BBK 12: ಹಾಕೋ ಬನಿಯನ್ ಕೂಡ ಕಂಡವರದ್ದೇ, ಎಲ್ಲರನ್ನ ಗಿಲ್ಲಿ ತುಳಿತಿದ್ರು; ಡಾಗ್ ಸತೀಶ್ ಆರೋಪ
ಡಾಗ್ ಸತೀಶ್ ʻಬಿಗ್ ಬಾಸ್ ಕನ್ನಡ ಸೀಸನ್ 12ʼರಿಂದ ಎಲಿಮಿನೇಟ್ ಆಗಿ ಮೂರು ವಾರಗಳೇ ಕಳೆದಿವೆ. ಮಾಧ್ಯಮಗಳ ಮುಂದೆ ಹೊಸ ಹೊಸ ಸ್ಟೇಟ್‌ಮೆಂಟ್ ನೀಡುತ್ತಿದ್ದಾರೆ. ಗಿಲ್ಲಿ ನಟನ ಮೇಲೆ ಹೊಸ ಆರೋಪ ಮಾಡಿದ್ದಾರೆ. ಈ ಮುಂಚೆ ಕೂಡ ಗಿಲ್ಲಿ(Gilli)ಅವರ ಬಟ್ಟೆ ವಿಚಾರಕ್ಕೆ ಅಶ್ವಿನಿ ಗೌಡ ಅವರು ಟಾಂಗ್ ಕೊಟ್ಟಿದ್ದರು. ಅದಕ್ಕೆ ಸುದೀಪ್ (Sudeep) ಕೂಡ ಸಖತ್ ಕ್ಲಾಸ್ ಕೂಡ ತೆಗೆದುಕೊಂಡಿದ್ದರು. ಆದರೀಗ ಡಾಗ್ ಸತೀಶ್ (Dog Satish) ಅವರು ಹೊಸ ಆರೋಪವನ್ನು ಮಾಡಿದ್ದಾರೆ.
bigg boss kannada -
ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಅತ್ಯಂತ ಆಕ್ಟಿವ್, ಹಾಗೇ ಸಖತ್ ಕಾಮಿಡಿ ಮಾಡ್ತಾ ಆಡೋದು ಅಂದ್ರೆ ಅದು ಗಿಲ್ಲಿ ಮಾತ್ರ. ಈ ಮುಂಚೆ ಕೂಡ ಗಿಲ್ಲಿ(Gilli)ಅವರ ಬಟ್ಟೆ ವಿಚಾರಕ್ಕೆ ಅಶ್ವಿನಿ ಗೌಡ ಅವರು ಟಾಂಗ್ ಕೊಟ್ಟಿದ್ದರು. ಅದಕ್ಕೆ ಸುದೀಪ್ (Sudeep) ಕೂಡ ಸಖತ್ ಕ್ಲಾಸ್ ಕೂಡ ತೆಗೆದುಕೊಂಡಿದ್ದರು. ಆದರೀಗ ಡಾಗ್ ಸತೀಶ್ (Dog Satish) ಅವರು ಹೊಸ ಆರೋಪವನ್ನು ಮಾಡಿದ್ದಾರೆ.
ಡಾಗ್ ಸತೀಶ್ ʻಬಿಗ್ ಬಾಸ್ ಕನ್ನಡ ಸೀಸನ್ 12ʼರಿಂದ ಎಲಿಮಿನೇಟ್ ಆಗಿ ಮೂರು ವಾರಗಳೇ ಕಳೆದಿವೆ. ಮಾಧ್ಯಮಗಳ ಮುಂದೆ ಹೊಸ ಹೊಸ ಸ್ಟೇಟ್‌ಮೆಂಟ್ ನೀಡುತ್ತಿದ್ದಾರೆ. ಗಿಲ್ಲಿ ನಟನ ಮೇಲೆ ಹೊಸ ಆರೋಪ ಮಾಡಿದ್ದಾರೆ.
ತುಂಬಾ ಕೆಟ್ಟ ಬುದ್ದಿ
ಮಾಧ್ಯಮವೊಂದರಲ್ಲಿ ನಟ ಮಾತನಾಡಿ, ʻರಕ್ಷಿತಾ ವಿನ್ನರ್ ಆಗಿ ಗಿಲ್ಲಿ ರನ್ನರ್‌ಅಪ್ ಆಗ್ತಾರೆ. ಒಳಗಡೆ ತುಂಬಾ ತರಲೆ ಕೆಲಸ ಮತ್ತು ಕಳ್ಳತನ ಮಾಡ್ತಿದ್ದಾರೆ. ಅವರಿಗೆ ತುಂಬಾ ಕೆಟ್ಟ ಬುದ್ದಿ ಇದೆ. ಆದರೆ, ಗಿಲ್ಲಿ ಮಜಾ ಮಾಡೋದು ಮಾತ್ರ ತೋರಿಸ್ತಿದ್ದಾರೆ. ನಾನೇನಾದರೂ ಮಾತಾಡೋಕೆ ಹೇ.. ಥೂ ಅನ್ನೋದು. ನಮಗೆ ಒಂದು ರೀತಿ ಅವಮಾನ ಮಾಡ್ತಿದ್ರು ಗಿಲ್ಲಿ.
ಇದನ್ನೂ ಓದಿ: BBK 12: ʻಹಳ್ಳಿ ಹುಡುಗನ ಗತ್ತು, ಗಮ್ಮತ್ತು, ತಾಕತ್ತು ತೋರಿಸಿಯೇ ತೋರಿಸುತ್ತೇನೆʼ; ಮಾಳು ಖಡಕ್ ಮಾತು!
ಟ್ರೈನ್ಡ್ ಆಗಿ ಬಂದಿದ್ದಾರೆ
ಇವರೆಲ್ಲಾ ಟ್ರೈನ್ಡ್ ಆಗಿ ಬಂದಿದ್ದಾರೆ. ಆಚೆ ಸೋಶಿಯಲ್ ಮೀಡಿಯಾ ಹ್ಯಾಂಡ್ಲರ್ ಹೇಳಿಕೊಟ್ಟಿದ್ದಾರೆ. ನೀವು ಮಾತಾಡಿದ್ರೆ ನಿಮ್ಮನ್ನ ತೋರಿಸ್ತಾರೆ. ನೀವು ಮಾತಾಡಲಿಲ್ಲ ಅಂದರೆ ನಿಮ್ಮನ್ನ ತೋರಿಸಲ್ಲ ಅಂತ. ಕಳ್ಳತನ ಅಂತೂ ನನ್ನದು ಹೆವಿ ಮಾಡಿ ಬಿಟ್ಟಿದ್ದಾರೆ. ಅದು ಏನೇನು ಅಂತ ಹೇಳೋ ಹಾಗಿಲ್ಲ. ನಾನು ಬಟ್ಟೆ ತರಲ್ಲ ಏನೂ ಇಲ್ಲ, ಇಲ್ಲಿ ಇರುವವರದ್ದೇ ಕಿತ್ತುಕೊಂಡು ಹಾಕಿಕೊಳ್ಳೋಣ ಅನ್ನೋ ಬುದ್ದಿ ಗಿಲ್ಲಿಯದ್ದು. ಅವರು ಹಾಕಿದ್ದ ಅಷ್ಟು ಬಟ್ಟೆಗಳು ಇರೋ ಬರೋವರದ್ದೇ. ಅವರು ಒಂದೆರಡ್ಮೂರು ಬಟ್ಟೆಗಳನ್ನ ತಂದಿರಬಹುದು. ಬಿಟ್ರೆ, ಅವರು ಹಾಕೋ ಬನಿಯನ್ ಕೂಡ ಕಂಡವರದ್ದೇ ಎಂದು ಹೇಳಿಕೆ ನೀಡಿದ್ದಾರೆ.
ಆದರೆ ಈ ಆರೋಪ ಎಷ್ಟರ ಮಟ್ಟಿಗೆ ಸರಿ ಎನ್ನೋದು ಅವರಿಗೆ ಮಾತ್ರ ಗೊತ್ತು. ಇದೀಗ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಗಿಲ್ಲಿ ಫ್ಯಾನ್ಸ್ ಕೂಡ ಗರಂ ಆಗಿದ್ದಾರೆ.
ಡಾಗ್ ಸತೀಶ್ ಹಿನ್ನೆಲೆ
ಸತೀಶ್ ಡಾಗ್ ಬ್ರೀಡರ್. ಬೀದಿ ನಾಯಿಗಳು, ಕ್ರಾಸ್ ಬ್ರೀಡ್ ಎಂದು ವಿವಿಧ ರೀತಿಯ ನಾಯಿಯನ್ನು ಖರೀದಿಸುತ್ತಾರೆ. ಒಂದು ನಾಯಿ ಖರೀದಿ ಮಾಡೋದು, ಆಮೇಲೆ ಅದನ್ನು ಮಾರೋದು, ಅದರಿಂದ ಇನ್ನೊಂದು ನಾಯಿ ತಗೊಳೋದು ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸತೀಶ್, ತಮ್ಮನ್ನ ʻವಿಶ್ವದ ನಂ.1 ಸೆಲೆಬ್ರಿಟಿ ಡ್ರಾಗ್ ಬ್ರೀಡರ್ʼ, ʻಗ್ಲೋಬಲ್ ಸೂಪರ್‌ಸ್ಟಾರ್ʼ ಎಂದು ಕರೆದುಕೊಳ್ಳುತ್ತಾರೆ.
ಇದನ್ನೂ ಓದಿ: BBK 12: ಜಾಹ್ನವಿ-ಅಶ್ವಿನಿನ ಹತ್ತಿರ ಮಾಡ್ತಾ ಪತ್ರ? ಅಪ್ಪನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ
ಸತೀಶ್ ಅವರ ಬಳಿ 100 ಕೋಟಿ ರೂಪಾಯಿ ನಾಯಿ ಇದೆ ಎನ್ನಲಾಗಿದೆ. ಕತ್ತೆಯಷ್ಟು ಸೈಜ್ ಇದೆ ಎಂದು ಆ ನಾಯಿಗೆ 100 ಕೋಟಿ ರೂಪಾಯಿ ಬೆಲೆ ಕಟ್ಟಲಾಗಿದೆಯಂತೆ ಎಂದು ಅವರೇ ತಿಳಿಸಿದ್ದರು.