗೆ ನಾನು ಬೇಡ ಅಂದ್ರೆ ಹೇಳಿ " ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಶಿಸ್ತಿನ ಪಕ್ಷದಲ್ಲಿ ಅಶಿಸ್ತು ಬಿಟ್ಟರೆ ಬೇರೇನೂ ಉಳಿದಿಲ್ಲ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಕೇಂದ್ರ ನಾಯಕರ ಎಚ್ಚರಿಕೆಗೂ ಮಣಿ ಯದೆ ರಾಜ್ಯ ಬಿಜೆಪಿ ನಾಯಕರು ಪರಸ್ಪರ ವಾಗ್ದಾಳಿ ಮಾತ್ರವಲ್ಲ, ಗಣ್ಯರಿಗೆ ತಕ್ಕುದಲ್ಲದ ಕೆಳಮಟ್ಟ ದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ತನ್ನನ್ನು ಪಾರ್ಟಿ ವಿದ್ ಡಿಫರೆನ್ಸ್ ಎಂದು ಹೇಳಿಕೊಂಡಿತ್ತು. ಈಗ ಈ ವಿಶೇಷಣ ‘ಪಾರ್ಟಿ ವಿದ್ ಮೆನಿ ಡಿಫರೆನ್ಸಸ್’ ಎಂದು ಬದಲಾ ಗಿದೆ. ಹಿರಿಯ ನಾಯಕ ಬಸನಗೌಡ ಯತ್ನಾಳ ಬಿವೈವಿ ವಿರುದ್ಧ ಹಿಂದಿನಿಂದಲೂ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಇದೀಗ ಪಕ್ಷದ ಇನ್ನೊಬ್ಬ ಹಿರಿಯ ನಾಯಕ ಸುನಿಲ್ ಕುಮಾರ್ ಪಕ್ಷದ ಪ್ರಧಾನ ಕಾರ‍್ಯದರ್ಶಿ ಸ್ಥಾನ ತೊರೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಹಾಸನದಲ್ಲಿ ಯುವ ನಾಯಕ ಪ್ರೀತಂ ಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ತವಕದಲ್ಲಿದ್ದಾರೆ. ಬಿಜೆಪಿ ಕಾರ‍್ಯಕರ್ತರು ನಾಯಕರ ಜಗಳ ಕಂಡು ಭ್ರಮನಿರಶನಗೊಂಡಿದ್ದರೆ ಅಚ್ಚರಿ ಇಲ್ಲ.