ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ರಕ್ಷಕನೇ ಭಕ್ಷನಾದರೆ ಗತಿಯೇನು?

ಫರೂಕಾಬಾದ್‌ನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣವು ಇದಕ್ಕಿಂತ ಘೋರ ವಾದುದು, ಕಾರಣ ಇದನ್ನು ಎಸಗಿದಾತ ‘ಜನರಕ್ಷಕ’ ಎಂದೇ ಕರೆಸಿಕೊಳ್ಳುವ ಒಬ್ಬ ಪೊಲೀಸ್ ಪೇದೆ. ಶಾಲೆಗೆ ತೆರಳುತ್ತಿದ್ದ 15ರ ಬಾಲಕಿಯನ್ನು ಈತ ರಸ್ತೆಯಲ್ಲೇ ಅಡ್ಡಗಟ್ಟಿ ಕಾರಿನಲ್ಲಿ ಅಪಹರಿಸಿ ತನ್ನ ತೃಷೆಯನ್ನು ತೀರಿಸಿ ಕೊಂಡಿದ್ದಾನೆ ಎಂಬುದು ಲಭ್ಯ ಮಾಹಿತಿ.

ರಕ್ಷಕನೇ ಭಕ್ಷನಾದರೆ ಗತಿಯೇನು?

-

Ashok Nayak Ashok Nayak Jul 5, 2025 7:25 AM

ಮಹಾರಾಷ್ಟ್ರದ ಪುಣೆ ಮತ್ತು ಉತ್ತರ ಪ್ರದೇಶದ ಫರೂಕಾಬಾದ್ ನಿಂದ ಎರಡು ಅತ್ಯಾಚಾರದ ಘಟನೆಗಳು ವರದಿಯಾಗಿವೆ. ಈ ಪೈಕಿ ಪುಣೆಯಲ್ಲಿ, ಕೊರಿಯರ್ ನೀಡುವ ನೆಪದಲ್ಲಿ ಯುವತಿ ಯೊಬ್ಬಳ ಅಪಾರ್ಟ್‌ಮೆಂಟ್ ಒಳಗೆ ಪ್ರವೇಶಿಸಿದ ದುಷ್ಕರ್ಮಿಯು ಆಕೆಯ ಮೇಲೆ ಅದೇನೋ ರಾಸಾಯನಿಕವನ್ನು ಸಿಂಪಡಿಸಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದಾನೆ ಮತ್ತು ತರುವಾಯದಲ್ಲಿ ಸಂತ್ರಸ್ತೆಯ ಮೊಬೈಲ್ ಫೋನನ್ನೇ ಬಳಸಿ ಸೆಲಿ ತೆಗೆದು, ‘ಮತ್ತೆ ಬರುವೆ’ ಎಂಬ ಬೆದರಿಕೆಯನ್ನೂ ಹಾಕಿದ್ದಾನೆ.

ಮತ್ತೊಂದೆಡೆ, ಫರೂಕಾಬಾದ್‌ನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣವು ಇದಕ್ಕಿಂತ ಘೋರ ವಾದುದು, ಕಾರಣ ಇದನ್ನು ಎಸಗಿದಾತ ‘ಜನರಕ್ಷಕ’ ಎಂದೇ ಕರೆಸಿಕೊಳ್ಳುವ ಒಬ್ಬ ಪೊಲೀಸ್ ಪೇದೆ. ಶಾಲೆಗೆ ತೆರಳುತ್ತಿದ್ದ 15ರ ಬಾಲಕಿಯನ್ನು ಈತ ರಸ್ತೆಯಲ್ಲೇ ಅಡ್ಡಗಟ್ಟಿ ಕಾರಿನಲ್ಲಿ ಅಪಹರಿಸಿ ತನ್ನ ತೃಷೆಯನ್ನು ತೀರಿಸಿಕೊಂಡಿದ್ದಾನೆ ಎಂಬುದು ಲಭ್ಯ ಮಾಹಿತಿ.

ಇದನ್ನೂ ಓದಿ: Vishwavani Editorial: ಮತ್ತೆ ಬಾಲ ಬಿಚ್ಚಿದ ಬಿಲಾವಲ್

ಈ ಎರಡೂ ಘಟನೆಗಳು ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದರ ಘೋರ ಚಿತ್ರಣವನ್ನು ನೀಡು ತ್ತವೆ ಎನ್ನಲಡ್ಡಿಯಿಲ್ಲ. ‘ಮಹಿಳೆಯೊಬ್ಬಳು ಮಧ್ಯರಾತ್ರಿಯಲ್ಲಿ ಒಂಟಿಯಾಗಿ ಬೀದಿಯಲ್ಲಿ ನಿರ್ಭೀತಿ ಯಿಂದ ಓಡಾಡುವಂತಾದರೆ ಆಗ ಭಾರತಕ್ಕೆ ನಿಜಾರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿದೆ ಎಂದರ್ಥ’ ಎಂದಿದ್ದರು ಮಹಾತ್ಮ ಗಾಂಧೀಜಿ.

ಆದರೆ ಮೇಲಿನ ಎರಡೂ ಪ್ರಕರಣಗಳನ್ನು ಗಮನಿಸಿದರೆ, ಮಧ್ಯರಾತ್ರಿಯಲ್ಲ, ರಾತ್ರಿಯಲ್ಲ, ಸಂಜೆ ಯಲ್ಲ, ಹಾಡುಹಗಲಲ್ಲೇ ಮಹಿಳೆಯೊಬ್ಬಳು ಸ್ವತಂತ್ರವಾಗಿ ಓಡಾಡುವುದು ದುಸ್ತರವಾಗಿದೆ ಎನಿಸು ತ್ತದೆ. ಇಂಥ ಕುಕೃತ್ಯವನ್ನು ಎಸಗುವ ದುರುಳರಿಗೆ ಕಟ್ಟುನಿಟ್ಟಿನ ಕಾನೂನಿನ ಮತ್ತು ಶಿಕ್ಷೆಯ ಭಯ ವಿಲ್ಲದಿರುವುದೇ, ಅತ್ಯಾಚಾರದಂಥ ಪ್ರಕರಣಗಳು ದೇಶದ ವಿವಿಧೆಡೆ ಇನ್ನೂ ನಡೆಯುತ್ತಿರುವು ದಕ್ಕೆ ಕಾರಣವಾಗಿದೆ ಎನಿಸುತ್ತದೆ.

ದೆಹಲಿಯಲ್ಲಿ ‘ನಿರ್ಭಯಾ’ ಪ್ರಕರಣ ವರದಿಯಾದ ನಂತರ ದೇಶದ ಒಂದಿಡೀ ನಾಗರಿಕ ಸಮಾಜ ತಲೆತಗ್ಗಿಸಿತ್ತು. ಆದರೀಗ ಪುಣೆ ಮತ್ತು ಫರೂಕಾಬಾದ್‌ನಲ್ಲಿ ನಡೆದಿರುವ ಈ ಕೃತ್ಯಗಳು ನಾಗರಿಕ ಸಮಾಜವು ಮತ್ತೆ ತಲೆಯೆತ್ತದಂತೆ ಮಾಡಿವೆ.