ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sahibzada Farhan: ಉಗ್ರರಂತೆ ಸಂಭ್ರಮಿಸಿದ ಪಾಕ್‌ ಬ್ಯಾಟರ್; ವಿಡಿಯೊ ವೈರಲ್‌

ಶಾಹೀಬ್‌ಜಾದ್ ಫರ್ಹಾನ್ ಸಂಭ್ರಮಾಚರಣೆಗೆ ಭಾರತೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದಕ ದೇಶದ ಎಲ್ಲರೂ ಭಯೋತ್ಪಾದಕರ ರೀತಿಯೇ ವರ್ತಿಸುತ್ತಾರೆ. ಹೀಗಿದ್ದರೂ ಭಾರತ ತಂಡ ಪಾಕ್‌ ವಿರುದ್ಧ ಆಡುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಭಾರತ ತಂಡ ವಿರುದ್ಧವೂ ಟೀಕೆ ವ್ಯಕ್ತಪಡಿಸಿದ್ದಾರೆ.

ಉಗ್ರರಂತೆ ಸಂಭ್ರಮಿಸಿದ ಪಾಕ್‌ ಬ್ಯಾಟರ್; ವಿಡಿಯೊ ವೈರಲ್‌

-

Abhilash BC Abhilash BC Sep 22, 2025 8:42 AM

ದುಬೈ: ಎಡಗೈ ಬ್ಯಾಟರ್‌ ಅಭಿಷೇಕ್‌ ಶರ್ಮ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ವಿರುದ್ಧ ಭಾನುವಾರ ನಡೆದಿದ್ದ ಏಷ್ಯಾ ಕಪ್‌ ಸೂಪರ್‌-4(IND vs PAK Asia Cup Super 4) ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳ ಜಯಭೇರಿ ಬಾರಿಸಿತ್ತು. ಆದರೆ ಈ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟರ್‌ ಶಾಹೀಬ್‌ಜಾದ್ ಫರ್ಹಾನ್(Sahibzada Farhan) ಮಾಡಿದ ಸಂಭ್ರಮಾಚರಣೆ ಭಾರೀ ವಿವಾಧಕ್ಕೆ ಕಾರಣವಾಗಿದೆ.

ಅರ್ಧಶತಕ ಬಾರಿಸಿದ ಬಳಿಕ ಫರ್ಹಾನ್, ಭಾರತೀಯ ತಂಡದ ಡೌಗ್‌ಕಡೆ ಬ್ಯಾಟ್ ತೋರಿಸಿ ಗನ್ ಫೈರಿಂಗ್ ರೀತಿ ಸಂಭ್ರಮಿಸಿದ್ದಾರೆ. ಬ್ಯಾಟನ್ನೇ ಏಕೆ-47 ಗನ್ ರೀತಿ ತೋರಿಸಿ, ಫೈರಿಂಗ್ ಮಾಡಿದ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಇದು ಪೆಹಲ್ಗಾಂನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಬಲಿಯಾದ 26 ಮಂದಿ, ಅವರ ಕುಟುಂಬ ಹಾಗೂ ಭಾರತೀಯರನ್ನು ಅಣಕಿಸಿದ ರೀತಿಯಲ್ಲಿತ್ತು.



ಶಾಹೀಬ್‌ಜಾದ್ ಫರ್ಹಾನ್ ಸಂಭ್ರಮಾಚರಣೆಗೆ ಭಾರತೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದಕ ದೇಶದ ಎಲ್ಲರೂ ಭಯೋತ್ಪಾದಕರ ರೀತಿಯೇ ವರ್ತಿಸುತ್ತಾರೆ. ಹೀಗಿದ್ದರೂ ಭಾರತ ತಂಡ ಪಾಕ್‌ ವಿರುದ್ಧ ಆಡುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಭಾರತ ತಂಡ ವಿರುದ್ಧವೂ ಟೀಕೆ ವ್ಯಕ್ತಪಡಿಸಿದ್ದಾರೆ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 171 ರನ್‌ ಬಾರಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 174 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ಭಾರತ ಪರ ಆರಂಭಿಕ ಬ್ಯಾಟರ್‌ಗಳಾದ ಅಭಿಷೇಕ್‌ ಶರ್ಮ 74 ರನ್‌ ಬಾರಿಸಿದರೆ, ಶುಭಮನ್‌ ಗಿಲ್‌ 47 ರನ್‌ ಚಚ್ಚಿದರು. ತಿಲಕ್‌ ವರ್ಮ ಅಜೇಯ 30 ರನ್‌ ಬಾರಿಸಿದರು.