ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ ಲಂಡನ್‌ಗೆ ಶಿಫ್ಟ್‌ ಆಗಲು ಬಲವಾದ ಕಾರಣ ಇಲ್ಲಿದೆ!

ಭಾರತೀಯ ಆಧನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ಹಾಗೂ ಅವರೆ ಪತ್ನಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಅವರು ಇಂಗ್ಲೆಂಡ್‌ನ ಲಂಡನ್‌ನಲ್ಲಿ ನೆಲೆಸಿದ್ದಾರೆ. ವಿರಾಟ್‌ ಕೊಹ್ಲಿ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಬಳಿಕ ಅವರು ತಮ್ಮ ಕುಟುಂಬವನ್ನು ಮುಂಬೈನಿಂದ ಲಂಡನ್‌ಗೆ ಶಿಫ್ಟ್‌ ಮಾಡಿದ್ದರು.

ವಿರಾಟ್‌ ಕೊಹ್ಲಿ ಲಂಡನ್‌ಗೆ ಶಿಫ್ಟ್‌ ಆಗಲು ಕಾರಣ ಇಲ್ಲಿದೆ!

ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ ಲಂಡನ್‌ನಲ್ಲಿ ನೆಲೆಸಲು ಕಾರಣವೇನು?

Profile Ramesh Kote Aug 14, 2025 4:22 PM

ನವದೆಹಲಿ: ಭಾರತೀಯ ಕ್ರಿಕೆಟ್‌ನ ಆಧುನಿಕ ದಿಗ್ಗಜ ವಿರಾಟ್‌ ಕೊಹ್ಲಿ(Virat Kohli) ಹಾಗೂ ಅವರ ಪತ್ನಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ (Anushka Sharma) ಇಂಗ್ಲೆಂಡ್‌ನ ಲಂಡನ್‌ನಲ್ಲಿ ನೆಲೆಸಿದ್ದಾರೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ವೇಳೆ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದಕ್ಕೂ ಮುನ್ನ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಅವರು ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಕುಟುಂಬ ಸಮೇತವಾಗಿ ಇಂಗ್ಲೆಂಡ್‌ನ ಲಂಡನ್‌ಗೆ ಸ್ಥಳಾಂತರವಾಗಿದ್ದಾರೆ. ಅಂದ ಹಾಗೆ ಕೊಹ್ಲಿ ಕುಟುಂಬ ಏಕೆ ಭಾರತವನ್ನು ತೊರೆದು ಲಂಡನ್‌ನಲ್ಲಿ ನೆಲೆಯೂರಿದೆ ಎಂಬ ಬಗ್ಗೆ ಇನ್ನು ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಪತಿ ಡಾ. ಶ್ರೀರಾಮ್‌ ನೆನೆ ಅವರು ವಿರುಷ್ಕಾ ದಂಪತಿ ಲಂಡನ್‌ಗೆ ಸ್ಥಳಾಂತರವಾಗಲು ಪ್ರಮುಖ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ಅಂದರೆ, ತನ್ನ ಪತ್ನಿ ಮಾಧುರಿ ದೀಕ್ಷಿತ್‌ ಅವರು ಅನುಷ್ಕಾ ಶರ್ಮಾ ಅವರ ಜೊತೆ ಈ ಬಗ್ಗೆ ಸಂಭಾಷಣೆ ನಡೆಸಿದ್ದರು. ಈ ವೇಳೆ ಅನುಷ್ಕಾ ಶರ್ಮಾ ಲಂಡನ್‌ಗೆ ತೆರಳುವ ಬಗ್ಗೆ ತಮ್ಮ ಪತ್ನಿಯ ಬಳಿ ಮಾತನಾಡಿದ್ದರು ಎಂದು ಶ್ರೀರಾಮ್‌ ನೆನೆ ಬಹಿರಂಗಪಡಿಸಿದ್ದಾರೆ. ಭಾರತದಲ್ಲಿನ ಖ್ಯಾತಿ ಹಾಗೂ ಅಭಿಮಾನಿಗಳ ಮತ್ತು ಮಾಧ್ಯಮಗಳ ಒತ್ತಡದಿಂದ ಸಾಮಾನ್ಯ ಜೀವನ ನಡೆಸುವ ಹಾಗೂ ಇದು ತಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ಪೋಷಿಸಲು ಅವರು ಲಂಡನ್‌ಗೆ ತೆರಳಿದ್ದಾರೆ ಎಂದು ಶ್ರೀರಾಮ್ ತಿಳಿಸಿದ್ದಾರೆ.

ಬಾಬರ್‌ ಆಝಮ್‌ ವೈಫಲ್ಯಕ್ಕೆ ವಿರಾಟ್‌ ಕೊಹ್ಲಿಯೇ ಕಾರಣ ಎಂದ ಅಹ್ಮದ್‌ ಶೆಹ್ಝಾದ್‌!

"ಅವರು ತಮ್ಮ ಯಶಸ್ಸನ್ನು ಇಲ್ಲಿ ಆನಂದಿಸಲು ಸಾಧ್ಯವಾಗುತ್ತಿಲ್ಲ, ಈ ಬಲವಾದ ಕಾರಣದಿಂದಲೇ ವಿರುಷ್ಕಾ ದಂಪತಿ ಲಂಡನ್‌ಗೆ ತೆರಳಿದೆ. ಅವರು ಇಲ್ಲಿ ಏನೇ ಮಾಡಿದರೂ ಆಕರ್ಷಣೆಯಾಗಲಿದೆ. ಇದರಿಂದ ಅವರಿಗೆ ಉಸಿರುಗಟ್ಟಿದ ವಾತಾವರಣ ಉಂಟಾಗಲಿದೆ. ಅಭಿಮಾನಿಗಳ ಪ್ರೀತಿಯನ್ನು ನಾನು ಶ್ಲಾಘಿಸುತ್ತೇನೆ ಆದರೆ, ಇದು ಅತಿಯಾಗಬಾರದು. ಅವರು ಭೋಜನಕ್ಕೆ ತೆರಳಿದರೂ ಅಭಿಮಾನಿಗಳ ಕಾಟವನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವರು ತಮ್ಮ ಜೀವನವನ್ನು ಆನಂದಿಸಲು ಆಗುತ್ತಿಲ್ಲ. ಅನುಷ್ಕಾ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಪ್ರೀತಿಯ ವ್ಯಕ್ತಿಗಳು ಹಾಗೂ ಅವರು ತಮ್ಮ ಮಕ್ಕಳನ್ನು ಸಾಮಾನ್ಯವಾಗಿ ಎಲ್ಲರಂತೆ ಬೆಳೆಸಲು ಎದುರು ನೋಡುತ್ತಿದ್ದಾರೆ ," ಎಂದು ಅವರು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಟೆಸ್ಟ್‌ ನಿವೃತ್ತಿ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಆಕಾಶ್‌ ಚೋಪ್ರಾ!

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸಂಬಂಧ ಬಾಲಿವುಡ್ ಮತ್ತು ಕ್ರಿಕೆಟ್‌ನ ಅತ್ಯಂತ ಪ್ರೀತಿಯ ಕಥೆಗಳಲ್ಲಿ ಒಂದಾಗಿದೆ. ಅವರು 2013ರಲ್ಲಿ ಮೊದಲ ಬಾರಿ ಜಾಹೀರಾತು ಚಿತ್ರೀಕರಣದ ಸಮಯದಲ್ಲಿ ಭೇಟಿಯಾಗಿದ್ದರು ಮತ್ತು 2017 ರಲ್ಲಿ ಇಟಲಿಯಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ವಿವಾಹವಾಗಿದ್ದರು. 2021ರ ಜನವರಿಯಲ್ಲಿ ಮಗಳು ವಾಮಿಕಾ ಮತ್ತು 2024ರ ಫೆಬ್ರವರಿಯಲ್ಲಿ ತಮ್ಮ ಮಗ ಅಕಾಯ್ ಜನಿಸಿದ್ದರು. ವಿರಾಟ್ ಕೊಹ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಉಳಿದುಕೊಂಡಿದ್ದಾರೆ. ಇದರ ಜೊತೆಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮುಂದುವರಿಯಲಿದ್ದಾರೆ.

ಮಾಧ್ಯಮದ ತೀವ್ರ ಪ್ರಚಾರದಿಂದ ದೂರವಾಗಿ ತಮ್ಮ ಮಕ್ಕಳನ್ನು ಬೆಳೆಸುವ ಉದ್ದೇಶದಿಂದ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಲಾ ಶರ್ಮಾ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮಕ್ಕಳ ಬಾಲ್ಯದ ಜೀವನ ಅತ್ಯಂತ ಮುಖ್ಯವಾಗಿದೆ ಎಂಬುದನ್ನು ವಿರುಷ್ಕಾ ದಂಪತಿ ನಂಬಿದೆ.