ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಡು ರಸ್ತೆಯಲ್ಲೇ ಸೆಲ್ಫಿ ಕ್ಲಿಕ್ಕಿಸಿ ದಂಪತಿಯಿಂದ ಹುಚ್ಚಾಟ; ಬುದ್ಧಿ ಹೇಳಿದ ಕಾರು ಚಾಲಕನ ಜತೆ ವಾಗ್ವಾದ

Viral Video: ಇತ್ತೀಚೆಗೆ ದೆಹಲಿಯ ಮಧ್ಯ ರಸ್ತೆಯಲ್ಲಿ ನವಜೋಡಿಯೊಂದು ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದು, ಕಾರು ಚಾಲಕನ ಜತೆ ವಾದಕ್ಕೆ ಇಳಿದಿದೆ. ಅಪಾಯಕಾರಿ ಸ್ಥಳದಲ್ಲಿ ಹೀಗೆ ರೀಲ್ಸ್ ಮಾಡುವುದು ತಪ್ಪು ಎಂದು ಚಾಲಕ ಬುದ್ದಿವಾದ ಹೇಳಿದರೂ ಈ ಜೋಡಿ‌ ಕ್ಯಾರೇ ಎನ್ನದೆ ವಾಗ್ವಾದ ನಡೆಸಿದೆ.‌ ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಸ್ತೆಯಲ್ಲಿ ರೀಲ್ಸ್ ಮಾಡಿ ಕಾರು ಚಾಲಕನ ಜತೆ ಕಿರಿಕ್ ಮಾಡಿದ ಜೋಡಿ

ಕಾರು ಚಾಲಕನ ಜತೆ ಕಿರಿಕ್ ಮಾಡಿದ ಜೋಡಿ -

Profile
Pushpa Kumari Feb 2, 2026 2:45 PM

ನವದೆಹಲಿ, ಫೆ. 2: ಇತ್ತೀಚೆಗೆ ರೀಲ್ಸ್‌ ಹುಚ್ಚು ಹೆಚ್ಚಾಗಿದೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು(Viral Video) ನಾನಾ ಸಾಹಸಕ್ಕೆ ಮುಂದಾಗುವವರು ಇದ್ದಾರೆ. ಇತ್ತೀಚೆಗೆ ದೆಹಲಿಯ ಮಧ್ಯ ರಸ್ತೆಯೊಂದರಲ್ಲಿ ಜೋಡಿಯೊಂದು ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದು, ಕಾರು ಚಾಲಕನ ಜತೆ ವಾದಕ್ಕೆ ಇಳಿದಿದೆ. ಅಪಾಯಕಾರಿ ಸ್ಥಳದಲ್ಲಿ ಹೀಗೆ ರೀಲ್ಸ್ ಮಾಡುವುದು ತಪ್ಪು ಎಂದು ಚಾಲಕ ಬುದ್ದಿವಾದ ಹೇಳಿದರೂ ಈ ಜೋಡಿ‌ ಕ್ಯಾರೇ ಎನ್ನದೆ ವಾಗ್ವಾದ ನಡೆಸಿದೆ.‌ ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೆಲ್ಫಿ ತೆಗೆದುಕೊಳ್ಳಲು ಯುವ ಜೋಡಿಯೊಂದು ಹೆದ್ದಾರಿಯ ಮಧ್ಯದಲ್ಲಿ ಕುಳಿತಿದ್ದು ದಂಪತಿ ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾಗಿದ್ದಾರೆ. ಈ ಜೋಡಿ ತಮ್ಮ ಸ್ಕೂಟರ್ ನಿಲ್ಲಿಸಿ ರಸ್ತೆಯ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುತ್ತಿತ್ತು. ರಸ್ತೆ ಇಳಿಜಾರು ಇರುವುದರಿಂದ ವೇಗವಾಗಿ ಬರುವ ವಾಹನಗಳಿಗೆ ಇವರು ರಸ್ತೆಯ ಮೇಲೆ ಕುಳಿತಿರುವುದು ಕಾಣಿಸುತ್ತಿರಲಿಲ್ಲ. ಹೀಗಾಗಿ ಕಾರ್‌ ಚಾಲಕರೊಬ್ಬರು ಇವರನ್ನು ಕಂಡು ಗಾಬರಿಯಾಗಿ ನಿಲ್ಲಿಸಿದ್ದಾರೆ

ವಿಡಿಯೊ ನೋಡಿ



ಈ ರೀತಿ ರಸ್ತೆ ಮಧ್ಯೆ ಕುಳಿತುಕೊಳ್ಳುವುದು ತಪ್ಪು ಎಂದು ಬುದ್ದಿ ಮಾತು ಹೇಳಿದ್ದಾರೆ. ತಮ್ಮ ಒಳೆಯದಕ್ಕೆ ಹೇಳಿದ್ದರೂ ಕಾರ್‌ ಚಾಲಕನೊಂದಿಗೆ ದಂಪತಿ ವಾಗ್ವಾದ ನಡೆಸಿದ್ದಾರೆ. ಅಪಾಯಕಾರಿ ಸ್ಥಳದಲ್ಲಿ ಹೀಗೆ ಕುಳಿತುಕೊಳ್ಳುವುದು ತಪ್ಪು ಎಂದು ಬುದ್ಧಿ ಹೇಳಲು ಹೋದಾಗ, ಆ ಜೋಡಿ ಚಾಲಕನ ಮೇಲೆಯೇ ಕಿರುಚಾಡಲು ಮುಂದಾಗಿದ್ದಾರೆ. ''ರಸ್ತೆಯಲ್ಲಿ ಫೋಟೊ ಕ್ಲಿಕ್ ಮಾಡಲು ಯಾಕೆ ಸಾಧ್ಯವಿಲ್ಲ? ರಸ್ತೆಯ ಉಳಿದ ಭಾಗವು ಖಾಲಿ ಇದೆಯಲ್ಲ, ಅಲ್ಲಿಂದ ಹೋಗಿ" ಎಂದು ಜೋಡಿ ಅಹಂಕಾರದಿಂದ ಉತ್ತರಿಸಿದೆ.

ಕಾಳಿ ಮಾತೆಯ ವಿಗ್ರಹಕ್ಕೆ ಮದರ್‌ ಮೇರಿಯ ಅಲಂಕಾರ....ಕನಸಲ್ಲಿ ಬಂದು ದೇವಿಯೇ ಹೇಳಿದ್ಳಂತೆ!

ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಬಳಕೆದಾರರು ದಂಪತಿಯನ್ನು ಟೀಕಿಸಿದ್ದಾರೆ. ಒಬ್ಬರು ʼʼಕಾನೂನಿನ ಭಯವಿಲ್ಲ. ಇಂತಹ ಬೇಜವಾಬ್ದಾರಿ ವ್ಯಕ್ತಿಗಳ ಮೇಲೆ ಸಂಚಾರಿ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಭಾರಿ ದಂಡ ವಿಧಿಸಬೇಕುʼʼ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ʼʼಈ ದಂಪತಿಗೆಬುದ್ಧಿವಂತಿಕೆಯ ಕೊರತೆಯಿದೆ ನಾಗರಿಕ ಪ್ರಜ್ಞೆಯ ಜ್ಞಾನವೇ ಇಲ್ಲʼʼ ಎಂದು ಕಿಡಿಕಾರಿದ್ದಾರೆ.