ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಏಷ್ಯಾಕಪ್​ ಟಿ20ಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ತಲಾ 4ರಂತೆ 2 ಗುಂಪುಗಳಲ್ಲಿ ತಂಡಗಳನ್ನು ವಿಭಾಗಿಸಲಾಗಿದ್ದು, ರೌಂಡ್​ ರಾಬಿನ್​ ಮಾದರಿ ಲೀಗ್​ ಹಂತದ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್​-4 ಹಂತಕ್ಕೇರಲಿವೆ. ಇಲ್ಲೂ ಎಲ್ಲ ತಂಡಗಳು ತಲಾ ಒಮ್ಮೆ ಮುಖಾಮುಖಿ ಆಗಲಿದ್ದು, ಅಂತಿಮವಾಗಿ ಅಗ್ರ 2 ತಂಡಗಳ ನಡುವೆ ಸೆ. 28ರಂದು ಫೈನಲ್​ ಪಂದ್ಯ ನಡೆಯಲಿದೆ.

ದುಬೈ: ಏಷ್ಯಾಕಪ್​ ಟಿ20(Asia Cup 2025) ಟೂರ್ನಿಗೆ ದಿನಗಣನೆ ಶುರುವಾಗಿದೆ. ಭಾರತ ಆತಿಥ್ಯದಲ್ಲಿ ನಡೆಯುವ ಈ ಟೂರ್ನಿ ಸೆಪ್ಟೆಂಬರ್​ 9ರಿಂದ 28ರವರೆಗೆ ಯುಎಇಯಲ್ಲಿ. ಭದ್ರತಾ ಕಾರಣದಿಂದ ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ಕಾರಣ ಪಂದ್ಯಾವಳಿಯನ್ನು ಯುಎಇಯಲ್ಲಿ ನಡೆಸಲಾಗುತ್ತಿದೆ. ಟೂರ್ನಿಯ ಸ್ವರೂಪ, ವೇಳಾಪಟ್ಟಿ ಹಾಗೂ ಇನ್ನಿತರ ಮಾಹಿತಿ ಇಲ್ಲಿದೆ.

ಟೂರ್ನಿ ಸ್ವರೂಪ

ಈ ಬಾರಿ ಟಿ20 ಸ್ವರೂಪದಲ್ಲಿ ಟೂರ್ನಿ ನಡೆಯಲಿದೆ.

8 ತಂಡಗಳು ಆಡಲಿರುವ ಟೂರ್ನಿಯಲ್ಲಿ ಒಟ್ಟು 19 ಪಂದ್ಯಗಳು ನಡೆಯಲಿವೆ.

ಒಟ್ಟು 8 ತಂಡಗಳು ಭಾಗವಹಿಸಲಿದು, ತಲಾ ನಾಲ್ಕು ತಂಡಗಳಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ.

ಗುಂಪು ಹಂತದ ನಂತರ ಸೂಪರ್-4 ಹಂತ ನಡೆಯಲಿದೆ.

ಸೂಪರ್-4 ಹಂತದಲ್ಲಿ ಅಗ್ರ 2 ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ.

ಪಂದ್ಯದ ಸ್ಥಳಗಳು

ಟೂರ್ನಿಯ ಪಂದ್ಯಗಳು ಯುಎಇಯ ದುಬೈ ಮತ್ತು ಅಬುಧಾಬಿ ಕ್ರೀಡಾಂಗಣಗಳಲ್ಲಿ ನಡೆಯಲಿವೆ.

ತಂಡಗಳ ಗುಂಪುಗಳು

ಗುಂಪು ಎ: ಭಾರತ, ಪಾಕಿಸ್ತಾನ, ಯುಎಇ ಮತ್ತು ಒಮಾನ್.

ಗುಂಪು ಬಿ: ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್‌ಕಾಂಗ್‌.

ವೇಳಾಪಟ್ಟಿ

ಸೆ. 9 ಅಫ್ಘಾನಿಸ್ತಾನ-ಹಾಂಕಾಂಗ್

ಸೆ.10 ಭಾರತ-ಯುಎಇ

ಸೆ. 11 ಬಾಂಗ್ಲಾದೇಶ-ಹಾಂಕಾಂಗ್​

ಸೆ. 12 ಪಾಕಿಸ್ತಾನ-ಓಮನ್

ಸೆ. 13 ಬಾಂಗ್ಲಾದೇಶ-ಶ್ರೀಲಂಕಾ

ಸೆ. 14 ಭಾರತ-ಪಾಕಿಸ್ತಾನ

ಸೆ. 15 ಯುಎಇ-ಓಮನ್​

ಸೆ. 15 ಶ್ರೀಲಂಕಾ-ಹಾಂಕಾಂಗ್​

ಸೆ. 16 ಬಾಂಗ್ಲಾದೇಶ-ಅಫ್ಘಾನಿಸ್ತಾನ

ಸೆ. 17 ಪಾಕಿಸ್ತಾನ-ಯುಎಇ

ಸೆ. 18 ಶ್ರೀಲಂಕಾ-ಅಫ್ಘಾನಿಸ್ತಾನ

ಸೆ. 19 ಭಾರತ-ಓಮನ್​

ಸೂಪರ್​-4 ಹಂತ

ಸೆ. 20 ಬಿ1-ಬಿ2

ಸೆ.21 ಎ1-ಎ2

ಸೆ.23 ಎ2-ಬಿ1

ಸೆ. 24 ಎ1-ಬಿ2

ಸೆ. 25 ಎ2-ಬಿ2

ಸೆ.26 ಎ1-ಬಿ1

ಸೆ.28 ಫೈನಲ್