Vishwavani Editorial: ಕಾಲ್ತುಳಿತದ ಸಾವು ದುರದೃಷ್ಟಕರ
10 ಕೋಟಿಗೂ ಹೆಚ್ಚು ಜನರು ಸೇರುವ ಇಂತಹ ಸ್ಥಳದಲ್ಲಿ ಕಾಲ್ತುಳಿತ ಘಟನೆಗಳು ಅನಿರೀಕ್ಷಿತ ವೇನಲ್ಲ. 1954ರಲ್ಲಿ ನಡೆದ ಪ್ರಯಾಗ ಕುಂಭಮೇಳದ ಸಮಯದಲ್ಲಿ ಪ್ರಧಾನಿ ಜವಹರಲಾಲ್ ನೆಹರೂ ಅವರನ್ನು ಕಾಣಲು ನೂಕುನುಗ್ಗಲು ಉಂಟಾಗಿ ನೂರಾರು ಮಂದಿ ಮೃತಪಟ್ಟಿದ್ದರು. ಈ ಬಾರಿ ಉತ್ತರ ಪ್ರದೇಶ ಸರಕಾರ ಸರ್ವ ಸಿದ್ಧತೆಗಳನ್ನು ಮಾಡಿದ ಬಳಿಕವೂ ದುರ್ಘಟನೆ ಸಂಭವಿಸಿ ರುವುದು ನೋವಿನ ವಿಚಾರ
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾಕುಂಭದಲ್ಲಿ ಮೌನಿ ಅಮಾವಾಸ್ಯೆಯಾದ ಜನವರಿ 29ರಂದು ಕಾಲ್ತುಳಿತದಲ್ಲಿ 30ಕ್ಕೂ ಹೆಚ್ಚು ಮಂದಿ ಭಕ್ತರು ಗಾಯಗೊಂಡು ನೂರಾರು ಮಂದಿ ಗಾಯಗೊಂಡಿರುವುದು ದುರದೃಷ್ಟಕರ ವಿದ್ಯಮಾನ.
10 ಕೋಟಿಗೂ ಹೆಚ್ಚು ಜನರು ಸೇರುವ ಇಂತಹ ಸ್ಥಳದಲ್ಲಿ ಕಾಲ್ತುಳಿತ ಘಟನೆಗಳು ಅನಿರೀಕ್ಷಿತ ವೇನಲ್ಲ. 1954ರಲ್ಲಿ ನಡೆದ ಪ್ರಯಾಗ ಕುಂಭಮೇಳದ ಸಮಯದಲ್ಲಿ ಪ್ರಧಾನಿ ಜವಹರಲಾಲ್ ನೆಹರೂ ಅವರನ್ನು ಕಾಣಲು ನೂಕುನುಗ್ಗಲು ಉಂಟಾಗಿ ನೂರಾರು ಮಂದಿ ಮೃತಪಟ್ಟಿದ್ದರು. ಈ ಬಾರಿ ಉತ್ತರ ಪ್ರದೇಶ ಸರಕಾರ ಸರ್ವ ಸಿದ್ಧತೆಗಳನ್ನು ಮಾಡಿದ ಬಳಿಕವೂ ದುರ್ಘಟನೆ ಸಂಭವಿಸಿ ರುವುದು ನೋವಿನ ವಿಚಾರ.
ಇದನ್ನೂ ಓದಿ: Vishwavani Editorial: ದ್ವಿಪಕ್ಷೀಯ ಬಾಂಧವ್ಯ ಗಟ್ಟಿಯಾಗಲಿ
ಈ ದುರ್ಘಟನೆಯಲ್ಲಿ ಬೆಳಗಾವಿಯ ತಾಯಿ-ಮಗಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಪವಿತ್ರ ಸ್ನಾನದ ಹೆಸರಿನಲ್ಲಿ ಪುಣ್ಯಸ್ಥಳಕ್ಕೆ ಹೋದವರು ಈ ರೀತಿ ಬಾರದ ಲೋಕಕ್ಕೆ ಹೋಗಿರು ವುದು ಅವರ ಆಪ್ತೇಷ್ಟರಿಗೆ ನಿಜಕ್ಕೂ ಆಘಾತಕಾರಿ ಸುದ್ದಿ. ಇತ್ತೀಚೆಗಷ್ಟೇ ತಿರುಪತಿಯಲ್ಲಿ ಆರು ಮಂದಿ ನೂಕುನುಗ್ಗಲಿನಲ್ಲಿ ಸಿಲುಕಿ ಮೃತಪಟ್ಟಿದ್ದರು. ಇಂತಹ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳಿ ಗಿಂತಲೂ, ಜನರು ಹೆಚ್ಚು ಜಾಗರೂಕರಾಗಿ, ವಿವೇಕದಿಂದ ವರ್ತಿಸಬೇಕಾಗಿದೆ.
ಪ್ರಯಾಗದಲ್ಲಿ ನಾಗಾ ಸಾಧುಗಳನ್ನು ಮೊದಲು ಸ್ನಾನ ಘಟ್ಟಕ್ಕೆ ಬಿಡಲು ಗೇಟ್ ತೆರೆದಾಗ ಉಳಿ ದವರು ಒಟ್ಟಿಗೇ ನುಗ್ಗಿದ್ದು ದುರಂತಕ್ಕೆ ಕಾರಣವಾಯಿತೆಂದು ಹೇಳಲಾಗಿದೆ. ಧಾರ್ಮಿಕ ಸ್ಥಳವಾ ಗಲಿ, ಪ್ರವಾಸೀ ಸ್ಥಳವಾಗಲಿ ಅಲ್ಲಿ ಎದುರಾಗಬಹುದಾದ ಸನ್ನಿವೇಶಗಳ ಬಗ್ಗೆ ಸ್ವಲ್ಪವಾದರೂ ತಿಳಿದುಕೊಂಡಿರಬೇಕು.
ಅಲ್ಲಿನ ಶಿಸ್ತು, ನಿಯಮಗಳನ್ನು ಪಾಲಿಸಬೇಕು. ಕುಂಭ ಮೇಳಕ್ಕೆ ದೇಶದೆಲ್ಲೆಡೆಯಿಂದ ೧೦ ಕೋಟಿ ಗಿಂತ ಹೆಚ್ಚು ಜನರು ಆಗಮಿಸುತ್ತಿರುವ ವಿಚಾರ ಉತ್ತರಪ್ರದೇಶ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ತಿಳಿದಿತ್ತು. ಇದಕ್ಕೆ ಪೂರ್ವಭಾವಿಯಾಗಿ ಅನುಸರಿಸಬೇಕಾದ ನಿಯಮಗಳನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕಿತ್ತು. ಇಂತಹ ಸ್ಥಳಗಳಲ್ಲಿ ನೂಕು ನುಗ್ಗಲು ಉಂಟಾದಾಗ ಜೀವಾಪಾಯದಿಂದ ಪಾರಾಗುವ ಸರಳ ತಂತ್ರಗಳ ಬಗ್ಗೆಯೂ ಜನರಿಗೆ ತರಬೇತಿ ನೀಡುವ ಅವಶ್ಯಕತೆ ಇದೆ. ಈ ಹಿಂದಿನ ತಪ್ಪುಗಳಿಂದ ಪಾಠ ಕಲಿತು ಮುಂದೆ ಇಂತಹ ದುರ್ಘಟನೆಗಳು ಆಗದಂತೆ ತಡೆಯುವುದು ಸರಕಾ ರದ ಕರ್ತವ್ಯ.