ಭಾರತ vs ಅಫ್ಘಾನಿಸ್ತಾನ ಕ್ರಿಕೆಟ್ ಸರಣಿ ವೇಳಾಪಟ್ಟಿ ಪ್ರಕಟ
Team ODI schedule: ಮೇ 31ರಂದು ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಗಿದ ಕೂಡಲೇ ಅಫ್ಘಾನಿಸ್ತಾನ ತಂಡದ ಪ್ರವಾಸ ಆರಂಭವಾಗಲಿದೆ. ಜೂನ್ 6ರಂದು ಚಂಡೀಗಢದ ಮುಲ್ಲನಪುರದಲ್ಲಿ ಟೆಸ್ಟ್ ಪಂದ್ಯದೊಂದಿಗೆ ಪ್ರವಾಸ ಆರಂಭವಾಗಲಿದೆ.
India vs Afghanistan -
ನವದೆಹಲಿ, ಮಾ.3: ಅಫ್ಘಾನಿಸ್ತಾನ(Afghanistan vs India) ತಂಡ ಜೂನ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದು, ಒಂದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ ಎಂದು ಬಿಸಿಸಿಐ ಸೋಮವಾರ ಪ್ರಕಟಿಸಿದೆ. ಈ ಮೂರು ಏಕದಿನ ಸರಣಿಯೊಂದಿಗೆ, ಭಾರತೀಯ ಪುರುಷರ ತಂಡವು 2026 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ವಿಶ್ವಕಪ್ 2027 ರವರೆಗೆ ಒಟ್ಟು 15 ಏಕದಿನ ಪಂದ್ಯಗಳನ್ನು ಆಡಲಿದೆ.
ಈ ವರ್ಷದ ಆರಂಭದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಿತ್ತು. ಆ ಸರಣಿಯಲ್ಲಿ 1-2 ಅಂತರದಲ್ಲಿ ಸೋಲು ಕಂಡಿತ್ತು. ಕೊನೆಯ ಏಕದಿನ ವಿಶ್ವಕಪ್ ಆಡಲಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಗೆ ಈ ಸರಣಿಗಳು ಅತ್ಯಂತ ಮಹತ್ವದ್ದಾಗಿದೆ.
ಮೇ 31ರಂದು ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಗಿದ ಕೂಡಲೇ ಅಫ್ಘಾನಿಸ್ತಾನ ತಂಡದ ಪ್ರವಾಸ ಆರಂಭವಾಗಲಿದೆ. ಜೂನ್ 6ರಂದು ಚಂಡೀಗಢದ ಮುಲ್ಲನಪುರದಲ್ಲಿ ಟೆಸ್ಟ್ ಪಂದ್ಯದೊಂದಿಗೆ ಪ್ರವಾಸ ಆರಂಭವಾಗಲಿದೆ. ಆದರೆ, ಈ ಟೆಸ್ಟ್ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಷಿನ್‌ನ ಪಾಯಿಂಟ್ಸ್‌ಗೆ ಸೇರುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
T20 World Cup: ಸಂಜು ಸ್ಯಾಮ್ಸನ್ ಬಗ್ಗೆ ಬಿಸಿಸಿಐಗೆ ಎಚ್ಚರಿಕೆ ನೀಡಿದ ಸೌರವ್ ಗಂಗೂಲಿ!
ಟಿ20 ವಿಶ್ವಕಪ್‌ನಲ್ಲಿ ಅಫ್ಗಾನಿಸ್ತಾನ ತಂಡವು ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಆದರೆ ತಂಡದ ಪ್ರದರ್ಶನ ಮಾತ್ರ ಅಮೋಘವಾಗಿತ್ತು. ಅದೃಷ್ಟ ಕೈ ಹಿಡಿಯದ ಕಾರಣ ತಂಡ ಸೋಲು ಕಂಡಿತ್ತು. ಅಫ್ಘಾನಿಸ್ತಾನ ತಂಡ ಇತ್ತೀಚೆಗಷ್ಟೇ ರಿಚರ್ಡ್ ಪೈಬಸ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿತ್ತು. ಯುಎಇಯಲ್ಲಿ ಶ್ರೀಲಂಕಾ ವಿರುದ್ಧದ ವೈಟ್-ಬಾಲ್ ಸರಣಿಯ ಮೂಲಕ ಅವರ ಕೋಚಿಂಗ್ ಆರಂಭಗೊಳ್ಳಲಿದೆ. ಮೊದಲ ಟಿ20ಐ ಮಾರ್ಚ್ 13 ರಂದು ಶಾರ್ಜಾದಲ್ಲಿ ನಡೆಯಲಿದೆ.
ಸರಣಿಯ ವೇಳಾಪಟ್ಟಿ
ಜೂನ್ 6: ಭಾರತ vs ಅಫ್ಘಾನಿಸ್ತಾನ, ಟೆಸ್ಟ್, ತಾಣ; ಚಂಡೀಗಢ
ಜೂನ್ 14: ಭಾರತ vs ಅಫ್ಘಾನಿಸ್ತಾನ, ಮೊದಲ ಏಕದಿನ ಪಂದ್ಯ, ತಾಣ; ಧರ್ಮಶಾಲಾ
ಜೂನ್ 17: ಭಾರತ vs ಅಫ್ಘಾನಿಸ್ತಾನ, ಎರಡನೇ ಏಕದಿನ ಪಂದ್ಯ, ತಾಣ; ಲಕ್ನೋ
ಜೂನ್ 20: ಭಾರತ vs ಅಫ್ಘಾನಿಸ್ತಾನ ಮೂರನೇ ಏಕದಿನ ಪಂದ್ಯ, ತಾಣ; ಚೆನ್ನೈ
2026 ರ ಭಾರತದ ಏಕದಿನ ವೇಳಾಪಟ್ಟಿ ಇಲ್ಲಿದೆ
ಅಫ್ಘಾನಿಸ್ತಾನ ವಿರುದ್ಧ 3 ಏಕದಿನ ಪಂದ್ಯಗಳು
ಇಂಗ್ಲೆಂಡ್ ವಿರುದ್ಧ 3 ಏಕದಿನ ಪಂದ್ಯಗಳು(ವಿದೇಶದಲ್ಲಿ)
ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ ಪಂದ್ಯಗಳು
ನ್ಯೂಜಿಲೆಂಡ್ ವಿರುದ್ಧ 3 ಏಕದಿನ ಪಂದ್ಯಗಳು(ವಿದೇಶದಲ್ಲಿ)
ಶ್ರೀಲಂಕಾ ವಿರುದ್ಧ 3 ಏಕದಿನ ಪಂದ್ಯಗಳು