Vishwavani Editorial: ಇಸ್ರೊ ಸಾಧನೆ ದೇಶದ ಹೆಮ್ಮೆ
60ರ ದಶಕದಲ್ಲಿ ಎತ್ತಿನ ಗಾಡಿಯಲ್ಲಿ ರಾಕೆಟ್ ಬಿಡಿ ಭಾಗಗಳನ್ನು ಸಾಗಿಸಿದ ಐಕಾನಿಕ್ ಫೋಟೋ ಈಗಲೂ ಬೆಂಗಳೂರಿನ ಇಸ್ರೊ ಕಚೇರಿಯಲ್ಲಿದೆ. ಅಲ್ಲಿಂದ ಗಗನಯಾನದ ತನಕ ಇಸ್ರೊ ಬಹುದೂರ ಸಾಗಿ ಬಂದಿದೆ. ಈ ಮೂಲಕ 146 ಕೋಟಿ ಭಾರತೀಯರ ಅಭಿಮಾನಕ್ಕೆ ಪಾತ್ರವಾಗಿದೆ
ಸರಕಾರಿ ಸಂಸ್ಥೆ ಎಂದಾಕ್ಷಣ ಅದರ ದಕ್ಷತೆ, ಕಾರ‍್ಯತತ್ಪರತೆ ಬಗ್ಗೆ ನಾವು ಮೂಗು ಮುರಿಯುವುದು ಸಹಜ. ಇದಕ್ಕೆ ಅಪವಾದವಾಗಿ ಹೆಸರಿಸಬಹುದಾದ ಸಂಸ್ಥೆ ಎಂದರೆ ಅದು ನಮ್ಮ ಹೆಮ್ಮೆಯ ಇಸ್ರೊ. 1963ರ ನ.21ರಂದು ಅಮೆರಿಕದ ರಾಕೆಟ್ ಬಳಸಿ ಮೊದಲ ಬಾರಿಗೆ ಉಪಗ್ರಹ ಉಡ್ಡಯನ ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬುಧವಾರ ತನ್ನ 100ನೇ ಉಡ್ಡಯನವನ್ನು ಯಶಸ್ವಿಯಾಗಿ ನಡೆಸಿದೆ.
60ರ ದಶಕದಲ್ಲಿ ಎತ್ತಿನ ಗಾಡಿಯಲ್ಲಿ ರಾಕೆಟ್ ಬಿಡಿ ಭಾಗಗಳನ್ನು ಸಾಗಿಸಿದ ಐಕಾನಿಕ್ ಫೋಟೋ ಈಗಲೂ ಬೆಂಗಳೂರಿನ ಇಸ್ರೊ ಕಚೇರಿಯಲ್ಲಿದೆ. ಅಲ್ಲಿಂದ ಗಗನಯಾನದ ತನಕ ಇಸ್ರೊ ಬಹುದೂರ ಸಾಗಿ ಬಂದಿದೆ. ಈ ಮೂಲಕ 146 ಕೋಟಿ ಭಾರತೀಯರ ಅಭಿಮಾನಕ್ಕೆ ಪಾತ್ರವಾಗಿದೆ.
ಇದನ್ನೂ ಓದಿ: Vishwavani Editorial: ಮೆಟ್ರೋ; ಗಾಯದ ಮೇಲೆ ಬರೆ
ಸ್ವದೇಶಿ ಜಿಪಿಎಸ್ ಯೋಜನೆಯ ಭಾಗವಾಗಿ ರೂಪಿಸಿರುವ ನಾವಿಕ್ ಉಪಗ್ರಹ ಬುಧವಾರ ಬೆಳಿಗ್ಗೆ ಯಶಸ್ವಿಯಾಗಿ ಅಂತರಿಕ್ಷ ಸೇರಿದೆ. ಇದು ಸ್ವದೇಶಿ ಜಿಪಿಎಸ್ ಜಾಲದ 2ನೇ ತಲೆಮಾರಿನ ಉಪಗ್ರಹ. ಭಾರತೀಯ ಉಪಖಂಡ ಮತ್ತು ಅದರಾಚೆಗಿನ 1500 ಕಿ.ಮೀ.ದೂರದವರೆಗೆ ನಿಖರ ಸಮಯ, ಸ್ಥಾನ ಮತ್ತು ವೇಗವನ್ನು ನೀಡುವ ಗುರಿಯನ್ನು ಹೊಂದಿದೆ. ಇಸ್ರೊ ವಿಜ್ಞಾನಿಗಳು ಕಳೆದ ಆರು ದಶಕ ಗಳಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಸದಾ ಎತ್ತಿ ಹಿಡಿಯುತ್ತಾ ಬಂದಿದ್ದಾರೆ.
ಇಸ್ರೊ ಸಾಧನೆ ಇಲ್ಲದೇ ಹೋಗಿದ್ದರೆ ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದು ವರಿಯುವುದು ಸಾಧ್ಯವೇ ಇರಲಿಲ್ಲ. ವಿಶ್ವದ ಇತರ ದೇಶಗಳ ಉಡ್ಡಯನ ವೈಫಲ್ಯಕ್ಕೆ ಹೋಲಿಸಿದರೆ ನಮ್ಮ ವೈಫಲ್ಯ ತೀರಾ ನಗಣ್ಯ. ಮಿತವ್ಯಯದ ಬಾಹ್ಯಾಕಾಶ ಸಂಶೋಧನೆ, ಪ್ರಯೋಗ ಗಳಲ್ಲೂ ಇಸ್ರೊ ಸದಾ ಮುಂಚೂಣಿಯಲ್ಲಿ ನಿಂತಿದೆ.
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕೂಡ ಇಸ್ರೊ ಸಹಾಯ ಯಾಚಿಸಿರುವುದು ನಮ್ಮ ವಿಜ್ಞಾನಿಗಳ ಕಾರ‍್ಯದಕ್ಷತೆಗೆ ಸಾಕ್ಷಿ. ಮುಂದಿನ ದಿನಗಳಲ್ಲಿ ಇಸ್ರೊ ಗಗನ್‌ಯಾನ ಎ೧, ಚಂದ್ರ ಯಾನ 4, ಚಂದ್ರಯಾನ 5, ಶ್ರೀಹರಿಕೋಟಾದಲ್ಲಿ 3ನೇ ಉಡಾವಣಾ ಪ್ಯಾಡ್ ಹಲವಾರು ಯೋಜನೆ ಗಳನ್ನು ಹಮ್ಮಿಕೊಂಡಿದೆ. ಈ ಎಲ್ಲ ಯೋಜನೆಗಳಲ್ಲೂ ಇಸ್ರೊ ಯಶಸ್ಸು ಕಾಣಲಿ. ಈ ಸಾಧನೆ ನಮಗೆಲ್ಲರಿಗೂ ಸ್ಪೂರ್ತಿಯಾಗಲಿ.