ತಿಲಕ್, ರಿಂಕು, ಸುಂದರ್ ಔಟ್, ಸ್ಯಾಮ್ಸನ್ ಇನ್?; ಜಿಂಬಾಬ್ವೆ ವಿರುದ್ಧದ ಸೂಪರ್ 8 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI?
India's Likely Playing XI: ಇಲ್ಲಿಯವರೆಗೆ ಆಡಿದ ಐದು ಟಿ20 ವಿಶ್ವಕಪ್ ಪಂದ್ಯಗಳಲ್ಲಿ ತಿಲಕ್ 25, 25, 25, 31 ಮತ್ತು 1 ರನ್ ಗಳಿಸಿದ್ದಾರೆ. ಮುಂಬೈನಲ್ಲಿ ಯುಎಸ್ಎ ವಿರುದ್ಧದ ಪಂದ್ಯವನ್ನು ಹೊರತುಪಡಿಸಿ, ಅವರು 120 ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದ್ದಾರೆ.
Tilak, Rinku And Samson -
ಚೆನ್ನೈ, ಫೆ.25: ಭಾರತ ತಂಡವು ಗುರುವಾರ (ಫೆಬ್ರವರಿ 26) ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ರ ಎರಡನೇ ಸೂಪರ್ 8 ರ ಪಂದ್ಯದಲ್ಲಿ ಜಿಂಬಾಬ್ವೆ(India vs Zimbabwe) ತಂಡವನ್ನು ಎದುರಿಸಲಿದೆ. ಪಂದ್ಯಕ್ಕೆ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣ ಅಣಿಯಾಗಿದೆ. ಮೊದಲ ಸೂಪರ್ 8 ಪಂದ್ಯದಲ್ಲಿ ಸೋಲು ಅನುಭವಿಸಿದ ಉಭಯ ತಂಡಗಳಿಗೂ ಸೆಮಿಫೈನಲ್ ಸ್ಥಾನ ಉಳಿಸಿಕೊಳ್ಳಲು ಗೆಲುವು ಅನಿವಾರ್ಯ. ಗೆಲ್ಲಲೇಬೇಕಾದ ಪಂದ್ಯಕ್ಕಾಗಿ, ಭಾರತೀಯ ತಂಡದ ಆಡಳಿತ ಮಂಡಳಿಯು ಆಡುವ XI ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡುವುದು ಖಚಿತ. ಮೇಲ್ನೋಟಕ್ಕೆ ಭಾರತ(India's Likely Playing XI) ಮೂರು ಬದಲಾವಣೆಯೊಂದಿಗೆ ಆಡಲಿಳಿಯಬಹುದು.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಪಂದ್ಯಕ್ಕೆ ಆಡುವ ಹನ್ನೊಂದರಿಂದ ಹೊರಗುಳಿದಿದ್ದ ಉಪನಾಯಕ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಬದಲಿಗೆ ಆಡುವ ಸಾಧ್ಯತೆ ಹೆಚ್ಚಿದೆ. ಸುಂದರ್ ಅಹಮದಾಬಾದ್‌ನಲ್ಲಿ ಭಾರತ ಪರ ಎರಡು ಪಂದ್ಯಗಳನ್ನು ಆಡಿದರು. ಆದರೆ ಬ್ಯಾಟಿಂಗ್ ಅಥವಾ ಬೌಲಿಂಗ್‌ನಲ್ಲಿ ಯಾವುದೇ ಮಹತ್ವದ ಕೊಡುಗೆ ನೀಡುವಲ್ಲಿ ವಿಫಲರಾದರು.
ಸುಂದರ್ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಕೇವಲ ಎರಡು ಓವರ್ ಬೌಲಿಂಗ್ ಮಾಡಿ ವಿಕೆಟ್ ಕೂಡ ಪಡೆಯಲು ಸಾಧ್ಯವಾಗಲಿಲ್ಲ, ಮತ್ತು ಬ್ಯಾಟಿಂಗ್‌ನಲ್ಲಿ 5 ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 11 ಎಸೆತಗಳಲ್ಲಿ 11 ರನ್ ಗಳಿಸಿದ್ದರು. ಸುಂದರ್ ಜೊತೆಗೆ ತಿಲಕ್ ವರ್ಮಾ, ಅಭಿಷೇಕ್ ಶರ್ಮಾ ಮತ್ತು ರಿಂಕು ಸಿಂಗ್ ಅವರ ಸ್ಥಾನಗಳು ಸಹ ಪರಿಶೀಲನೆಯಲ್ಲಿವೆ. ಅವರಲ್ಲಿ ಕನಿಷ್ಠ ಇಬ್ಬರನ್ನು ತಂಡದಿಂದ ಕೈಬಿಡುವ ಸಾಧ್ಯತೆಗಳು ಹೆಚ್ಚು.
ಇಲ್ಲಿಯವರೆಗೆ ಆಡಿದ ಐದು ಟಿ20 ವಿಶ್ವಕಪ್ ಪಂದ್ಯಗಳಲ್ಲಿ ತಿಲಕ್ 25, 25, 25, 31 ಮತ್ತು 1 ರನ್ ಗಳಿಸಿದ್ದಾರೆ. ಮುಂಬೈನಲ್ಲಿ ಯುಎಸ್ಎ ವಿರುದ್ಧದ ಪಂದ್ಯವನ್ನು ಹೊರತುಪಡಿಸಿ, ಅವರು 120 ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದ್ದಾರೆ.
ಕುಲ್‌ದೀಪ್‌ಗೆ ಅವಕಾಶ
ಮತ್ತೊಂದೆಡೆ, ರಿಂಕು ಕಳೆದ ಐದು ಪಂದ್ಯಗಳಲ್ಲಿ 6, 1, 11*, 6* ಮತ್ತು 0 ರನ್ ಗಳಿಸಿದ್ದಾರೆ. ಫಿನಿಷರ್ ಆಗಿ ತಂಡದಲ್ಲಿ ಸ್ಥಾನ ಪಡೆದ ಅವರು ಯಾವುದೇ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಅವರ ಸ್ಥಾನದಲ್ಲಿ, ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ಅನುಕೂಲಕರವಾದ ಚೆನ್ನೈ ಪಿಚ್‌ನಲ್ಲಿ ಕುಲದೀಪ್ ಯಾದವ್ ಆಡಬಹುದು.
ಪಾಕಿಸ್ತಾನ ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟು ವಿಶ್ವ ದಾಖಲೆ ಬರೆದ ಇಂಗ್ಲೆಂಡ್
ಕುಲ್ದೀಪ್ ನಡೆಯುತ್ತಿರುವ ಟೂರ್ನಮೆಂಟ್‌ನಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದಾರೆ. ಕಳೆದ ಭಾನುವಾರ (ಫೆಬ್ರವರಿ 15) ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ, ಅವರು ಮೂರು ಓವರ್‌ಗಳಲ್ಲಿ 14 ರನ್‌ಗಳಿಗೆ ಒಂದು ವಿಕೆಟ್ ಪಡೆದಿದ್ದರು. ಅಭಿಷೇಕ್ ಶರ್ಮ ಬದಲು ಸಂಜು ಸ್ಯಾಮ್ಸನ್ ಅವಕಾಶ ಪಡೆದರೂ ಅಚರಿಯಿಲ್ಲ. ಅಭಿಷೇಕ್ ಆಡಿದ 4 ಪಂದ್ಯಗಳಿಂದ ಕೇಲವ 15 ರನ್ ಮಾತ್ರ ಗಳಿಸಿದ್ದಾರೆ. ಮೂರು ಪಂದ್ಯಗಳಲ್ಲ ಶೂನ್ಯ ಸುತ್ತಿದ್ದರು.