ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

mahmudullah retired: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಹಮ್ಮದುಲ್ಲಾ

Bangladesh batter Mahmudullah: 17 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಜೀವನದಲ್ಲಿ ಮಹಮ್ಮದುಲ್ಲಾ, 239 ಏಕದಿನ, 50 ಟೆಸ್ಟ್ ಮತ್ತು 141 ಟಿ20 ಪಂದ್ಯಗಳನ್ನು ಆಡಿದ್ದಾರೆ. 2007 ರಲ್ಲಿ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಮಹಮದುಲ್ಲಾ ಆರಂಭದಲ್ಲಿ ಕೆಳ ಕ್ರಮಾಂಕದ ಆಲ್‌ರೌಂಡರ್ ಆಗಿ ಆಡಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಹಮ್ಮದುಲ್ಲಾ

Profile Abhilash BC Mar 13, 2025 10:14 AM

ಢಾಕಾ: ಬಾಂಗ್ಲಾದೇಶದ ಅನುಭವಿ ಬ್ಯಾಟ್ಸ್‌ಮನ್ ಮಹಮ್ಮದುಲ್ಲಾ(mahmudullah retired) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 17 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಕಳೆದ ವಾರ ಮುಷ್ಫಿಕರ್ ರಹೀಮ್ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದರು. ಒಂದು ವಾರದ ಅಂತರದಲ್ಲಿ ಇಬ್ಬರು ಬಾಂಗ್ಲಾ ಆಟಗಾರರು ನಿವೃತ್ತಿಯಾದಂತಾಗಿದೆ. 'ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ' ಎಂದು 39 ವರ್ಷದ ಮಹಮ್ಮದುಲ್ಲಾ(Bangladesh batter Mahmudullah) ಸಾಮಾಜಿಕ ಮಾಧ್ಯಮ ಪೋಸ್ಟ್‌ ಮೂಲಕ ತಮ್ಮ ನಿವೃತ್ತಿ ಖಚಿತಪಡಿಸಿದ್ದಾರೆ. 2021 ರಲ್ಲಿ ಟೆಸ್ಟ್ ಮತ್ತು 2024 ರಲ್ಲಿ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಐಸಿಸಿ ಟೂರ್ನಿಗಳಲ್ಲಿ ನಾಲ್ಕು ಶತಕಗಳನ್ನು ಒಳಗೊಂಡಂತೆ 36.46 ಸರಾಸರಿಯಲ್ಲಿ 5689 ರನ್ ಗಳಿಸಿರುವ ಮಹಮದುಲ್ಲಾ ಬಾಂಗ್ಲಾದೇಶದ ನಾಲ್ಕನೇ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

2015 ರ ವಿಶ್ವಕಪ್‌ನಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ್ದರು. 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧ, 2023 ರ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ವಿಶ್ವಕಪ್‌ ಶತಕ ಬಾರಿಸಿದ್ದರು.

ಇದನ್ನೂ ಓದಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಬಾಂಗ್ಲಾ ವಿಕೆಟ್‌ ಕೀಪರ್‌ ಮುಷ್ಫಿಕರ್‌ ರಹೀಮ್‌ ಗುಡ್‌ಬೈ!

'ನನ್ನ ಬಾಲ್ಯದಿಂದಲೂ ನನ್ನ ಕೋಚ್ ಮತ್ತು ಮಾರ್ಗದರ್ಶಕರಾಗಿ ನಿರಂತರವಾಗಿ ನನ್ನ ಜತೆಗಿದ್ದ ಹೆತ್ತವರಿಗೆ, ಮಾವನಿಗೆ ಮತ್ತು ಮುಖ್ಯವಾಗಿ ನನ್ನ ಸಹೋದರ ಎಮ್ದಾದ್ ಉಲ್ಲಾ ಅವರಿಗೆ ಮತ್ತು ಕೊನೆಯದಾಗಿ ನನ್ನ ಕಷ್ಟದ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತ ನನ್ನ ಹೆಂಡತಿ ಮತ್ತು ಮಕ್ಕಳಿಗೆ ಧನ್ಯವಾದಗಳು. ಕೆಂಪು ಮತ್ತು ಹಸಿರು ಜೆರ್ಸಿಯಲ್ಲಿ ದೇಶವನ್ನು ಇಷ್ಟು ವರ್ಷ ಪ್ರತಿನಿಧಿಸಿದ್ದು ನನ್ನ ಪಾಲಿನ ಸೌಭಾಗ್ಯ. ಬಾಂಗ್ಲಾದೇಶ ಕ್ರಿಕೆಟ್‌ಗೆ ಶುಭಾಶಯಗಳು' ಎಂದು ಮಹಮ್ಮದುಲ್ಲಾ ಬರೆದುಕೊಂಡಿದ್ದಾರೆ.

17 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಜೀವನದಲ್ಲಿ ಮಹಮ್ಮದುಲ್ಲಾ, 239 ಏಕದಿನ, 50 ಟೆಸ್ಟ್ ಮತ್ತು 141 ಟಿ20 ಪಂದ್ಯಗಳನ್ನು ಆಡಿದ್ದಾರೆ. 2007 ರಲ್ಲಿ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಮಹಮದುಲ್ಲಾ ಆರಂಭದಲ್ಲಿ ಕೆಳ ಕ್ರಮಾಂಕದ ಆಲ್‌ರೌಂಡರ್ ಆಗಿ ಆಡಿದ್ದರು.