Bhagya Lakshmi Serial: ಶ್ರೇಷ್ಠಾ-ಕನ್ನಿಕಾ ಭೇಟಿ: ಸದ್ಯದಲ್ಲೇ ಭಾಗ್ಯಾಗೆ ಕಾದಿದೆ ಮತ್ತೊಂದು ಶಾಕ್
ತಾಂಡವ್ - ಭಾಗ್ಯ ಒಂದೇ ಆಫೀಸ್ನಲ್ಲಿ ಕೆಲಸ ಮಾಡುತ್ತಿರುವುದನ್ನು ಸಹಿಸಲಾಗದ ಶ್ರೇಷ್ಠಾ ಭಾಗ್ಯ ವಿರುದ್ಧ ಸೇಡು ತೀರಿಸಿಕೊಳ್ಳಲು ಹಾಗೂ ಅವಳು ಆ ಕಂಪನಿಯಿಂದ ಹೊರಹಾಕಬೇಕೆಂದು ಪಣತೊಟ್ಟಿದ್ದಾಳೆ. ಇದಕ್ಕಾಗಿ ಶ್ರೇಷ್ಠಾ ಯಾವುದೇ ಲೆವೆಲ್ಗೆ ಇಳಿಯಲು ತಯಾರಾಗಿದ್ದಾಳೆ.

Bhagya Lakshmi Serial -

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಗೆ ದಿನದಿಂದ ದಿನಕ್ಕೆ ಶತ್ರುಗಳು ಹೆಚ್ಚಾಗುತ್ತಲೇ ಇದ್ದಾರೆ. ಒಬ್ಬರ ಹಿಂದೆ ಒಬ್ಬರಂತೆ ತೊಂದರೆ ಕೊಡುತ್ತಲೇ ಇದ್ದಾರೆ. ಅದರಲ್ಲೂ ಭಾಗ್ಯಾ ಈಗ ತೊಟ್ಟಿಲು ಚಾರಿಟೆಬಲ್ ಟ್ರಸ್ಟ್ನ ಎಂಡಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಶತ್ರುಗಳ ಸಂಖ್ಯೆ ಹೆಚ್ಚಾಗಿದೆ. ತಾಂಡವ್- ಭಾಗ್ಯ ಒಂದೇ ಆಫೀಸ್ನಲ್ಲಿ ಕೆಲಸ ಮಾಡುತ್ತಿರುವುದನ್ನು ಸಹಿಸಲಾಗದ ಶ್ರೇಷ್ಠಾ ಭಾಗ್ಯ ವಿರುದ್ಧ ಸೇಡು ತೀರಿಸಿಕೊಳ್ಳಲು ಹಾಗೂ ಅವಳು ಆ ಕಂಪನಿಯಿಂದ ಹೊರಹಾಕಬೇಕೆಂದು ಪಣತೊಟ್ಟಿದ್ದಾಳೆ. ಇದಕ್ಕಾಗಿ ಶ್ರೇಷ್ಠಾ ಯಾವುದೇ ಲೆವೆಲ್ಗೆ ಇಳಿಯಲು ತಯಾರಾಗಿದ್ದಾಳೆ.
ಭಾಗ್ಯಾಳ ನೆಮ್ಮದಿ ಹಾಳು ಮಾಡಲು ಶ್ರೇಷ್ಠಾ ಮೊದಲ ಅಸತ್ರವಾಗಿ ತನ್ವಿಯನ್ನು ಬಳಸಿಕೊಂಡಿದ್ದಾಳೆ. ಕೆಲ ದಿನಗಳ ಹಿಂದೆ ಭಾಗ್ಯ ಮಗಳು ತನ್ವಿ ಕ್ಲಾಸ್ಗೆ ಬಂಕ್ ಹಾಕಿದ ಕಾರಣ ಕಾಲೇಜ್ನಿಂದ ಸಸ್ಪೆಂಡ್ ಆಗಿದ್ದು, ಪೇರೆಂಟ್ಸ್ ಬರೋ ತನಕ ಕಾಲೇಜಿಗೆ ಬರಬಾರದು ಎಂದು ಪ್ರಿನ್ಸಿಪಾಲ್ ಹೇಳಿದ್ದರು. ಹೀಗಾಗಿ ತನ್ವಿ ಈ ವಿಚಾರ ಅಮ್ಮನ ಬಳಿ ಹೇಳದೆ ತಂದೆ ತಾಂಡವ್ನನ್ನು ಕರೆದುಕೊಂಡು ಹೋಗಿದ್ದಾಳೆ. ಆರಂಭದಲ್ಲಿ ಆತ ಕೂಡ ಒಪ್ಪದಿದ್ದಾಗ ಬಳಿಕ ಶ್ರೇಷ್ಠಾ ಮನವೊಲಿಸಿ ತಾಂಡವ್-ಶ್ರೇಷ್ಠಾ-ತನ್ವಿ ಮೂವರು ಕಾಲೇಜಿಗೆ ಹೋಗಿ ಎಲ್ಲ ಸರಿ ಮಾಡಿದ್ದರು.
ಆದರೆ, ಈ ಯಾವುದೇ ವಿಚಾರ ಭಾಗ್ಯಾಗೆ ತಿಳಿದಿರುವುದಿಲ್ಲ. ಸದ್ಯ ಭಾಗ್ಯಾಳಿಗೆ ಬುದ್ದಿ ಕಲಿಸಬೇಕೆಂದು ಶ್ರೇಷ್ಠಾ ತನ್ನ ಫ್ರೆಂಡ್ನ ಸಹಾಯದಿಂದ ಭಾಗ್ಯಾಗೆ ಕಾಲ್ ಮಾಡಿ, ನಿಮ್ಮ ಮಗಳು ತನ್ವಿ ಕಾಲೇಜ್ ಇಂದ ಸಸ್ಪೆಂಡ್ ಆಗಿರುವ ವಿಷಯ ನಿಮಗೆ ಗೊತ್ತೇ ಇಲ್ವಾ ಎಂದು ಕೇಳಿದ್ದಾನೆ. ಈ ಸುದ್ದಿ ಕೇಳಿ ಭಾಗ್ಯಾಗೆ ಶಾಕ್ ಆಗಿದೆ. ಮನೆಗೆ ಬಂದವಳೇ ತನ್ವಿಯನ್ನು ಕರೆದು, ನೀನು ಕಾಲೇಜ್ ಇಂದ ಸಸ್ಪೆಂಡ್ ಆಗಿದ್ಯಾ, ನಮಗೆ ಈ ವಿಷಯ ಹೇಳಲೇ ಇಲ್ಲ ಅಲ್ವಾ.. ನಿನ್ನೆ ಎಲ್ಲ ಕಾಲೇಜಿಗೆ ಹೋಗ್ತಾ ಇದ್ದೀಯ ಅಂತ ಹೇಳಿ ಎಲ್ಲಿಗೆ ಹೋಗ್ತಿದ್ದೆ?, ನಾಳೆ ನಾನು ಬರುತ್ತೇನೆ.. ಕಾಲೇಜಿಗೆ ಹೋಗಿ ಮಾತಾಡೋಣ ಎಂದು ಹೇಳಿದ್ದಾಳೆ.
ಆಗ ತನ್ವಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಜೊತೆಗೆ ಕಾಲೇಜಿಗೆ ಬರೋದು ಬೇಡ ಮೊನ್ನೆ ಪಪ್ಪಾ ಬಂದಿದ್ದಾರೆ ಎಂದಿದ್ದಾಳೆ. ಆಗ ಕುಸುಮಾ, ತಾಂಡವ್ ಇದಕ್ಕೆಲ್ಲ ಒಪ್ಪಲ್ಲ ನೀನು ಸುಳ್ಳು ಹೇಳಬೇಡ ಎಂದಿದ್ದಾರೆ. ಆಗ ತನ್ವಿ, ಮೊದಲಿಗೆ ಪಪ್ಪ ಒಪ್ಪಲಿಲ್ಲ.. ಬಳಿಕ ಶ್ರೇಷ್ಠಾ ಆಂಟಿ ಬಂದು ಪಪ್ಪಾನ ಕನ್ವೆನ್ಸ್ ಮಾಡಿದ್ರು.. ಅವರು ಇರಲಿಲ್ಲ ಅಂದ್ರೆ ನಾನು ಪುನಃ ಕಾಲೇಜು ಹೋಗೋ ಹಾಗೆ ಆಗುತ್ತಿರಲಿಲ್ಲ ಎಂದಿದ್ದಾಳೆ. ಇದು ಭಾಗ್ಯಾಗೆ ಸಿಟ್ಟು ತರಿಸಿದೆ. ಹಿಂದು-ಮುಂದು ನೋಡದೆ ತನ್ವಿಯ ಕೆನ್ನೆಗೆ ಭಾಗ್ಯ ಬಾರಿಸಿದ್ದಾಳೆ.
ಇದಾದ ಬಳಿಕ ಶ್ರೇಷ್ಠಾ ತನ್ನ ಎರಡನೇ ಪ್ಲ್ಯಾನ್ಗೆ ಮುಂದಾಗಿದ್ದಾಳೆ. ಭಾಗ್ಯಾಳನ್ನು ಹೇಗಾದರು ಮಾಡಿ ಆ ಆಫೀಸ್ನಿಂದ ಹೊರಹಾಕಬೇಕು ಎಂದು ಮೊದಲಿಗೆ ಕನ್ನಿಕಾಗೆ ಕಾಲ್ ಮಾಡಿದ್ದಾಳೆ. ನೀನು ಫಾರಿನ್ ಟ್ರಿಪ್ನಲ್ಲಿ ಇದ್ದೀಯಾ ಕನ್ನಿಕಾ?, ಅಲ್ಲ ಆ ಭಾಗ್ಯ ಆಫೀಸ್ನ ಎಂಡಿ ಆಗೋವಾಗ ನೀನೇನು ಚಪ್ಪಾಳೆ ತಟ್ಟುತ ಇದ್ಯಾ?, ಏನೂ ಮಾಡಿಲ್ವಾ ಎಂದು ಕೇಳಿದ್ದಾಳೆ. ಬಳಿಕ ನಾಳೆ ಮೀಟ್ ಮಾಡೋಣ ಒಂದು ಪ್ಲ್ಯಾನ್ ಇದೆ ಎಂದು ಶ್ರೇಷ್ಠಾ ಹೇಳಿದ್ದಾಳೆ.
ಸರಿ ಎಂದ ಕನ್ನಿಕಾ ಮರುದಿನ ಇಬ್ಬರೂ ಒಂದು ಕೆಫೆಯಲ್ಲಿ ಭೇಟಿ ಆಗಿದ್ದಾರೆ. ಇಲ್ಲಿ ಇವರಿಬ್ಬರು ಭಾಗ್ಯಾಳ ವಿರುದ್ಧ ದೊಡ್ಡ ಸಂಚು ರೂಪಿಸಿದ್ದಾರೆ. ಕನ್ನಿಕಾ ಬಳಿ ಶ್ರೇಷ್ಠಾ, ನನ್ಗೆ ಕೆಲಸ ಬೇಕು.. ಆ ಭಾಗ್ಯ ಕೆಲಸ ಮಾಡೋ ಜಾಗದಲ್ಲಿ ನಮ್ಮವರು ಯಾರಾದ್ರು ಇರಬೇಕು ಎಂದು ಹೇಳಿದ್ದಾಳೆ. ಅದಕ್ಕೆ ಕನ್ನಿಕಾ, ಈಗಾಗಲೇ ಇದ್ದಾರೆ.. ನಮ್ಮ ಕಂಟ್ರೋಲ್ನಲ್ಲಿ ಇರುವವರೇ ಮೂರು-ನಾಲ್ಕು ಜನ ಇದ್ದಾರೆ. ಅಷ್ಟು ದಿನ ಇದ್ದರೂ ಆ ಭಾಗ್ಯ ಆಫೀಸ್ಗೆ ಜಾಯಿನ್ ಆಗೋದನ್ನ ತಡೆಯೋಕೆ ಆಗಿಲ್ಲ ಎಂದು ಶ್ರೇಷ್ಠಾ ಹೇಳಿದ್ದಾಳೆ. ಅಲ್ಲದೆ ನಾನು ಆ ಆಫೀಸ್ ಒಳಗೆ ಹೋಗಬೇಕು.. ಭಾಗ್ಯಾನ ಕೈಕೆಳಗಿನ ಕೆಲಸ ಆದರೂ ಪರವಾಗಿಲ್ಲ ಎಂದಿದ್ದಾಳೆ.
ಅದಕ್ಕೆ ಕನ್ನಿಕಾ ಸರಿ ನಾನು ಅರೆಂಜ್ ಮಾಡ್ತೇನೆ ಎಂದಿದ್ದಾಳೆ. ಅತ್ತ ಭಾಗ್ಯ ಕೆಲಸ ಮಾಡುವ ಆಫೀಸ್ನಲ್ಲಿ ಫೈನಾನ್ಸ್ ಡಿಪಾರ್ಟ್ಮೆಂಟ್ನಲ್ಲಿ ಒಂದು ಪೋಸ್ಟ್ ಖಾಲಿ ಇರುತ್ತದೆ. ಆದೀಶ್ವರ್, ಭಾಗ್ಯ ಬಳಿ ಬಂದು ಈ ವಿಚಾರ ಹೇಳಿದ್ದಾನೆ. ಅಲ್ಲದೆ ಕನ್ನಿಕಾಳ ಪರಿಚಯದವರು ಎಂದಿದ್ದಾನೆ. ಅದಕ್ಕೆ ಭಾಗ್ಯ ಕನ್ನಿಕಾ ರೆಫರ್ ಮಾಡಿವರು ಎಂದಾದರೆ ಡೈರೆಕ್ಟ್ ತೆಗೋಬಹುದು ಎಂದಿದ್ದಾಳೆ. ಸದ್ಯ ಈ ಹುದ್ದೆಗೆ ಆಯ್ಕೆ ಆಗಿರುವುದು ಶ್ರೇಷ್ಠಾ. ಶ್ರೇಷ್ಠಾಳನ್ನು ನೋಡಿ ಭಾಗ್ಯ ಯಾವರೀತಿ ರಿಯಾಕ್ಟ್ ಆಗುತ್ತಾಳೆ?, ಭಾಗ್ಯ ಕೆಲಸವೇ ಬಿಡುತ್ತಾಳ? ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.