ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs IND 3rd T20I: ಬ್ಯಾಟಿಂಗ್‌ ಕ್ಲಿಕ್‌ ಆದರಷ್ಟೇ ಭಾರತಕ್ಕೆ ಗೆಲುವು ಒಲಿಯಬಹುದು

ಆ್ಯಷಸ್‌ ಟೆಸ್ಟ್ ಸರಣಿ ಸಮೀಪಿಸುತ್ತಿರುವ ಕಾರಣ ಹ್ಯಾಜಲ್‌ವುಡ್‌ ಅವರಿಗೆ ವಿಶ್ರಾಂತಿ ನೀಡಲು ಕ್ರಿಕೆಟ್‌ ಆಸ್ಟ್ರೇಲಿಯಾ ನಿರ್ಧರಿದೆ. ಹೀಗಾಗಿ ಟಿ20 ಸರಣಿಯ ಉಳಿದ ಪಂದ್ಯಗಳಲ್ಲಿ ಅವರು ಆಡುತ್ತಿಲ್ಲ. ಇದು ಭಾರತ ಬ್ಯಾಟರ್‌ಗಳಿಗೆ ಕೊಂಚ ಅನುಕೂಲಕರವಾಗಬಹುದು. ಬೆಲೆರಿವ್‌ ಓವಲ್‌ನ ಪಿಚ್‌ನ ಎರಡೂ ಬದಿಯ ಬೌಂಡರಿಗಳು ಸಣ್ಣದಾಗಿರುವ ಕಾರಣ ಬೌಲರ್‌ಗಳು ಶಕ್ತಿ ಮೀರಿ ಬೌಲಿಂಗ್‌ ಪ್ರದರ್ಶನ ನೀಡಬೇಕು. ಲಯ ತಪ್ಪಿದರೆ ದಂಡಿಸಿಕೊಳ್ಳುವುದು ಖಚಿತ.

ಹೋಬಾರ್ಟ್‌: 5 ಪಂದ್ಯಗಳ ಟಿ20 ಸರಣಿಯಲ್ಲಿ 0-1 ಹಿನ್ನಡೆಯಲ್ಲಿರುವ ಭಾರತ ತಂಡ ಸಮಬಲ ಸಾಧಿಸುವ ಇರಾದೆಯೊಂದಿಗೆ ಭಾನುವಾರ ಹೋಬಾರ್ಟ್‌ನ ಬೆಲ್ಲೆರಿವ್(Bellerive Oval) ಓವಲ್‌ನಲ್ಲಿ ಆಸ್ಟ್ರೇಲಿಯಾ(India vs Australia) ವಿರುದ್ಧದ ಮೂರನೇ ಟಿ20(AUS vs IND 3rd T20I) ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಬ್ಯಾಟಿಂಗ್‌ ಸುಧಾರಣೆ ಕಾಣದ ಹೊರತು ಭಾರತಕ್ಕೆ ಗೆಲುವು ಅಷ್ಟು ಸುಲಭವಲ್ಲ.

ಕಳೆದ ಪಂದ್ಯದಲ್ಲಿ ಅಭಿಷೇಕ್‌ ಮತ್ತು ಬೌಲಿಂಗ್‌ ಆಲ್‌ರೌಂಡರ್‌ ಹರ್ಷಿತ್‌ ರಾಣಾ ಹೊರತುಪಡಿಸಿದ ಉಳಿದವರೆಲ್ಲ ಒಂದಕ್ಕಿಗೆ ಸೀಮಿತರಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ನಾಯಕ ಸೂರ್ಯ, ಸಂಜು, ಗಿಲ್‌, ದುಬೆ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ ತಂಡಕ್ಕೆ ನೆರವಾಗಬೇಕಿದೆ. ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಒಂದು ಬಲಾವಣೆ ಮಾಡಿದರೂ ಅಚ್ಚರಿಯಿಲ್ಲ.

ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆದಿರುವ ಭಾರತದ ಏಕೈಕ ವೇಗಿಯಾಗಿದ್ದರೂ ಅರ್ಷದೀಪ್‌ಗೆ ಮೊದಲೆರಡೂ ಪಂದ್ಯಗಳಲ್ಲಿ ಆಡುವ 11ರಲ್ಲಿ ಸ್ಥಾನ ನೀಡಿರಲಿಲ್ಲ. ಆದರೆ ತಂಡದ ಆಡಳಿತ ಮಂಡಳಿ ಅಂತಿಮವಾಗಿ ಅರ್ಶ್‌ದೀಪ್‌ಗೆ ಈ ಪಂದ್ಯದಲ್ಲಿ ಅವಕಾಶ ನೀಡಬಹುದು. ಅರ್ಶ್‌ದೀಪ್‌ಗಾಗಿ ಹರ್ಷಿತ್‌ ರಾಣಾ ಸ್ಥಾನ ಬಿಡಬೇಕಾದೀತು. ಇಲ್ಲವಾದಲ್ಲಿ ಸ್ಪಿನ್ನರ್‌ ಒಬ್ಬರನ್ನು ಕೈಬಿಡುವ ಸಾಧ್ಯತೆ ಇದೆ. ಅಕ್ಷರ್‌ ಪಟೇಲ್‌ಗೆ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ ವೇಳೆ ಗಾಯಗೊಂಡಿತ್ತು. ಹೀಗಾಗಿ ಅವರನ್ನು ಕೈಬಿಡುವ ಸಾಧ್ಯತೆಯೂ ಇದೆ.

ಇದನ್ನೂ ಓದಿ Karun Nair: ಮತ್ತೊಂದು ಶತಕ ಸಿಡಿಸಿದ ಕರುಣ್ ನಾಯರ್; ಕೇರಳ ವಿರುದ್ಧ ಹಿಡಿತ ಸಾಧಿಸಿದ ಕರ್ನಾಟಕ

ಆ್ಯಷಸ್‌ ಟೆಸ್ಟ್ ಸರಣಿ ಸಮೀಪಿಸುತ್ತಿರುವ ಕಾರಣ ಹ್ಯಾಜಲ್‌ವುಡ್‌ ಅವರಿಗೆ ವಿಶ್ರಾಂತಿ ನೀಡಲು ಕ್ರಿಕೆಟ್‌ ಆಸ್ಟ್ರೇಲಿಯಾ ನಿರ್ಧರಿದೆ. ಹೀಗಾಗಿ ಟಿ20 ಸರಣಿಯ ಉಳಿದ ಪಂದ್ಯಗಳಲ್ಲಿ ಅವರು ಆಡುತ್ತಿಲ್ಲ. ಇದು ಭಾರತ ಬ್ಯಾಟರ್‌ಗಳಿಗೆ ಕೊಂಚ ಅನುಕೂಲಕರವಾಗಬಹುದು. ಬೆಲೆರಿವ್‌ ಓವಲ್‌ನ ಪಿಚ್‌ನ ಎರಡೂ ಬದಿಯ ಬೌಂಡರಿಗಳು ಸಣ್ಣದಾಗಿರುವ ಕಾರಣ ಬೌಲರ್‌ಗಳು ಶಕ್ತಿ ಮೀರಿ ಬೌಲಿಂಗ್‌ ಪ್ರದರ್ಶನ ನೀಡಬೇಕು. ಲಯ ತಪ್ಪಿದರೆ ದಂಡಿಸಿಕೊಳ್ಳುವುದು ಖಚಿತ.

ಭಾರತ ಸಂಭಾವ್ಯ ತಂಡ

ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿ.ಕೀ.), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.