ಮುಂಬಯಿ: ಭಾರತದ ಅನುಭವಿ ಆಟಗಾರ ವಿರಾಟ್ ಕೊಹ್ಲಿ(Virat Kohli) ತಮ್ಮ ಶ್ರೇಷ್ಠ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಸತತ ಏಕದಿನ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ಬಳಿಕ ಅವರ ಪತ್ನಿ ಅನುಷ್ಕಾ ಶರ್ಮ(Anushka Sharma) ಆನ್‌ಲೈನ್‌ನಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ.
ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ವೈಫಲ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪೋಸ್ಟ್‌ಗಳು, ಅನುಷ್ಕಾ ಶರ್ಮಾ ಅವರನ್ನು ದೂಷಿಸಲಾಗಿದೆ. ಕೆಲ ನೆಟ್ಟಗರು ಕೊಹ್ಲಿಯ ಕ್ರಿಕೆಟ್ ವೃತ್ತಿಜೀವನಕ್ಕೆ ಅನುಷ್ಕಾ ಸರಿಪಡಿಸಲಾಗದ ಹಾನಿ ಉಂಟುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಕೆಲವರು, ಅನುಷ್ಕಾ ಅವರ ಲಂಡನ್ ಮೋಹದಿಂದ ಕೊಹ್ಲಿಯ ಕ್ರಿಕೆಟ್ ಹಾಳಾಯಿತು ಎಂದು ದೂರಿದ್ದಾರೆ. ಕೆಲ ಕೊಹ್ಲಿ ಅಭಿಮಾನಿಗಳು ಅನುಷ್ಕಾ ಬೆಂಬಲಕ್ಕೆ ನಿಂತಿದ್ದಾರೆ. ಕೊಹ್ಲಿ ಉತ್ತಮವಾಗಿ ಆಡುತ್ತಿರುವಾಗ ಅದರ ಶ್ರೇಯವನ್ನು ಅನುಷ್ಕಾಗೆ ನೀಡಲಿಲ್ಲ. ಈಗ ಅವರು ವೈಫಲ್ಯ ಕಾಣುತ್ತರುವಾಗ ಮಾತ್ರ ಅನುಷ್ಕಾ ಕಾರಣ ಎನ್ನುವುದು ನಾಚಿಕೆಗೇಡು ಎಂದು ಹೇಳಿದ್ದಾರೆ.
ಇದನ್ನೂ ಓದಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಲಂಡನ್‌ಗೆ ಶಿಫ್ಟ್ ಆಗಲು ಬಲವಾದ ಕಾರಣ ಇಲ್ಲಿದೆ!
ಕೊಹ್ಲಿ ಶೂನ್ಯಕ್ಕೆ ಔಟಾದ ತಕ್ಷಣ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅವರು ಟ್ವೀಟ್ ಮಾಡಿ, ಕೊಹ್ಲಿ ಮೇಲೆ ಭಾರತೀಯ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟಿದ್ದರು, ಆದರೆ ಅವರು ಈಡೇರಿಸಲು ವಿಫಲರಾದರು ಎಂದು ಬರೆದಿದ್ದಾರೆ.
ರನ್ ಮಷಿನ್ ಎಂದು ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಮಂಕಾದಂತೆ ಕಾಣುತ್ತಿದೆ. ವೃತ್ತಿಜೀವನದಲ್ಲಿ ಮೊದಲ ಬಾರಿಗೆ, ಅವರು ಸತತ ಏಕದಿನ ಪಂದ್ಯಗಳಲ್ಲಿ ತಮ್ಮ ಖಾತೆಯನ್ನು ತೆರೆಯಲು ವಿಫಲರಾದರು. ಭಾನುವಾರ (ಅಕ್ಟೋಬರ್ 19) ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಎಂಟು ಎಸೆತಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ದ್ವಿತೀಯ ಪಂದ್ಯದಲ್ಲಿ ಮೂರು ಎಸೆತಗಳಲ್ಲಿ ಆಟ ಮುಗಿಸಿದರು.