ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಸ್ಮೃತಿ ಮಂಧನಾ

Smriti Mandhana: ಏಷ್ಯಾಕಪ್‌ ಟೂರ್ನಿಯಲ್ಲಿ ಮಂಧನಾ ಒಟ್ಟು 213 ರನ್ ಗಳಿಸುವುದರೊಂದಿಗೆ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದರು. ಇದೀಗ ಟಿ20ಯಲ್ಲಿಯೂ ಅಗ್ರಸ್ಥಾನ ಪಡೆಯುವ ಮೂಲಕ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲೂ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾದರು.

ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಸ್ಮೃತಿ ಮಂಧನಾ

Smriti Mandhana -

Abhilash BC
Abhilash BC Sep 20, 2026 11:31 AM

ನಗೋಯಾ, ಸೆ.20: ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಅಗ್ರಸ್ಥಾನಕ್ಕೇರಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದ ವೇಳೆ ಅವರು ಈ ಮೈಲಿಗಲ್ಲು ತಲುಪಿದರು.

ಇದಕ್ಕೂ ಮುನ್ನ ಈ ದಾಖಲೆ ನ್ಯೂಜಿಲೆಂಡ್‌ನ ಸೂಜಿ ಬೇಟ್ಸ್ ಅವರ ಹೆಸರಿನಲ್ಲಿತ್ತು. ಬೇಟ್ಸ್ ದಾಖಲೆ ಹಿಂದಿಕ್ಕಲು ಮಂಧನಾ ಅವರಿಗೆ ಕೇವಲ ಏಳು ರನ್‌ಗಳ ಅಗತ್ಯವಿತ್ತು. ಬಾಂಗ್ಲಾದೇಶದ ಮರುಫಾ ಅಖ್ತರ್ ಅವರ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಮಂಧನಾ ಮಹಿಳಾ ಟಿ20 ಅಂತಾರಾಷ್ಟ್ರೀಯ ರನ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಮಂಧಾನ ಈಗ 4761*ರನ್‌ ಗಳಿಸಿದ್ದಾರೆ. ಸೂಜಿ ಬೇಟ್ಸ್ (4758), ಹರ್ಮನ್‌ಪ್ರೀತ್‌ ಕೌರ್‌(4287*) ನಂತರದ ಸ್ಥಾನದಲ್ಲಿದ್ದಾರೆ.



ಏಷ್ಯಾಕಪ್‌ ಟೂರ್ನಿಯಲ್ಲಿ ಮಂಧನಾ ಒಟ್ಟು 213 ರನ್ ಗಳಿಸುವುದರೊಂದಿಗೆ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದರು. ಇದೀಗ ಟಿ20ಯಲ್ಲಿಯೂ ಅಗ್ರಸ್ಥಾನ ಪಡೆಯುವ ಮೂಲಕ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲೂ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾದರು.

ರಿಷಭ್‌ ಪಂತ್‌ ಏಕದಿನ ಕ್ರಿಕೆಟ್‌ ಭವಿಷ್ಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಕಾಶ್‌ ಚೋಪ್ರಾ!

ಬಾಂಗ್ಲಾ ವಿರುದ್ಧ ಬಿರುಸಿನ ಬ್ಯಾಟಿಂಗ್‌ ನಡೆಸಿದ ಮಂಧಾನ 19 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 37 ರನ್‌ ಗಳಿಸಿದರು. ತನ್ನ ಜತೆಗಾರ್ತಿ ಶಫಾಲಿ ಜತೆ ಸೇರಿಕೊಂಡು ಮೊದಲ ವಿಕೆಟ್‌ಗೆ 72 ರನ್‌ಗಳ ಜತೆಯಾಟ ನಡೆಸಿದರು.

ಮಹಿಳೆಯರ T20Iಗಳಲ್ಲಿ ಅತಿ ಹೆಚ್ಚು ರನ್‌ಗಳು

4788 - ಸ್ಮೃತಿ ಮಂಧಾನ

4758 - ಸುಜಿ ಬೇಟ್ಸ್

4287 - ಹರ್ಮನ್ಪ್ರೀತ್ ಕೌರ್

4282 - ಚಾಮರಿ ಅಥಾಪತ್ತು

3817 - ಸೋಫಿ ಡಿವೈನ್

ವೈಯಕ್ತಿಕ ಜೀವನದಲ್ಲಿ ಕಠಿಣ ಸವಾಲಿನ ಹೊರತಾಗಿಯೂ, ಮೈದಾನದಲ್ಲಿ, ಸ್ಮೃತಿ ಮಂಧಾನಾ ಹಲವು ವಿಜಯೋತ್ಸವದ ವರ್ಷವನ್ನು ಕಂಡರು. ಏಕದಿನ ವಿಶ್ವಕಪ್‌, ಡಬ್ಲ್ಯುಪಿಎಲ್‌ ಸೇರಿ ಹಲವು ದ್ವಿಪಕ್ಷೀಯ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಜತೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಹಲವಾರು ಕೊಡುಗೆಗಳನ್ನು ನೀಡಿದರು. 16ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಅವರು ದಾಖಲೆಗಳನ್ನು ನಿರ್ಮಿಸುತ್ತ ಮುನ್ನುಗುತ್ತಿದ್ದಾರೆ.