ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Arshad Nadeem: ಸುಳ್ಳು ಭರವಸೆ ಬಗ್ಗೆ ಪಾಕ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಒಲಿಂಪಿಕ್‌ ಚಾಂಪಿಯನ್‌ ನದೀಂ

ನೀರಜ್‌ ಚೋಪ್ರಾ ಮತ್ತು ಅರ್ಶದ್‌ ನದೀಂ ಆ. 16ರಂದು ಪೋಲೆಂಡ್‌ನ‌ ಸಿಲೇಸಿಯಾದಲ್ಲಿ ನಡೆಯುವ ಡೈಮಂಡ್‌ ಲೀಗ್‌ ಜಾವೆಲಿನ್‌ನಲ್ಲಿ ಇವರು ಕಣಕ್ಕಿಳಿಯಲಿದ್ದಾರೆ.2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ನೀರಜ್‌ ಮತ್ತು ನದೀಮ್‌ ಒಂದೇ ಕೂಟದಲ್ಲಿ ಸ್ಪರ್ಧಿಸುತ್ತಿರುವುದು ಇದೇ ಮೊದಲು.

ಇಸ್ಲಮಾಬಾದ್: ಪ್ಯಾರಿಸ್‌ ಒಲಿಂಪಿಕ್ಸ್‌ 2024ರ (Paris Olympics 2024) ಜಾವೆಲಿನ್‌ ಥ್ರೋ (Javelin Throw) ವಿಭಾಗದಲ್ಲಿ ಒಲಿಂಪಿಕ್‌ ದಾಖಲೆಯೊಂದಿಗೆ ಚಿನ್ನದ ಪದಕ ಗೆದಿದ್ದ ಪಾಕಿಸ್ತಾನದ ಅರ್ಶದ್‌ ನದೀಂಗೆ(Arshad Nadeem) ಪಾಕಿಸ್ತಾನದ ಮಂತ್ರಿಗಳು ಮತ್ತು ಗಣ್ಯರು ಹಲವಾರು ನಗದು ಸೇರಿ ಹಲವು ಬಹುಮಾನಗಳನ್ನು ಘೋಷಿಸಿದ್ದರು. ಇದೀಗ ನದೀಂ ತಮಗೆ ಕೊಟ್ಟ ಎಲ್ಲಾ ಭರವಸೆಗಳು ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಒಲಿಂಪಿಕ್‌ ಚಿನ್ನದ ಪದಕ ಗೆದ್ದ ಬಳಿಕ ಹಲವು ಭರವಸೆಗಳನ್ನು ನೀಡಲಾಗಿತ್ತು. ನಗದು ಬಹುಮಾನ ಹೊರತುಪಡಿಸಿ ಜಮೀನು ನೀಡುವ ಎಲ್ಲಾ ಭರವಸೆ ಸುಳ್ಳಾಗಿದೆ. ಅದು ನನಗೆ ಈವರೆಗೂ ಸಿಕ್ಕಿಲ್ಲ ಎಂದಿದ್ದಾರೆ. ನದೀಂ ಎಸೆದ 92.97 ಮೀ ಜಾವೆಲಿನ್ ಪಾಕಿಸ್ತಾನಕ್ಕೆ 32 ವರ್ಷಗಳ ನಂತರ ಮೊದಲ ಒಲಿಂಪಿಕ್ ಪದಕವನ್ನು ಗೆದ್ದುಕೊಟ್ಟಿತ್ತು.

ನೀರಜ್‌ ಚೋಪ್ರಾ ಮತ್ತು ಅರ್ಶದ್‌ ನದೀಂ ಆ. 16ರಂದು ಪೋಲೆಂಡ್‌ನ‌ ಸಿಲೇಸಿಯಾದಲ್ಲಿ ನಡೆಯುವ ಡೈಮಂಡ್‌ ಲೀಗ್‌ ಜಾವೆಲಿನ್‌ನಲ್ಲಿ ಇವರು ಕಣಕ್ಕಿಳಿಯಲಿದ್ದಾರೆ.2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ನೀರಜ್‌ ಮತ್ತು ನದೀಮ್‌ ಒಂದೇ ಕೂಟದಲ್ಲಿ ಸ್ಪರ್ಧಿಸುತ್ತಿರುವುದು ಇದೇ ಮೊದಲು. ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದಿದ್ದ ನೀರಜ್‌ ಚೋಪ್ರಾ ಕ್ಲಾಸಿಕ್‌ ಕ್ರೀಡಾಕೂಟದಲ್ಲಿ ಅರ್ಶದ್‌ ಪಾಲ್ಗೊಂಡಿರಲಿಲ್ಲ.

ಪಾಕ್‌ ಕ್ರಿಕೆಟ್‌ ಮಂಡಳಿಯಲ್ಲಿ 180 ಕೋಟಿ ಅವ್ಯವಹಾರ

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಲ್ಲಿ (ಪಿಸಿಬಿ) ಸುಮಾರು 180 ಕೋಟಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಪ್ರಧಾನ ಲೆಕ್ಕಪರಿಶೋಧಕರು ಸಿದ್ಧಪಡಿಸಿರುವ 2023–24ನೇ ಹಣಕಾಸು ವರ್ಷದ ವರದಿಯಲ್ಲಿ ಈ ವಿಚಾರ ಬಯಲಾಗಿದೆ. ಪಿಸಿಬಿಯು ಕಾರ್ಯಕ್ರಮಗಳ ಪ್ರಾಯೋಜಕರಿಂದ 18.6 ಮಿಲಿಯನ್‌ ಡಾಲರ್‌ (₹150 ಕೋಟಿ) ಮೌಲ್ಯದ ಶುಲ್ಕ ಸಂಗ್ರಹಿಸುವಲ್ಲಿ ವಿಫಲವಾಗಿದೆ.

ಇದನ್ನೂ ಓದಿ WCL 2025: ಇಂದಿನಿಂದ ಮಾಜಿ ಕ್ರಿಕೆಟಿಗರ ಲೆಜೆಂಡ್ಸ್‌ ಟೂರ್ನಿ; ಭಾರತಕ್ಕೆ ಪಾಕ್‌ ಮೊದಲ ಎದುರಾಳಿ