ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ ಆಟಗಾರರು

ಕಳೆದ ತಿಂಗಳು ಇಂಗ್ಲೆಂಡ್ ಟೆಸ್ಟ್ ಸರಣಿ 2-2 ಡ್ರಾದಲ್ಲಿ ಕೊನೆಗೊಂಡ ನಂತರ ಆಟಗಾರರು ಒಟ್ಟಿಗೆ ತರಬೇತಿ ಪಡೆಯುತ್ತಿರುವುದು ಇದೇ ಮೊದಲು. ನಾಯಕ ಸೂರ್ಯಕುಮಾರ್ ಯಾದವ್, ಉಪನಾಯಕ ಶುಭಮನ್ ಗಿಲ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ತಿಲಕ್ ವರ್ಮಾ ಮತ್ತು ಅಭಿಷೇಕ್ ಶರ್ಮಾ ಎಲ್ಲರೂ ನೆಟ್ಸ್‌ನಲ್ಲಿ ಶುಕ್ರವಾರ ಬ್ಯಾಟಿಂಗ್ ಅಭ್ಯಾಸ ನಡೆಸಿದರು.

ದುಬೈ: ಇಂಗ್ಲೆಂಡ್‌ ಟೆಸ್ಟ್‌ ಸರಣಿ ಬಳಿಕ ಒಂದು ತಿಂಗಳಿನಿಂದ ವಿಶ್ರಾಂತಿಯಲ್ಲಿದ್ದ ಭಾರತದ ಹಲವು ಕ್ರಿಕೆಟಿಗರು ಇದೀಗ ಏಷ್ಯಾಕಪ್(Asia Cup 2025) ಟೂರ್ನಿಗೆ ತಯಾರಿ(Asia Cup 2025) ನಡೆಸುವ ನಿಟ್ಟಿನಲ್ಲಿ ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ಪ್ರಾಕ್ಟೀಸ್ ಸೆಷನ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಹಾರ್ದಿಕ್ ಪಾಂಡ್ಯ, ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಬಹುತೇಕ ಆಟಗಾರರು ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ದುಬೈ ತಲುಪಿದ್ದು ಶುಕ್ರವಾರದಿಂದ ಅಭ್ಯಾಸ ಆರಂಭಿಸಿದ್ದಾರೆ.

ಭಾರತ ತನ್ನ ಅಭಿಯಾನವನ್ನು ಸೆಪ್ಟೆಂಬರ್ 10 ರಂದು ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ಆರಂಭಿಸಲಿದ್ದು, ಸೆಪ್ಟೆಂಬರ್ 14 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಸೆಪ್ಟೆಂಬರ್ 19 ರಂದು ಓಮನ್ ತಂಡವನ್ನು ಎದುರಿಸಲಿದೆ. ಪ್ಲೇಆಫ್‌ಗಳು ಸೆಪ್ಟೆಂಬರ್ 20 ರಂದು ಪ್ರಾರಂಭವಾಗಲಿವೆ.

ಕಳೆದ ತಿಂಗಳು ಇಂಗ್ಲೆಂಡ್ ಟೆಸ್ಟ್ ಸರಣಿ 2-2 ಡ್ರಾದಲ್ಲಿ ಕೊನೆಗೊಂಡ ನಂತರ ಆಟಗಾರರು ಒಟ್ಟಿಗೆ ತರಬೇತಿ ಪಡೆಯುತ್ತಿರುವುದು ಇದೇ ಮೊದಲು. ನಾಯಕ ಸೂರ್ಯಕುಮಾರ್ ಯಾದವ್, ಉಪನಾಯಕ ಶುಭಮನ್ ಗಿಲ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ತಿಲಕ್ ವರ್ಮಾ ಮತ್ತು ಅಭಿಷೇಕ್ ಶರ್ಮಾ ಎಲ್ಲರೂ ನೆಟ್ಸ್‌ನಲ್ಲಿ ಶುಕ್ರವಾರ ಬ್ಯಾಟಿಂಗ್ ಅಭ್ಯಾಸ ನಡೆಸಿದರು.

ತಂಡವು ಮುಖ್ಯ ಕೋಚ್ ಗಂಭೀರ್, ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಮತ್ತು ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಅವರ ಅಡಿಯಲ್ಲಿ ತರಬೇತಿ ಪಡೆಯಿತು. ಡ್ರೀಮ್11 ಪ್ರಾಯೋಜಕತ್ವವನ್ನು ಕಳೆದುಕೊಂಡಿರುವುದರಿಂದ, ತಂಡವು ಯಾವುದೇ ಲೋಗೋಗಳಿಲ್ಲದ ಜೆರ್ಸಿಯಲ್ಲಿ ತರಬೇತಿ ಪಡೆಯಿತು. ಭಾರತವು ಈ ಪಂದ್ಯಾವಳಿಯ ನಿಯೋಜಿತ ಆತಿಥೇಯ ರಾಷ್ಟ್ರವಾಗಿದ್ದು, ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸಿಲು ಹಿಂದೇಟು ಹಾಕಿದ ಕಾರಣ ಪಂದ್ಯಾವಳಿ ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ.

ಇದನ್ನೂ ಓದಿ Asia Cup 2025: ಶ್ರೀಲಂಕಾ ತಂಡದ ವೀಕ್ನೆಸ್‌ ಬಹಿರಂಗಪಡಿಸಿದ ಆಕಾಶ್‌ ಚೋಪ್ರಾ!