Vishwavani Editorial: ಅಂದು ‘ನೋವಾ’, ಮೊನ್ನೆ ‘ಹನುಕ್ಕಾ’
ಆಸ್ಟ್ರೇಲಿಯಾದ ಕರಾವಳಿ ಪ್ರದೇಶದಲ್ಲಿ ಆಚರಿಸಲಾಗುತ್ತಿದ್ದ ‘ಹನುಕ್ಕಾ’ ಹಬ್ಬದ ಸಂದರ್ಭವನ್ನು. ಆ ವೇಳೆ ವಾರಾಂತ್ಯ ರಜೆಯಲ್ಲಿ ವಿಹರಿಸುತ್ತಿದ್ದ ಯೆಹೂದಿ ಗಳ ಮೇಲೆ ಬೇಕಾಬಿಟ್ಟಿ ಗುಂಡಿನ ಮಳೆಗರೆದ ಉಗ್ರರು, ತಾವು ‘ರಕ್ತಬೀಜಾಸುರನ ಸಂತತಿ’ ಎಂಬು ದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
-
ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ’ ಎಂದಿದ್ದಾರೆ ಪುರಂದರ ದಾಸರು. ಯಮದೂತರಿಗೆ ಸ್ವಲ್ಪವೂ ಕರುಣೆ ಇರುವುದಿಲ್ಲ, ಯಾವಾಗ ಬೇಕಿದ್ದರೂ ಅವರು ನಮ್ಮ ಪ್ರಾಣವನ್ನು ಹೊತ್ತೊಯ್ಯ ಬಹುದು. ಆದ್ದರಿಂದ ಬದುಕಿನ ಕ್ಷಣಿಕ ಸುಖಗಳಲ್ಲಿ ಸಮಯವನ್ನು ವ್ಯರ್ಥಮಾಡದೆ ಶ್ರೀಹರಿ ಯನ್ನು ಸ್ಮರಿಸಬೇಕು ಎಂಬುದು ಈ ಗೀತೆಯಲ್ಲಿ ಅಡಗಿರುವ ದಾಸರ ಸದಾಶಯ. ಈ ಸಾಲು ನೆನಪಾಗಲಿಕ್ಕೆ ಕಾರಣರಾದವರು ಮತ್ತದೇ ಉಗ್ರರು.
ಹೌದು, ಇಸ್ರೇಲ್‌ನಲ್ಲಿ ೨ ವರ್ಷಗಳ ಹಿಂದೆ ‘ನೋವಾ ಸಂಗೀತ ಉತ್ಸವ’ದಲ್ಲಿ ಖುಷಿಯಿಂದ ಪಾಲ್ಗೊಂಡಿದ್ದ ಜನರ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು ನೂರಾರು ಜನರನ್ನು ತರಿದು ಹಾಕಿದರು, ಸಾಕಷ್ಟು ಜನರನ್ನು ಒತ್ತೆಯಾಳಾಗಿಸಿಕೊಂಡರು. ಈ ಕೆಟ್ಟ ಕನಸು ಮನದಾಳದಲ್ಲಿನ್ನೂ ಹಸಿಹಸಿಯಾಗಿರುವಾಗಲೇ ಉಗ್ರರು ಮತ್ತೊಮ್ಮೆ ಮೊನ್ನೆ ಪೈಶಾಚಿಕ ಕೃತ್ಯವನ್ನು ಮೆರೆದಿದ್ದಾರೆ.
ಇದನ್ನೂ ಓದಿ: Vishwavani Editorial: ಎಡವಟ್ಟನಿಗೆ ಎದುರೇಟು
ಈ ಬಾರಿ ಅವರು ಆರಿಸಿಕೊಂಡಿದ್ದು ಆಸ್ಟ್ರೇಲಿಯಾದ ಕರಾವಳಿ ಪ್ರದೇಶದಲ್ಲಿ ಆಚರಿಸಲಾಗುತ್ತಿದ್ದ ‘ಹನುಕ್ಕಾ’ ಹಬ್ಬದ ಸಂದರ್ಭವನ್ನು. ಆ ವೇಳೆ ವಾರಾಂತ್ಯ ರಜೆಯಲ್ಲಿ ವಿಹರಿಸುತ್ತಿದ್ದ ಯೆಹೂದಿ ಗಳ ಮೇಲೆ ಬೇಕಾಬಿಟ್ಟಿ ಗುಂಡಿನ ಮಳೆಗರೆದ ಉಗ್ರರು, ತಾವು ‘ರಕ್ತಬೀಜಾಸುರನ ಸಂತತಿ’ ಎಂಬು ದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ತಮ್ಮ ಕುತ್ಸಿತ ಚಿಂತನೆಯನ್ನು ಕೈಗೂಡಿಸಿಕೊಳ್ಳಲು ಸಾರ್ವಜನಿಕ ಉತ್ಸವಗಳು, ಹಬ್ಬಗಳು, ಸಂಭ್ರಮಾಚರಣೆಗಳ ಸಂದರ್ಭವನ್ನೇ ಈ ದುರುಳರು ಆರಿಸಿಕೊಳ್ಳುತ್ತಿದ್ದಾರೆ; ಪ್ರಾಯಶಃ ಇದು ಅವರ ಕಾರ್ಯತಂತ್ರದ ವಿಕೃತ ಮುಖವೂ ಆಗಿದ್ದೀತು. ಉಗ್ರವಾದವನ್ನು ಮತ್ತು ಉಗ್ರವಾದಿಗಳನ್ನು ಬೇರುಸಮೇತ ಕಿತ್ತೊಗೆಯಲು ಒಂದಿಡೀ ಜಗವೇ ಏಕೆ ಸಂಕಲ್ಪಿಸಬೇಕಿದೆ ಎಂಬುದಕ್ಕೆ ಇಂಥ ಘಟನೆಗಳು ಪುರಾವೆ ಒದಗಿಸಬಲ್ಲವು. ಇಲ್ಲವಾದಲ್ಲಿ ಈ ರಕ್ತಬೀಜಾಸುರನ ಸಂತತಿಗಳು ವಿಶ್ವದ ಶಾಂತಿ-ನೆಮ್ಮದಿಗೇ ಕೊಳ್ಳಿ ಇಡುವ ದಿನಗಳು ದೂರವಿಲ್ಲ....