ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಅತ್ಯಗತ್ಯ

ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಅತ್ಯಗತ್ಯ

Profile Vishwavani News September 26, 2019
ಕಳಕಳಿ ಪ್ರಹ್ಲಾಾದ್ ವಾಸುದೇವ ಪತ್ತಾಾರ, ಶಿಕ್ಷಕ, ಕಲಬುರಗಿ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಳ್ಳುವುದಕ್ಕಿಿಂತ, ದುರುಪಯೋಗ ಮಾಡಿಕೊಳ್ಳುವುದೇ ಹೆಚ್ಚಾಾಗಿದೆ. ಯಾರದೋ ಹೆಸರಿನಲ್ಲಿ ಇನ್ನಾಾರೋ ಅಕೌಂಟ್ ಸೃಷ್ಟಿಿಕೊಂಡು ಸಮಾಜದಲ್ಲಿ ಶಾಂತಿ ಕದಡುವ, ಮೌಢ್ಯ ಬಿತ್ತುವ, ವ್ಯಕ್ತಿಿಯ ತೇಜೋವಧೆ ಮಾಡುವ, ಅವಹೇಳನಕಾರಿಯಾದ, ಭಯ ಹುಟ್ಟಿಿಸುವ, ಹಿಂಸಾತ್ಮಕವಾದ, ಅಶ್ಲೀಲವಾದ, ವಿಡಿಯೋ, ಪೋಸ್‌ಟ್‌‌ಗಳನ್ನು ಹಾಕುತ್ತಿಿದ್ದಾರೆ. ಇದು ಸಮಾಜದ ಸ್ವಾಾಸ್ಥ್ಯ ಹಾಳುಮಾಡುತ್ತಿಿದೆ. ದೇಶದ ಭದ್ರತೆಗೆ ಮಾರಕವಾದ ಕೋಮು ಪ್ರಚೋದನಕಾರಿಯಾದ, ಧಾರ್ಮಿಕ ಅಸಹಿಷ್ಣುತೆಯನ್ನುಂಟು ಮಾಡುವ ಕಾನೂನು ಸುವ್ಯವಸ್ಥೆೆ ಹದಗೆಡಿಸುವ ಹೇಳಿಕೆಗಳು, ವಿಡಿಯೋಗಳು ಶೇರ್ ಮಾಡುವುದು ಕಾನೂನಿನ ಪ್ರಕಾರ ಅಪರಾಧ. ಆದರೆ ಇಂದಿನವರೆಗೂ ಇಂಥ ಪ್ರಕರಣಗಳು ಗಂಭೀರ ಸ್ವರೂಪ ಪಡೆದುಕೊಂಡಿಲ್ಲ. ಗುರುತರವಾದ ಆರೋಪದಡಿ ಯಾರನ್ನು ಬಂಧಿಸಿಲ್ಲ, ಕಠಿಣ ಶಿಕ್ಷೆಯೂ ಆಗಿಲ್ಲ. ಸಾಮಾಜಿಕ ಜಾಲತಾಣಗಳ ಬಳಕೆ ಯುವ ಜನಾಂಗದಲ್ಲಿ ಇದೊಂದು ಗೀಳಾಗಿ ಪರಿಣಮಿಸಿದೆ. ಮುಂದೆ ಇದು ಸಾಮಾಜಿಕ ಸಮಸ್ಯೆೆಯಾಗಿ ಕಾಡುವ ಎಲ್ಲಾ ಲಕ್ಷಣಗಳೂ ಕಾಣುತ್ತಿಿವೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಸಾಮಾಜಿಕ ಜಾಲತಾಣಗಳ ಬಳಕೆ ಕಡಿವಾಣದ ಕುರಿತು ಸರಕಾರಕ್ಕೆೆ ಅಭಿಪ್ರಾಾಯ ಕೇಳಿದೆ. ಸರಕಾರವು ಇದು ಅತ್ಯಂತ ಮಹತ್ವದ ಗಂಭೀರ ವಿಚಾರವೆಂದು ಪರಿಗಣಿಸಬೇಕಿದೆ. ಮುಗ್ಧರು, ಅಮಾಯಕರು, ಮಹಿಳೆಯರು, ಸಣ್ಣ ಮಕ್ಕಳು, ಗೊತ್ತಿಿದ್ದೋೋ, ಗೊತ್ತಿಿಲ್ಲದೆಯೋ ಅನೇಕ ಸಮಸ್ಯೆೆಗಳನ್ನು ತಮ್ಮ ಮೈಮೇಲೆ ಎಳೆದುಕೊಂಡು ಕಾನೂನಿನ ಕುಣಿಕೆಯಲ್ಲಿ ಸಿಲುಕಿಕೊಂಡು, ಜೀವನ ಹಾಳು ಮಾಡಿಕೊಂಡ ವರದಿಗಳು ಆಗಾಗ ಮಾಧ್ಯಮದಲ್ಲಿ ವರದಿಯಾಗುವುದನ್ನು ಕಾಣುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ ಸಲ್ಲದ ಸುಳ್ಳು ಸುದ್ದಿ ಹರಡಿದ ಪರಿಣಾಮ, ಕೆಲವು ಅಮಾಯಕರು ಅವಮಾನ, ನಿಂದನೆ, ಅವಹೇಳನ ತಾಳದೆ ಆತ್ಮಹತ್ಯೆೆ ಮಾಡಿಕೊಂಡಿದ್ದಾರೆ. ಕೆಲವು ಕಡೆ ಸಾಮಾಜಿಕ ಸ್ವಾಾಸ್ಥ್ಯ ಹದಗೆಡುವಂಥ ಘಟನೆಗಳು ನಡೆದಿವೆ. ಕೋಮು ಪ್ರಚೊದನಕಾರಿ ವಿಚಾರಗಳು ಸಮೂಹ ಸನ್ನಿಿ ಪಡೆದು, ದೊಂಬಿಯಾಗಿ ಪ್ರಾಾಣಾಪಾಯ, ಸಾರ್ವಜನಿಕ ಆಸ್ತಿಿ-ಪಾಸ್ತಿಿ ನಷ್ಟವಾದ ಘಟನೆಗಳೂ ನಡೆದಿವೆ. ಭವಿಷ್ಯದ ದಿನಗಳಲ್ಲಿ ಇವುಗಳ ಸಂಖ್ಯೆೆ ಹೆಚ್ಚಾಾಗುವ ಸಾಧ್ಯತೆ ಇದೆ. ಕಾಲೇಜು ಮೆಟ್ಟಿಿಲೇರಿದ ಬಹುತೇಕ ಯುವ ಸಮುದಾಯವು ಯಾವಾಗಲೂ ಸ್ಮಾಾರ್ಟ್‌ಫೋನ್ ಗೀಳು ಹಚ್ಚಿಿಕೊಂಡಿದ್ದಾರೆ. ನಿರ್ಬಂಧಿತ ಪ್ರದೇಶದಲ್ಲೂ ಸಿಕ್ಕ ಸಿಕ್ಕವರ ಫೋಟೊ ವಿಡಿಯೋ ಕ್ಲಿಿಕ್ಕಿಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿಿದ್ದಾರೆ. ತಮ್ಮ ಜವಾಬ್ದಾಾರಿ ಮರೆತು ಕಾನೂನು ಮೀರಿ ವರ್ತಿಸುತ್ತಿಿದ್ದಾರೆ. ಅಶ್ಲೀಲ ಜೋಕ್, ವಿಡಂಬನೆ, ಉದ್ರೇಕಕಾರಿ ಅಂಶ, ಮಾನಹಾನಿ ಮಾಡುವುದು ಫ್ಯಾಾಶನ್ ಆಗಿ ಮಾಡಿಕೊಂಡಿದ್ದಾರೆ. ನಾನಾ ಜಾಲತಾಣಗಳಲ್ಲಿ ಸುಲಭವಾಗಿ ಸಿಗುವ ನಗ್ನದೃಶ್ಯಗಳು, ನೀಲಿಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು, ರಿಮೇಕ್, ಎಡಿಟ್ ಮಾಡುವುದು ಹಾಗೆಯೇ ತಮಗೆ ದ್ವೇಷ, ಅಸೂಯೆ ಇರುವವರ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂಥವುಗಳನ್ನು ಬಳಸಿಕೊಳ್ಳಲಾಗುತ್ತಿಿದೆ. ಇಂಥ ಇಂಟರ್‌ನೆಟ್ ಮತ್ತು ಸಾಮಾಜಿಕ ಜಾಲತಾಣಗಳ ದುರ್ಬಳಕೆಗೆ ಕಡಿವಾಣ ಹಾಕುವ ಬಗ್ಗೆೆ ಈಗ ಇರುವ ಸೈಬರ್ ಕಾನೂನು ಇನ್ನಷ್ಟು ಕಠಿಣ ಗೊಳಿಸಬೇಕಾದ ಅನಿವಾರ್ಯತೆ ಇದೆ. ಸಾಮಾಜಿಕ ಜಾಲತಾಣಗಳ ಬಳಕೆಗೆ ಕಟ್ಟುನಿಟ್ಟಿಿನ ಕ್ರಮ ರೂಪಿಸಿ, ಆಧಾರ್, ದೂರವಾಣಿ ಸಂಖ್ಯೆೆ ಜೋಡಣೆ, ಓಟಿಪಿ ಕೋಡ್ ನೀಡುವ ಮೂಲಕ ನಿರ್ಬಂಧಿಸಬೇಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆಯಾಗದಂತೆ ದೇಶದ ಸುಭದ್ರತೆಗಾಗಿ, ಸಮಾಜದ ಸ್ವಾಾಸ್ಥ್ಯ ಕಾಪಾಡುವಲ್ಲಿ ಕಟ್ಟುನಿಟ್ಟಿನ ಕಡಿವಾಣ ಹಾಕಬೇಕಿದೆ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ