ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WCL 2025: ಇಂದಿನಿಂದ ಮಾಜಿ ಕ್ರಿಕೆಟಿಗರ ಲೆಜೆಂಡ್ಸ್‌ ಟೂರ್ನಿ; ಭಾರತಕ್ಕೆ ಪಾಕ್‌ ಮೊದಲ ಎದುರಾಳಿ

World Championship of Legends: ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೇರಲಿವೆ. ಎಲ್ಲ ಮೂರು ನಾಕೌಟ್‌ ಪಂದ್ಯಗಳು ಎಜ್‌ಬಾಸ್ಟನ್‌ ಮೈದಾನದಲ್ಲಿ ನಡೆಯಲಿದೆ. ಸೆಮಿಫೈನಲ್‌ ಪಂದ್ಯಗಳು ಜುಲೈ 31 ರಂದು, ಫೈನಲ್‌ ಪಂದ್ಯ ಆಗಸ್ಟ್‌ 2 ರಂದು ನಡೆಯಲಿದೆ.

ಲೆಜೆಂಡ್ಸ್‌ ಟೂರ್ನಿ; ಭಾರತಕ್ಕೆ ಪಾಕ್‌ ಮೊದಲ ಎದುರಾಳಿ

Profile Abhilash BC Jul 18, 2025 11:10 AM

ಲಂಡನ್‌: ಮಾಜಿ ಆಟಗಾರರ ಎರಡನೇ ಆವೃತ್ತಿಯ ಲೆಜೆಂಡ್ಸ್‌ ವಿಶ್ವ ಚಾಂಪಿಯನ್‌ಶಿಪ್‌ ಕ್ರಿಕೆಟ್‌(WCL 2025) ಟೂರ್ನಿ ಇಂದಿನಿಂದ ಆರಂಭಗೊಳ್ಳಲಿದೆ. ಹಾಲಿ ಚಾಂಪಿಯನ್‌ ಭಾರತ, ಪಾಕಿಸ್ತಾನ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ವೆಸ್ಟ್‌ ಇಂಡೀಸ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡ ಪಾಕಿಸ್ತಾನ ಸವಾಲು ಎದುರಿಸಲಿದೆ. ಪಂದ್ಯಾವಳಿಗಳು ಇಂಗ್ಲೆಂಡ್‌ನ 4 ತಾಣಗಳಾದ ಎಜ್‌ಬಾಸ್ಟನ್‌, ನಾರ್ಥಂಪ್ಟನ್‌, ಲೀಸೆಸ್ಟರ್‌ ಮತ್ತು ಲೀಡ್ಸ್‌ನಲ್ಲಿ ನಡೆಯಲಿದೆ.

ಭಾರತಕ್ಕೆ ಪಾಕ್‌ ಮೊದಲ ಎದುರಾಳಿ

ಯುವರಾಜ್‌ ಸಿಂಗ್‌ ಸಾರಥ್ಯದ ಭಾರತ ತಂಡ ತನ್ನ ಅಭಿಯಾನವನ್ನು ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ಈ ಪಂದ್ಯ ಭಾನುವಾರ ನಡೆಯಲಿದೆ. ಆಪರೇಷನ್‌ ಸಿಂದೂರದ ಬಳಿಕ ಭಾರತ-ಪಾಕ್‌ ಆಡುತ್ತಿರುವ ಮೊದಲ ಕ್ರಿಕೆಟ್‌ ಪಂದ್ಯ ಇದಾಗಿದೆ. ಹೀಗಾಗಿ ಪಂದ್ಯ ಭಾರೀ ಕುತೂಹಲ ಕೆರಳಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನೇ ಸೋಲಿಸಿ ಭಾರತ ಚೊಚ್ಚಲ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.

ಭಾರತ ತಂಡದಲ್ಲಿ ಕನ್ನಡಿಗರಾದ ರಾಬಿನ್‌ ಉತ್ತಪ್ಪ, ಸ್ಟುವರ್ಟ್‌ ಬಿನ್ನಿ, ವಿನಯ್‌ ಕುಮಾರ್‌ ಮತ್ತು ಅಭಿಮನ್ಯು ಮಿಥುನ್‌ ಸ್ಥಾನ ಪಡೆದಿದ್ದಾರೆ. ಭಾರತದ ಎಲ್ಲ ಪಂದ್ಯಗಳು ರಾತ್ರಿ 9ಗಂಟೆಗೆ ಆರಂಭವಾಗಲಿದೆ. ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಪ್ಯಾನ್‌ಕೋಡ್‌(ಒಟಿಟಿ)ಯಲ್ಲಿ ಪ್ರಸಾರವಾಗಲಿದೆ.

ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೇರಲಿವೆ. ಎಲ್ಲ ಮೂರು ನಾಕೌಟ್‌ ಪಂದ್ಯಗಳು ಎಜ್‌ಬಾಸ್ಟನ್‌ ಮೈದಾನದಲ್ಲಿ ನಡೆಯಲಿದೆ. ಸೆಮಿಫೈನಲ್‌ ಪಂದ್ಯಗಳು ಜುಲೈ 31 ರಂದು, ಫೈನಲ್‌ ಪಂದ್ಯ ಆಗಸ್ಟ್‌ 2 ರಂದು ನಡೆಯಲಿದೆ.

ಇದನ್ನೂ ಓದಿ IND vs ENG: ಇಂಗ್ಲೆಂಡ್‌ ವಿರುದ್ಧ ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತ ತಂಡಕ್ಕೆ ಆಘಾತ!

ಭಾರತದ ಪಂದ್ಯಗಳು

ಜುಲೈ 20; ಪಾಕಿಸ್ತಾನ ವಿರುದ್ಧ

ಜುಲೈ 22; ದಕ್ಷಿಣ ಆಫ್ರಿಕಾ ವಿರುದ್ಧ

ಜುಲೈ 26; ಆಸ್ಟ್ರೇಲಿಯಾ ವಿರುದ್ಧ

ಜುಲೈ 27; ಇಂಗ್ಲೆಂಡ್‌ ವಿರುದ್ಧ

ಜುಲೈ 29; ವೆಸ್ಟ್‌ ಇಂಡೀಸ್‌ ವಿರುದ್ಧ

ಭಾರತ ತಂಡ: ಯುವರಾಜ್‌ ಸಿಂಗ್‌ (ನಾಯಕ), ಶಿಖರ್‌ ಧವನ್‌, ಹರ್ಭಜನ್‌ ಸಿಂಗ್‌, ಸುರೇಶ್‌ ರೈನಾ, ಇರ್ಫಾನ್‌ ಪಠಾಣ್‌, ಯೂಸುಫ್‌ ಪಠಾಣ್‌ ರಾಬಿನ್‌ ಉತ್ತಪ್ಪ, ಸ್ಟುವರ್ಟ್‌ ಬಿನ್ನಿ, ವಿನಯ್‌ ಕುಮಾರ್‌, ಅಭಿಮನ್ಯು ಮಿಥುನ್‌, ಅಂಬಾಟಿ ರಾಯುಡು, ಪೀಯೂಸ್‌ ಚಾವ್ಲಾ, ವರುಣ್‌ ಆರನ್‌, ಸಿದ್ಧಾರ್ಥ್‌ ಕೌಲ್‌, ಗುರುಕೀರತ್‌ ಮಾನ್‌.