Karun Nair: ಮತ್ತೊಂದು ಶತಕ ಸಿಡಿಸಿದ ಕರುಣ್ ನಾಯರ್; ಕೇರಳ ವಿರುದ್ಧ ಹಿಡಿತ ಸಾಧಿಸಿದ ಕರ್ನಾಟಕ
ನಾಯರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9,000 ರನ್‌ಗಳ ಗಡಿ ದಾಟಿದರು. ರಾಹುಲ್ ದ್ರಾವಿಡ್, ಜಿ.ಆರ್. ವಿಶ್ವನಾಥ್, ಬ್ರಿಜೇಶ್ ಪಟೇಲ್, ಸೈಯದ್ ಕಿರ್ಮಾನಿ ಮತ್ತು ರಾಬಿನ್ ಉತ್ತಪ್ಪ ನಂತರ ಈ ಸಾಧನೆ ಮಾಡಿದ ಕರ್ನಾಟಕದ ಆರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
-
Abhilash BC
Nov 1, 2025 8:02 PM
ಬೆಂಗಳೂರು: ಕರುಣ್ ನಾಯರ್(Karun Nair) ರಣಜಿ ಟ್ರೋಫಿಯಲ್ಲಿ(Ranji Trophy) ಮತ್ತೊಂದು ಅದ್ಭುತ ಶತಕ ಬಾರಿಸಿದ್ದಾರೆ. ಶನಿವಾರ ನಡೆದ ಗ್ರೂಪ್ ಬಿ ಕೇರಳ(Karnataka vs Kerala) ವಿರುದ್ಧದ ಪಂದ್ಯದ ಮೊದಲ ದಿನ ಅಜೇಯ 142 ರನ್ ಬಾರಿಸಿದ್ದಾರೆ. ಈ ಮೂಲಕ ಭಾರತೀಯ ಟೆಸ್ಟ್ ತಂಡದಿಂದ ತನ್ನನ್ನು ಹೊರಗಿಟ್ಟಿರುವ ಆಯ್ಕೆಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಅವಕಾಶ ನೀಡಿದ ಬಳಿಕ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಇದೀಗ ಅವರು ದೇಶೀಯ ಕ್ರಿಕೆಟ್‌ನಲ್ಲಿ ಬ್ಯಾಕ್‌ಟು ಬ್ಯಾಕ್ ಶತಕದ ಮೂಲಕ ಅಬ್ಬರಿಸಲು ಆರಂಭಿಸಿದ್ದಾರೆ. ಗೋವಾ ವಿರುದ್ಧ ಅಜೇಯ 174 ಮತ್ತು ಸೌರಾಷ್ಟ್ರ ವಿರುದ್ಧ ಅರ್ಧಶತಕದ ನಂತರ ಇದು ಅವರ ಈ ಋತುವಿನ ಎರಡನೇ ಶತಕ ಇದಾಗಿದೆ.
ಕರುಣ್ ಬಾರಿಸಿದ ಶತಕದ ನೆರವಿನಿಂದ ಕರ್ನಾಟಕ ತಂಡ ಕೇರಳ ವಿರುದ್ಧ ಮೊದಲ ದಿನವೇ ಹಿಡಿತ ಸಾಧಿಸಿದೆ. 3 ವಿಕೆಟ್ ನಷ್ಟಕ್ಕೆ 319 ರನ್ ಗಳಿಸಿದೆ. ಕರ್ನಾಟಕವು ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. 13 ರನ್‌ಗೆ 2 ವಿಕೆಟ್ ಕಳೆದುಕೊಂಡಿತು. ಈ ವೇಳೆ ಕರುಣ್ ತಂಡಕ್ಕೆ ಆಸರೆಯಾದರು.
- Hundred vs Goa.
— Johns. (@CricCrazyJohns) November 1, 2025
- Hundred vs Kerala.
BACK TO BACK HUNDREDS FOR KARUN NAIR IN RANJI TROPHY 💥
A Big statement by the legend of Karnataka in first Class Cricket. pic.twitter.com/voxiHEA05G
ಕೃಷ್ಣನ್ ಶ್ರೀಜಿತ್ (65) ಮತ್ತು ರವಿಚಂದ್ರನ್ ಸ್ಮರನ್ (88*) ಅವರೊಂದಿಗೆ ದೊಡ್ಡ ಜತೆಯಾಟ ನಡೆಸಿದರು. ಶ್ರೀಜಿತ್ ಅವರೊಂದಿಗೆ 123 ಮತ್ತು ಸ್ಮರನ್ ಅವರೊಂದಿಗೆ ಮುರಿಯದ 183 ರನ್‌ಗಳ ಜೊತೆಯಾಟದೊಂದಿಗೆ ನಾಯರ್ 142 ರನ್ ಗಳಿಸಿ ಅಜೇಯರಾಗಿದ್ದಾರೆ. ಅವರ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿದಿದೆ. ಕೇರಳ ಪರ ಎಂಡಿ ನಿದೀಶ್, ನೆಡುಮಂಕುಳಿ ಬಾಸಿಲ್ ಮತ್ತು ಬಾಬಾ ಅಪರಾಜಿತ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ KAR vs SAU: ಕರ್ನಾಟಕ ತಂಡಕ್ಕೆ ಕರುಣ್, ಪಡಿಕ್ಕಲ್ ಅರ್ಧಶತಕಗಳ ಬಲ!
ದಾಖಲೆ ಬರೆದ ಅಯ್ಯರ್
ಈ ಶತಕದೊಂದಿಗೆ, ನಾಯರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9,000 ರನ್‌ಗಳ ಗಡಿ ದಾಟಿದರು. ರಾಹುಲ್ ದ್ರಾವಿಡ್, ಜಿ.ಆರ್. ವಿಶ್ವನಾಥ್, ಬ್ರಿಜೇಶ್ ಪಟೇಲ್, ಸೈಯದ್ ಕಿರ್ಮಾನಿ ಮತ್ತು ರಾಬಿನ್ ಉತ್ತಪ್ಪ ನಂತರ ಈ ಸಾಧನೆ ಮಾಡಿದ ಕರ್ನಾಟಕದ ಆರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.