ಮಸ್ಕತ್: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ( Anvay Dravid ) 2026ರ ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ (U19 Asia Cup) ಟೂರ್ನಿಯಲ್ಲಿ ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರೂ, ಇಡೀ ಟೂರ್ನಿಯಲ್ಲಿ ಅನ್ವಯ್ ಅವರ ಕಳಪೆ ಬ್ಯಾಟಿಂಗ್ ಅಂಕಿಅಂಶಗಳು ಈಗ ಚರ್ಚೆಗೆ ಗ್ರಾಸವಾಗಿವೆ.
17 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ಅನ್ವಯ್ ದ್ರಾವಿಡ್, ಟೂರ್ನಿಯ ಐದೂ ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅವರಿಗೆ ಬ್ಯಾಟಿಂಗ್ ಮಾಡಲು ಸಿಕ್ಕಿದ್ದು ಕೇವಲ ಮೂರು ಇನ್ನಿಂಗ್ಸ್ಗಳಲ್ಲಿ ಮಾತ್ರ. ಈ ಮೂರು ಇನ್ನಿಂಗ್ಸ್ಗಳಿಂದ ಅವರು 13.67ರ ಸರಾಸರಿಯಲ್ಲಿ ಕೇವಲ 41 ರನ್ ಗಳಿಸಲಷ್ಟೇ ಶಕ್ತರಾದರು. ನೇಪಾಳದ ವಿರುದ್ಧ ಭಾರತ ಸುಲಭ ಜಯ ಸಾಧಿಸಿದ ಕಾರಣ ಅನ್ವಯ್ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ.
ಬಳಿಕ ಪಾಕಿಸ್ತಾನ ವಿರುದ್ಧ ಒತ್ತಡದ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಅನ್ವಯ್, 16 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ಸ್ಪಿನ್ನರ್ ನಿಕಾಬ್ ಶಫೀಕ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಔಟಾದರು. ಈ ಪಂದ್ಯವನ್ನು ಭಾರತ 3 ವಿಕೆಟ್ಗಳಿಂದ ಸೋತಿತ್ತು. ಯುಎಇ ವಿರುದ್ಧ ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದ ಅನ್ವಯ್, 9 ಎಸೆತಗಳಲ್ಲಿ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಫ್ಘಾನಿಸ್ತಾನ ವಿರುದ್ಧ (ಸೆಮಿಫೈನಲ್): 228 ರನ್ಗಳ ಗುರಿಯನ್ನು ಭಾರತ ಕೇವಲ 2 ವಿಕೆಟ್ ಕಳೆದುಕೊಂಡು ತಲುಪಿದ್ದರಿಂದ ಅನ್ವಯ್ಗೆ ಬ್ಯಾಟಿಂಗ್ ಸಿಗಲಿಲ್ಲ.
ಕೊನೆಯದಾಗಿ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ 338 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಭಾರತಕ್ಕೆ ನಿರ್ಣಾಯಕ ಹಂತದಲ್ಲಿ ಅನ್ವಯ್ ಆಸರೆಯಾಗುವ ನಿರೀಕ್ಷೆಯಿತ್ತು. 12 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 19 ರನ್ ಗಳಿಸಿ ಉತ್ತಮ ಲಯದಲ್ಲಿದ್ದ ಅವರು, ಅನಗತ್ಯ ರನ್ ಕದಿಯಲು ಹೋಗಿ ಫರ್ಹಾನ್ ಯೂಸುಫ್ ಅವರ ನೇರ ಥ್ರೋಗೆ ರನೌಟ್ ಆದರು.
U19 ಏಷ್ಯಾ ಕಪ್: Last ball Sensation! ಥಂಡಾ ಹೊಡೆದ ಪಾಕ್! ಟೀಮ್ ಇಂಡಿಯಾ ರಣಕೇಕೆ!
ಬ್ಯಾಟಿಂಗ್ನಲ್ಲಿ ನಿರಾಸೆ ಮೂಡಿಸಿದರೂ, ವಿಕೆಟ್ ಹಿಂದೆ ಅನ್ವಯ್ ಚುರುಕಿನ ಪ್ರದರ್ಶನ ನೀಡಿದ್ದಾರೆ. ಇಡೀ ಟೂರ್ನಿಯಲ್ಲಿ ಒಟ್ಟು 5 ಕ್ಯಾಚ್ಗಳನ್ನು ಹಿಡಿದಿರುವ ಅವರು, ಪಾಕಿಸ್ತಾನ ವಿರುದ್ಧದ ಗುಂಪು ಹಂತದ ಪಂದ್ಯವೊಂದರಲ್ಲೇ 3 ಕ್ಯಾಚ್ ಪಡೆದಿದ್ದರು. ಅಲ್ಲದೆ, ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಮೊಹಮ್ಮದ್ ಸಯ್ಯಮ್ ಅವರನ್ನು ರನೌಟ್ ಮಾಡಿದ್ದರು.