ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Abhishek Sharma; ಪಾಕ್‌ ವಿರುದ್ಧ 5 ಸಿಕ್ಸರ್‌ ಸಿಡಿಸಿ ವಿಶ್ವ ದಾಖಲೆ ಸರಿಗಟ್ಟಿದ ಅಭಿಷೇಕ್‌

172 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಅಭಿಷೇಕ್ ಮತ್ತು ಗಿಲ್ ಅಬ್ಬರದ ಜೊತೆಯಾಟದ ಮೂಲಕ ಭದ್ರಬುನಾದಿ ಹಾಕಿದರು. ಈ ಜೋಡಿ ಮೊದಲ ವಿಕೆಟ್‌ಗೆ 105 ರನ್‌ ಒಟ್ಟುಗೂಡಿಸಿತು. ಅರ್ಧಶತಕಕ್ಕೆ 3 ರನ್‌ಗಳ ಅಗತ್ಯವಿದ್ದ ಸಂದರ್ಭದಲ್ಲಿ ಗಿಲ್‌ ಅವರು ಫಾಹೀಮ್ ಅಶ್ರಫ್ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡ್ ಆದರು. ಗಿಲ್‌ 47 ರನ್‌ ಗಳಿಸಿದರು.

ಪಾಕ್‌ ವಿರುದ್ಧ 5 ಸಿಕ್ಸರ್‌ ಸಿಡಿಸಿ ವಿಶ್ವ ದಾಖಲೆ ಸರಿಗಟ್ಟಿದ ಅಭಿಷೇಕ್‌

-

Abhilash BC Abhilash BC Sep 22, 2025 10:29 AM

ದುಬೈ: ಏಷ್ಯಾಕಪ್‌ ಸೂಪರ್‌-4(Asia Cup 2025) ಪಂದ್ಯದಲ್ಲಿ ಪಾಕಿಸ್ತಾನ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಅಮೋಘ ಅರ್ಧಶತಕ ಬಾರಿಸಿದ್ದ ಟೀಮ್‌ ಇಂಡಿಯಾ(IND vs PAK) ಆರಂಭಿಕ ಎಡಗೈ ಬ್ಯಾಟರ್‌ ಅಭಿಷೇಕ್‌ ಶರ್ಮ(Abhishek Sharma) ಅವರು ಸಿಕ್ಸರ್‌ ಮೂಲಕ ವಿಶ್ವ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಇನಿಂಗ್ಸ್‌ನ ಮೊದಲ ಎಸೆತವನ್ನೇ ಸಿಕ್ಸರ್‌ ಹೊಡೆಯುವ ಮೂಲಕ ಭರ್ಜರಿ ಆರಂಭ ಕೊಟ್ಟ ಅಭಿಷೇಕ್ 5 ಸಿಕ್ಸರ್‌ ಮತ್ತು 6 ಬೌಂಡರಿ ನೆರವಿನಿಂದ 74 ರನ್‌ ಬಾರಿಸಿದರು.

ಪಂದ್ಯದಲ್ಲಿ 5 ಸಿಕ್ಸರ್‌ ಬಾರಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿವೇಗವಾಗಿ 50 ಸಿಕ್ಸರ್ ಹೊಡೆದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಈ ಮೂಲಕ ವಿಂಡೀಸ್‌ನ ಎವಿನ್ ಲೆವಿಸ್(50 ಸಿಕ್ಸರ್‌) ಅವರ ವಿಶ್ವಾಲೆಯನ್ನು ಸರಿಗಟ್ಟಿದರು. ಉಭಯ ಆಟಗಾರರು 20 ಇನಿಂಗ್ಸ್‌ನಿಂದ ಈ ಸಾಧನೆಗೈದಿದ್ದಾರೆ.

172 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಅಭಿಷೇಕ್ ಮತ್ತು ಗಿಲ್ ಅಬ್ಬರದ ಜೊತೆಯಾಟದ ಮೂಲಕ ಭದ್ರಬುನಾದಿ ಹಾಕಿದರು. ಈ ಜೋಡಿ ಮೊದಲ ವಿಕೆಟ್‌ಗೆ 105 ರನ್‌ ಒಟ್ಟುಗೂಡಿಸಿತು. ಅರ್ಧಶತಕಕ್ಕೆ 3 ರನ್‌ಗಳ ಅಗತ್ಯವಿದ್ದ ಸಂದರ್ಭದಲ್ಲಿ ಗಿಲ್‌ ಅವರು ಫಾಹೀಮ್ ಅಶ್ರಫ್ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡ್ ಆದರು. ಗಿಲ್‌ 47 ರನ್‌ ಗಳಿಸಿದರು.

ಇದನ್ನೂ ಓದಿ Asia Cup 2025: ಕೆಣಕಿದ ರೌಫ್‌ಗೆ ಚಳಿ ಬಿಡಿಸಿದ ಅಭಿಷೇಕ್‌, ಗಿಲ್‌; ವಿಡಿಯೊ ವೈರಲ್‌

ನಾಯಕ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ವಿಫಲರಾದರು. ಮೂರು ಎಸೆತ ಎದುರಿಸಿದರೂ ಖಾತೆ ತೆರೆಯಲಿಲ್ಲ. ಹ್ಯಾರಿಸ್ ರವೂಫ್ ಬೌಲಿಂಗ್‌ನಲ್ಲಿ ಅಬ್ರಾರ್‌ಗೆ ಕ್ಯಾಚಿತ್ತರು. ತಿಲಕ್ ವರ್ಮಾ ಔಟಾಗದೇ 30 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿದರು. ಸಂಜು ಸ್ಯಾಮ್ಸನ್ (13 ರನ್) ಅವರು ರವೂಫ್‌ಗೆ ಬೌಲಿಂಗ್‌ನಲ್ಲಿ ಔಟಾದರು. ಹಾರ್ದಿಕ್ ಪಾಂಡ್ಯ (ಅಜೇಯ 7) ವರ್ಮಾ ಜೊತೆ ಸೇರಿ ತಂಡವನ್ನು ಜಯದತ್ತ ಮುನ್ನಡೆಸಿದರು.