ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಹೆಸರಿಗಿಂತ ಕೆಲಸ ಮುಖ್ಯ

ಕೇಂದ್ರ ಸರಕಾರದ ಈ ಹೊಸ ಮಸೂದೆ ‘ವಿಕಸಿತ ಭಾರತ-ಉದ್ಯೋಗ ಮತ್ತು ಜೀವನೋಪಾಯ ಕ್ಕಾಗಿ ಖಾತರಿ ಮಿಷನ್ (ಗ್ರಾಮೀಣ)’ ಎಂಬ ಹೆಸರಿನಿಂದ ಕರೆಯಲ್ಪಡಲಿದೆ. ಇದನ್ನು ಸಂಕ್ಷಿಪ್ತ ವಾಗಿ ‘ವಿಬಿ ಜಿ ರಾಮ್ ಜಿ’ ಎನ್ನಲಾಗುತ್ತದೆ. ಮಸೂದೆ ಅಂಗೀಕಾರವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಸಂಸದರು ಸಂಸತ್ತಿಗೆ ಹಾಜರಾಗುವಂತೆ ವಿಪ್ ಹೊರಡಿಸಲಾಗಿದ್ದು, ಇದು ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಕೆಲಸವನ್ನು ಖಾತರಿಪಡಿಸುತ್ತದೆ

ಇದೀಗ ನಡೆಯುತ್ತಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿನರೇಗಾ) ಬದಲಿಗೆ ಹೊಸ ಹೆಸರಿನ ಮಸೂದೆಯನ್ನು ಪರಿಚಯಿಸಿದೆ. 2005ರಲ್ಲಿ ಅಂದಿನ ಮನಮೋಹನ್ ಸಿಂಗ್ ಅವರ ಯುಪಿಎ ಸರಕಾರವು ನರೇಗಾ ಯೋಜನೆಯನ್ನು ಜಾರಿಗೆ ತಂದಿತ್ತು. 2009ರಲ್ಲಿ ಇದಕ್ಕೆ ಎಂಜಿನರೇಗಾ ಎಂದು ಮರುನಾಮಕರಣ ಮಾಡಲಾಗಿತ್ತು, ಆದರೆ ಇದೀಗ ಮೂರನೇ ಬಾರಿ ಯೋಜನೆಯ ಹೆಸರು ಬದಲಾವಣೆಗೆ ಮೋದಿ ಸರಕಾರ ಸಿದ್ಧತೆ ನಡೆಸಿದೆ.

ಕೇಂದ್ರ ಸರಕಾರದ ಈ ಹೊಸ ಮಸೂದೆ ‘ವಿಕಸಿತ ಭಾರತ-ಉದ್ಯೋಗ ಮತ್ತು ಜೀವನೋ ಪಾಯಕ್ಕಾಗಿ ಖಾತರಿ ಮಿಷನ್ (ಗ್ರಾಮೀಣ)’ ಎಂಬ ಹೆಸರಿನಿಂದ ಕರೆಯಲ್ಪಡಲಿದೆ. ಇದನ್ನು ಸಂಕ್ಷಿಪ್ತವಾಗಿ ‘ವಿಬಿ ಜಿ ರಾಮ್ ಜಿ’ ಎನ್ನಲಾಗುತ್ತದೆ. ಮಸೂದೆ ಅಂಗೀಕಾರವನ್ನು ಖಚಿತ ಪಡಿಸಿಕೊಳ್ಳಲು ಬಿಜೆಪಿ ಸಂಸದರು ಸಂಸತ್ತಿಗೆ ಹಾಜರಾಗುವಂತೆ ವಿಪ್ ಹೊರಡಿಸಲಾಗಿದ್ದು, ಇದು ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಕೆಲಸವನ್ನು ಖಾತರಿಪಡಿಸುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ.

ಇದನ್ನೂ ಓದಿ: Vishwavani Editorial: ಅಂದು ‘ನೋವಾ’, ಮೊನ್ನೆ ‘ಹನುಕ್ಕಾ’

ಆದರೆ ಈ ಹೆಸರು ಬದಲಾವಣೆಯ ಕೇಂದ್ರ ಸರಕಾರದ ನಿರ್ಧಾರವನ್ನು ಯುಪಿಎ ಮಿತ್ರ ಪಕ್ಷಗಳು ಒಗ್ಗಟ್ಟಾಗಿ ಟೀಕಿಸಿವೆ. ಯಾವುದೇ ಜನಪ್ರಿಯ ಯೋಜನೆಯಾಗಲಿ, ಅದರ ಹೆಸರು ಸರಳವಾಗಿರು ವುದು ಬಹಳ ಮುಖ್ಯ. ಕೇಂದ್ರ ಸರಕಾರದ ಈ ನಿರ್ಧಾರದಿಂದ ಯೋಜನೆಯ ಹೆಸರು ಸಂಕೀರ್ಣ ವಾಗಲಿದೆ. ಆ ಕಾರಣಕ್ಕಾಗಿ ಹೆಸರಿಗಿಂತ ಕೆಲಸ ಮುಖ್ಯ ಎಂಬುವುದನ್ನು ಕೇಂದ್ರ ಸರಕಾರ ಇಂತಹ ಸಂದರ್ಭದಲ್ಲಿ ಮನಗಾಣಬೇಕಿದೆ.

ಸರಕಾರದ ಒಂದು ಉತ್ತಮ ಕೆಲಸವು ಯಾವಾಗಲೂ ಜನಮಾನಸದಲ್ಲಿ ಆಗಾಗ ನೆನಪಾಗು ತ್ತಿರುತ್ತದೆ, ಆದರೆ ಅನಗತ್ಯವಾದ ಹೆಸರು ಬದಲಾವಣೆ ಜನಸಾಮಾನ್ಯರಿಗೆ ಎಂದಿಗೂ ಪ್ರಸ್ತುತ ಎನಿಸುವು ದಿಲ್ಲ.