ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಏಷ್ಯನ್ ಗೇಮ್ಸ್‌; ಶೂಟಿಂಗ್‌ನಲ್ಲಿ 2 ಬೆಳ್ಳಿ ಗೆದ್ದ ಭಾರತ

Asian Games 2026: ದಿನದ ಆರಂಭದಲ್ಲಿ ನಡೆದಿದ್ದ 10 ಮೀಟರ್ ಏರ್ ರೈಫಲ್ ಮಹಿಳಾ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟರು. ಏಲವೇನಿಲ್ ವಲರಿವನ್, ಸೋನಮ್ ಮಾಸ್ಕರ್ ಮತ್ತು ವಿದರ್ಶಾ ಕೆ. ವಿನೋದ್ ಅವರನ್ನೊಳಗೊಂಡ ತಂಡ 1898.0 ಅಂಕಗಳನ್ನು ಗಳಿಸಿ ಬೆಳ್ಳಿ ತನ್ನದಾಗಿಸಿಕೊಂಡಿತು.

Elavenil Valarivan

ನಗೋಯಾ, ಸೆ.20: ಭಾರತದ ಖ್ಯಾತ ಶೂಟರ್ ಎಲವೆನಿಲ್ ವಲರಿವನ್ ಅವರು ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟರು. ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. 253 ಅಂಕಗಳೊಂದಿಗೆ ಹೊಸ 'ಗೇಮ್ಸ್ ದಾಖಲೆ' ನಿರ್ಮಿಸಿ ಚಿನ್ನದ ಪದಕ ಗೆದ್ದ ಜಪಾನ್‌ನ ಹಿನಾಟಾ ತೈಚಿ ಅವರ ನಂತರದ ಸ್ಥಾನದಲ್ಲಿ, 27 ವರ್ಷದ ಎಲವೆನಿಲ್ ಒಟ್ಟು 252.4 ಅಂಕಗಳೊಂದಿಗೆ ಸ್ಪರ್ಧೆಯನ್ನು ಮುಕ್ತಾಯಗೊಳಿಸಿದರು. ಭಾರತೀಯ ಶೂಟರ್ ಫೈನಲ್‌ನಾದ್ಯಂತ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಿದರಾದರೂ, ಅಂತಿಮವಾಗಿ ಹಿನಾತಾ ಅವರಿಗಿಂತ ಕೇವಲ 0.6 ಅಂಕಗಳ ಅಂತರದಿಂದ ಹಿಂದೆ ಬಿದ್ದರು. ಕೊರಿಯಾದ ಬಾನ್ ಹ್ಯೋಜಿನ್ (230.4) ಅವರು ಕಂಚಿನ ಪದಕವನ್ನು ಗೆದ್ದುಕೊಂಡರು.

ಎಂಟು ಮಂದಿ ಮಹಿಳೆಯರನ್ನೊಳಗೊಂಡ ಫೈನಲ್‌ನಲ್ಲಿ ಸ್ಪರ್ಧಿಸಿದ ಮತ್ತೊಬ್ಬ ಭಾರತೀಯ ಆಟಗಾರ್ತಿ ಸೋನಮ್ ಮಾಸ್ಕರ್ (167) ಅವರು ಆರನೇ ಸ್ಥಾನ ಪಡೆದರು. ತಂಡದ ಸ್ಪರ್ಧೆಯಲ್ಲಿ ಎಲವೇನಿಲ್ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು 633.5 ಅಂಕಗಳನ್ನು ಗಳಿಸುವ ಮೂಲಕ ವೈಯಕ್ತಿಕ ವಿಭಾಗದ ಫೈನಲ್‌ಗೆ ಅರ್ಹತೆ ಪಡೆದರು.

ಇದಕ್ಕೂ ಮುನ್ನ ನಡೆದಿದ್ದ 10 ಮೀಟರ್ ಏರ್ ರೈಫಲ್ ಮಹಿಳಾ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟರು. ಏಲವೇನಿಲ್ ವಲರಿವನ್, ಸೋನಮ್ ಮಾಸ್ಕರ್ ಮತ್ತು ವಿದರ್ಶಾ ಕೆ. ವಿನೋದ್ ಅವರನ್ನೊಳಗೊಂಡ ತಂಡ 1898.0 ಅಂಕಗಳನ್ನು ಗಳಿಸಿ ಬೆಳ್ಳಿ ತನ್ನದಾಗಿಸಿಕೊಂಡಿತು.

ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಸ್ಮೃತಿ ಮಂಧನಾ

ಚೀನಾದ ಝಿಫೀ ವಾಂಗ್, ಜಿಯಾಯು ಹಾನ್ ಮತ್ತು ಯುಚೆನ್ ಡು ಅವರು 1904.2 ರ ವಿಶ್ವ ದಾಖಲೆಯ ಒಟ್ಟು ಅಂಕಗಳೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡರೆ, ಜಪಾನ್‌ನ ಹಿನಾಟಾ ತೈಚಿ, ಮಿಸಾಕಿ ನೋಬಾಟಾ ಮತ್ತು ಶಿಯೋರಿ ಹಿರಟಾ ಅವರು 1897.1 ಅಂಕಗಳೊಂದಿಗೆ ಕಂಚಿನ ಪದಕವನ್ನು ಪಡೆದರು.

ಟೆಕ್‌ಬಾಲ್ ಸ್ಪರ್ಧೆಯಲ್ಲಿ ನಿರಾಸೆ

ಟೆಕ್‌ಬಾಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಸತತ ನಿರಾಶೆಗಳು ಎದುರಾದವು. ಮಹಿಳೆಯರ ಸಿಂಗಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ತಲಾ ಒಂದು ಕಂಚಿನ ಪದಕ ಗೆಲ್ಲುವ ಅವಕಾಶ ಭಾರತದ ಕೈಗೆ ಬಂದಿತ್ತಾದರೂ, ಎರಡೂ ಸ್ಪರ್ಧೆಗಳಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾದ್ದರಿಂದ ಆ ಪದಕಗಳು ಕೈತಪ್ಪಿಹೋದವು.

ಮಹಿಳೆಯರ ಸಿಂಗಲ್ಸ್‌ ಕಂಚಿನ ಪದಕ ಸ್ಪರ್ಧೆಯಲ್ಲಿ ಕ್ವಿಮ್ಸಿ ಜೋಕಿಮ್ ಡಿಸೋಜಾ ಅವರು ಜಪಾನ್‌ನ ವಿಶ್ವದ 7ನೇ ಶ್ರೇಯಾಂಕದ ಆಟಗಾರ್ತಿ ಯುಯಿನಾ ಸಕಮೊಟೊ ವಿರುದ್ಧ 12-11, 12-11 ಅಂತರದಲ್ಲಿ ಸೋತರು.