ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಫ್ಘಾನಿಸ್ತಾನದ ನೂತನ ಮುಖ್ಯ ಕೋಚ್ ಆಗಿ ರಿಚರ್ಡ್ ಪೈಬಸ್ ನೇಮಕ

Richard Pybus: ಪೈಬಸ್ ವೆಸ್ಟ್ ಇಂಡೀಸ್ ಕ್ರಿಕೆಟ್‌ನೊಂದಿಗೆ ದೀರ್ಘಕಾಲದ ಒಡನಾಟವನ್ನು ಹೊಂದಿದ್ದರು. ಅವರು ಮೊದಲು 2018 ರಲ್ಲಿ ಉನ್ನತ ಪ್ರದರ್ಶನ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ನಂತರ ಮುಂದಿನ ವರ್ಷ ಅವರನ್ನು ಮಧ್ಯಂತರ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಅವರು 2012 ರಲ್ಲಿ ಬಾಂಗ್ಲಾದೇಶದ ಮುಖ್ಯ ಕೋಚ್ ಆಗಿ ಅಲ್ಪಾವಧಿ ಸೇವೆ ಸಲ್ಲಿದ್ದರು.

Afghanistan new head coach Richard Pybus

ಕಾಬುಲ್‌, ಫೆ.25: ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜೊನಾಥನ್ ಟ್ರಾಟ್(Jonathan Trott) ಅವರ ಅಧಿಕಾರಾವಧಿ ಕೊನೆಗೊಂಡ ನಂತರ, ಅಫ್ಘಾನಿಸ್ತಾನ ತಂಡ ರಿಚರ್ಡ್ ಪೈಬಸ್(Richard Pybus) ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. 2026 ರ ಟಿ20 ವಿಶ್ವಕಪ್‌ನಲ್ಲಿ ತಂಡವು ಗುಂಪು ಹಂತದಲ್ಲೇ ಸೋತು ನಿರ್ಗಮಿಸಿತ್ತು.

"ಅಫ್ಘಾನಿಸ್ತಾನ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ರಿಚರ್ಡ್ ಪೈಬಸ್ ಅವರನ್ನು ನೇಮಕ ಮಾಡಿರುವುದನ್ನು ಘೋಷಿಸಲು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಸಂತೋಷಪಡುತ್ತದೆ" ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

61 ವರ್ಷದ ಪೈಬಸ್, ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಕೋಚಿಂಗ್ ವೃತ್ತಿಜೀವನವನ್ನು ಹೊಂದಿದ್ದು, ಈ ಹಿಂದೆ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. 1999 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಫೈನಲ್‌ಗೆ ತಲುಪುವಲ್ಲಿ ಪೈಬಸ್ ಮಾರ್ಗದರ್ಶನ ಪ್ರಮುಖವಾಗಿತ್ತು. 2016 ರಲ್ಲಿ ವೆಸ್ಟ್‌ ಇಂಡೀಸ್‌ನ ಪುರುಷ, ಮಹಿಳಾ ಮತ್ತು U19 ತಂಡಗಳು ವಿಶ್ವಕಪ್ ಗೆದ್ದಾಗ ಅವರು ವೆಸ್ಟ್ ಇಂಡೀಸ್‌ನ ಕ್ರಿಕೆಟ್ ನಿರ್ದೇಶಕರಾಗಿದ್ದರು.

ಪೈಬಸ್ ವೆಸ್ಟ್ ಇಂಡೀಸ್ ಕ್ರಿಕೆಟ್‌ನೊಂದಿಗೆ ದೀರ್ಘಕಾಲದ ಒಡನಾಟವನ್ನು ಹೊಂದಿದ್ದರು. ಅವರು ಮೊದಲು 2018 ರಲ್ಲಿ ಉನ್ನತ ಪ್ರದರ್ಶನ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ನಂತರ ಮುಂದಿನ ವರ್ಷ ಅವರನ್ನು ಮಧ್ಯಂತರ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಅವರು 2012 ರಲ್ಲಿ ಬಾಂಗ್ಲಾದೇಶದ ಮುಖ್ಯ ಕೋಚ್ ಆಗಿ ಅಲ್ಪಾವಧಿ ಸೇವೆ ಸಲ್ಲಿದ್ದರು.

ತಿಲಕ್, ರಿಂಕು, ಸುಂದರ್ ಔಟ್, ಸ್ಯಾಮ್ಸನ್ ಇನ್?; ಜಿಂಬಾಬ್ವೆ ವಿರುದ್ಧದ ಸೂಪರ್ 8 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI?

ಇದಲ್ಲದೆ, ಪೈಬಸ್ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಮತ್ತು ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಅವರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ಡೇಲ್ ಸ್ಟೇನ್ ಅವರೊಂದಿಗೆ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.

ಅಫ್ಘಾನಿಸ್ತಾನದೊಂದಿಗಿನ ಪೈಬಸ್ ಅವರ ಮೊದಲ ನಿಯೋಜನೆಯು ಯುಎಇಯಲ್ಲಿ ಶ್ರೀಲಂಕಾ ವಿರುದ್ಧದ ವೈಟ್-ಬಾಲ್ ಸರಣಿಯ ಮೂಲಕ ಆರಂಭಗೊಳ್ಳಲಿದೆ. ಮೊದಲ ಟಿ20ಐ ಮಾರ್ಚ್ 13 ರಂದು ಶಾರ್ಜಾದಲ್ಲಿ ನಡೆಯಲಿದೆ.