ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

U19 ಏಷ್ಯಾ ಕಪ್‌: Last ball Sensation! ಥಂಡಾ ಹೊಡೆದ ಪಾಕ್! ಟೀಮ್‌ ಇಂಡಿಯಾ ರಣಕೇಕೆ!

U19 Asia Cup: ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್‌ 19 ಏಷ್ಯಾ ಕಪ್ ಫೈನಲ್ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಮೊದಲ ಹಂತದ ಪಂದ್ಯದಲ್ಲಿ ಭಾರತವನ್ನು ಸೋಲಿಸಿ ಗೇಲಿ ಮಾಡಿದ್ದ ಪಾಕಿಸ್ತಾನದ ಮುಖಭಂಗವಾಗಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಮ್‌ ಇಂಡಿಯಾ ರೋಮಾಂಚಕಾರಿ ಗೆಲುವು ಸಾಧಿಸಿದೆ.

Last ball Sensation! ಥಂಡಾ ಹೊಡೆದ ಪಾಕ್! ಟೀಮ್‌ ಇಂಡಿಯಾ ರಣಕೇಕೆ!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 14, 2026 10:14 PM

ಮಸ್ಕತ್ : ಭಾರತ ಮತ್ತು ಪಾಕಿಸ್ತಾನ (IND VS PAK) ನಡುವಿನ ಅಂಡರ್‌ 19 ಏಷ್ಯಾ ಕಪ್ ಫೈನಲ್ (U19 Asia Cup) ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಮೊದಲ ಹಂತದ ಪಂದ್ಯದಲ್ಲಿ ಭಾರತವನ್ನು ಸೋಲಿಸಿ ಗೇಲಿ ಮಾಡಿದ್ದ ಪಾಕಿಸ್ತಾನದ ಮುಖಭಂಗವಾಗಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಮ್‌ ಇಂಡಿಯಾ ರೋಮಾಂಚಕಾರಿ ಗೆಲುವು ಸಾಧಿಸಿ ಚಾಂಪಿಯನ್‌ ಆಗಿ ಹೊರಹೊಮ್ಮುತ್ತಲೇ ಶತಕೋಟಿ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿದೆ. ಅತ್ತ, ಈ ಟೂರ್ನಿಯಲ್ಲಿ ಭಾರತವನ್ನು ಮತ್ತೊಮ್ಮೆ ಸೋಲಿಸಿ ಚಾಂಪಿಯನ್‌ ಆಗುವ ಕನಸು ಕಾಣುತ್ತಿದ್ದ ಪಾಕಿಸ್ತಾನದ ಅಭಿಮಾನಿಗಳ ಮುಖದಲ್ಲಿ ಪ್ರೇತಕಳೆ ಆವರಿಸಿದೆ.

ಕೊನೆಯ ಬಾಲ್‌ನಲ್ಲಿ ಮೂರು ರನ್‌ಗಳ ಅವಶ್ಯಕತೆ ಇತ್ತು. ಈ ಸವಾಲು ಅತ್ಯಂತ ಕಠಿಣವಾಗಿತ್ತು. ಏಕೆಂದರೆ ಭಾರತದ್ದು ಕೊನೆಯ ವಿಕೆಟ್‌ ಜತೆಯಾಟವಾಗಿತ್ತು. ಆದರೆ ಮೊಹಿತ್ ಉಲ್ವಾ ಅವರ ಅಬ್ಬರದ ಆಟದಿಂದ ಭಾರತ ತಂಡವು ಗೆಲುವಿನ ನಗೆ ಬೀರಿತು. ಪಂದ್ಯದ ಅಂತಿಮ ಎಸೆತದಲ್ಲಿ ಇವರು ಬೌಂಡರಿ ಬಾರಿಸುತ್ತಲೇ ಪಾಕಿಸ್ತಾನ ತಂಡ ಥಂಡಾ ಹೊಡೆಯಿತು. ಗೆಲುವಿನ ರನ್ ಹರಿದುಬಂದಾಗ ಇಡೀ ಭಾರತೀಯ ಆಟಗಾರರ ಬಳಗ ಮೈದಾನಕ್ಕೆ ನುಗ್ಗಿ ಸಂಭ್ರಮಾಚರಣೆ ನಡೆಸಿತು. ಗ್ರೂಪ್ ಹಂತದ ಪಂದ್ಯದಲ್ಲಿ ಎದುರಾದ ಸೋಲಿಗೆ ಭಾರತ ತಂಡವು ಈ ಮೂಲಕ ಸರಿಯಾದ ಸಮಯದಲ್ಲಿ ಸೇಡು ತೀರಿಸಿಕೊಂಡಿತು.

ಸಂಕಷ್ಟದ ಸಮಯದಲ್ಲಿ ಕ್ರೀಸ್‌ಗೆ ಬಂದ ಮೊಹಿತ್ ಉಲ್ವಾ ಶಾಂತಚಿತ್ತದಿಂದ ಆಡಿ, ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿ ತೋಳುಗಳನ್ನು ಮೇಲಕ್ಕೆತ್ತಿ ಸಂಭ್ರಮ ವ್ಯಕ್ತಪಡಿಸಿದರು. ಆ ಬಳಿಕ ಭಾರತೀಯ ಆಟಗಾರರು ತ್ರಿವರ್ಣ ಧ್ವಜವನ್ನು ಹೊದ್ದುಕೊಂಡು ವಿಜಯೋತ್ಸವ ಆಚರಿಸಿದರು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 337 ರನ್‌ಗಳ ದೊಡ್ಡ ಮೊತ್ತವನ್ನು ಕಲೆಹಾಕಿತು. ಗುರಿ ಬೆನ್ನಟ್ಟಿದ ಭಾರತಕ್ಕೆ ಆರ್ಯವೀರ್ ಸೆಹ್ವಾಗ್ ಮತ್ತು ಲಕ್ಷ್ಯ ರಾಜೇಶ್ ರಾಯ್‌ಚಂದಾನಿ ಅರ್ಧಶತಕಗಳ ಮೂಲಕ ಉತ್ತಮ ಆರಂಭ ಒದಗಿಸಿದರು. ಆದರೆ ಮಧ್ಯಮ ಕ್ರಮದಲ್ಲಿ ವಿಕೆಟ್‌ಗಳು ಪತನಗೊಂಡಿದ್ದರಿಂದ ಭಾರತ ತಂಡವು ತೀವ್ರ ಒತ್ತಡಕ್ಕೆ ಸಿಲುಕಿತು. 37ನೇ ಓವರ್‌ನಲ್ಲಿ ನಾಯಕ ಲಕ್ಷ್ಯ ರಾಜೇಶ್ ರಾಯ್‌ಚಂದಾನಿ ಮತ್ತು ಅನ್ವಯ್ ದ್ರಾವಿಡ್ ಸತತ ಎಸೆತಗಳಲ್ಲಿ ಔಟಾದಾಗ ಭಾರತ ಸೋಲಿನ ಸುಳಿಗೆ ಸಿಲುಕಿತ್ತು. ಆ ಬಳಿಕ ಮನಾಲ್ ಚೌಹಾಣ್ ಹಾಗೂ ಮೊಹಿತ್ ಉಲ್ವಾ ತಂಡವನ್ನು ಪಾರು ಮಾಡಲು ಅದ್ಭುತ ಹೋರಾಟ ನಡೆಸಿದರು.

"ನಿಮ್ಮ ಗೆಲುವು ಹಲವರಿಗೆ ಸ್ಫೂರ್ತಿ"; ಪಾಕ್‌ ಮಣಿಸಿದ U19 ಕ್ರಿಕೆಟ್‌ ತಂಡಕ್ಕೆ ಮೋದಿ ಅಭಿನಂದನೆ

ಮನಾಲ್ ಚೌಹಾಣ್ 48ನೇ ಓವರ್‌ನಲ್ಲಿ ಔಟಾದಾಗ ಪಾಕಿಸ್ತಾನ ಶಿಬಿರದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಆದರೆ ಕೊನೆಯ ಹಂತದಲ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಮೊಹಿತ್ ಉಲ್ವಾ ಅಜೇಯ 49 ರನ್ ಸಿಡಿಸಿ, ಅಂತಿಮ ಎಸೆತದಲ್ಲಿ ರೋಚಕ ಗೆಲುವು ತಂದುಕೊಡುವ ಮೂಲಕ ಭಾರತಕ್ಕೆ ಒಂಬತ್ತನೇ U19 ಏಷ್ಯಾ ಕಪ್ ಕಿರೀಟವನ್ನು ಗೆದ್ದುಕೊಟ್ಟರು. ಈ ಮೂಲಕ ಟೀಮ್‌ ಇಂಡಿಯಾ 8ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.