ಏಷ್ಯನ್ ಗೇಮ್ಸ್ ಆರ್ಚರಿ; ಚಿನ್ನ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಸಾಹಿಲ್-ಚಿಕಿತಾ ಜೋಡಿ
Asian Games: ಬುಧವಾರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬಿಲ್ಲುಗಾರಿಕೆಯಲ್ಲಿ ಎರಡನೇ ಚಿನ್ನದ ಪದಕವನ್ನು ತಂದುಕೊಟ್ಟಿತು. ಇದಕ್ಕೂ ಮುನ್ನ, ಜ್ಯೋತಿ ಸುರೇಖಾ ವೆನ್ನಮ್ ಮತ್ತು ಪ್ರಿಥಿಕಾ ಪ್ರದೀಪ್ ಅವರನ್ನು ಒಳಗೊಂಡ ಭಾರತೀಯ ಮಹಿಳಾ ಕಾಂಪೌಂಡ್ ತಂಡವು ಚೀನಾವನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು.
-
ನಗೋಯಾ, ಸೆ.30: ಏಷ್ಯನ್ ಕ್ರೀಡಾಕೂಟದಲ್ಲಿ ಬುಧವಾರ ಭಾರತ ಎರಡು ಚಿನ್ನದ ಪದಕದ ಸಾಧನೆಗೈದಿದೆ. ಬಿಲ್ಲುಗಾರಿಕೆ (ಆರ್ಚರಿ)ಯಲ್ಲಿ ಈ ಪದಕ ಲಭಿಸಿದೆ. ಮಹಿಳೆಯರ ಕಾಂಪೌಂಡ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಕೆಲವೇ ಅಂತರದಲ್ಲಿ ಇದೇ ವಿಭಾಗದ ಮಿಶ್ರ ತಂಡವೂ ಚಿನ್ನದ ಪದಕಕ್ಕೆ ಗುರಿಯಿಟ್ಟಿತು.
ರೋಚಕ 'ಶೂಟ್-ಆಫ್'ನಲ್ಲಿ ಸಂಯಮ ಕಾಯ್ದುಕೊಂಡ ಚಿಕಿತಾ ತನಿಪಾರ್ಥಿ ಮತ್ತು ಸಾಹಿಲ್ ಜಾಧವ್ ಜೋಡಿಯು ದಕ್ಷಿಣ ಕೊರಿಯಾವನ್ನು ಮಣಿಸಿ ಮೊದಲ ಸ್ಥಾನ ಪಡೆಯಿತು. ಈ ಗೆಲುವಿನೊಂದಿಗೆ, ಭಾರತೀಯ ಜೋಡಿಯು ಲಾಸ್ ಏಜಂಲೀಸ್ ಒಲಿಂಪಿಕ್ಸ್‌ನ ಕಾಂಪೌಂಡ್ ಆರ್ಚರಿ ಸ್ಪರ್ಧೆಯಲ್ಲಿ ಸ್ಥಾನವನ್ನು ಖಚಿತಪಡಿಸಿಕೊಂಡಿತು.
ದಕ್ಷಿಣ ಕೊರಿಯಾದ ಯೋಂಗ್‌ಹೀ ಚೋಯ್ ಮತ್ತು ಪಾರ್ಕ್ ಜಂಗ್‌ಯೂನ್ ವಿರುದ್ಧದ ನಿಗದಿತ ಸ್ಪರ್ಧೆಯಲ್ಲಿ ಭಾರತೀಯ ಜೋಡಿಯು 157-157 ಅಂಕಗಳ ಸಮಬಲದೊಂದಿಗೆ ಆಟವನ್ನು ಮುಕ್ತಾಯಗೊಳಿಸಿತು. ಬಳಿಕ ನಡೆದ 'ಶೂಟ್-ಆಫ್'ನಲ್ಲಿ ಭಾರತ 20 ಅಂಕಗಳನ್ನು ಗಳಿಸಿದರೆ, ಕೊರಿಯಾ 19 ಅಂಕಗಳನ್ನು ಪಡೆಯಿತು. ಇದರೊಂದಿಗೆ ಭಾರತವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಚಿಕಿತಾ ತನಿಪಾರ್ಥಿ ಮತ್ತು ಸಾಹಿಲ್ ಜಾಧವ್ ಜೋಡಿಯ ಈ ಗೆಲುವು ಏಷ್ಯನ್ ಕ್ರೀಡಾಕೂಟದ ಆಚೆಗೂ ಮಹತ್ವದ್ದಾಗಿದೆ. ಈ ಫಲಿತಾಂಶವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕೋಟಾ ಸ್ಥಾನವನ್ನು ಖಚಿತಪಡಿಸಿದೆ. ಆ ಕೂಟದಲ್ಲಿ ಕಾಂಪೌಂಡ್ ಆರ್ಚರಿ (ಬಿಲ್ಲುಗಾರಿಕೆ) ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಲಿದೆ.
ಏಷ್ಯನ್ ಗೇಮ್ಸ್ ಆರ್ಚರಿ; ಚಿನ್ನಕ್ಕೆ ಗುರಿಯಿಟ್ಟ ಭಾರತ
ಇದಕ್ಕೂ ಮುನ್ನ, ಜ್ಯೋತಿ ಸುರೇಖಾ ವೆನ್ನಮ್ ಮತ್ತು ಪ್ರಿಥಿಕಾ ಪ್ರದೀಪ್ ಅವರನ್ನು ಒಳಗೊಂಡ ಭಾರತೀಯ ಮಹಿಳಾ ಕಾಂಪೌಂಡ್ ತಂಡವು ಚೀನಾವನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಫೈನಲ್‌ನಲ್ಲಿ ಚೀನಾವನ್ನು 238-234 ಅಂತರದಿಂದ ಸೋಲಿಸಿತ್ತು. ಚಿಕಿತಾ ಕೂಡ ಈ ತಂಡದ ಭಾಗವಾಗಿದ್ದರು. ಇದರೊಂದಿಗೆ ಅವರು ಎರಡು ಚಿನ್ನ ಗೆದ್ದ ಸಾಧನೆ ಮಾಡಿದರು.
𝙂𝙊𝙇𝘿 𝙍𝙐𝙎𝙃 🥇 🇮🇳
— RelianceFoundationSports (@RFYouthSports) September 30, 2026
India adds another gold medal to it's tally as Chikitha Taniparthi & Sahil Jadhav triumph in the Compound Mixed Team event in Aichi-Nagoya. 🙌
This is Chikitha's 2nd gold of Asian Games 2026. pic.twitter.com/pc6tPf6gd7
ಸಾಹಿಲ್ ಈ ಕ್ರೀಡಾಕೂಟದಲ್ಲಿ ಗೆದ್ದಿರುವ ಮೊದಲ ಪದಕ ಇದಾಗಿದೆ. ಅವರು ಈ ವರ್ಷದ ಆರಂಭದಲ್ಲಿ ಶಾಂಘೈನಲ್ಲಿ ನಡೆದ ವಿಶ್ವಕಪ್‌ನ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕವನ್ನೂ, ಢಾಕಾದಲ್ಲಿ ನಡೆದ 2025ರ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್‌ನ ಪುರುಷರ ತಂಡದ ವಿಭಾಗದಲ್ಲಿ ಬೆಳ್ಳಿ ಪದಕವನ್ನೂ ಗೆದ್ದಿದ್ದರು. ಅಲ್ಲದೆ, ಅವರು 2025ರ ವಿಶ್ವ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಕೂಡ ಪಡೆದಿದ್ದರು.