ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women’s World Cup 2025: ಚೊಚ್ಚಲ ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ₹51 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ

ವಿಶ್ವ ಚಾಂಪಿಯನ್ ಆದ ನಂತರ, ಭಾರತೀಯ ಮಹಿಳಾ ತಂಡವು ಸುಮಾರು ₹39.77 ಕೋಟಿ ರು. ನಗದು ಬಹುಮಾನವನ್ನು ಪಡೆದುಕೊಂಡಿದೆ. ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ನಗದು ಬಹುಮಾನವಾಗಿದೆ. ರನ್ನರ್ ಅಪ್‌ಗೆ ತೃಪ್ತಿಪಟ್ಟ ದಕ್ಷಿಣ ಆಫ್ರಿಕಾ 2.24 ಮಿಲಿಯನ್ ಯುಎಸ್ ಡಾಲರ್ (ಸುಮಾರು ₹19.88 ಕೋಟಿ) ಮೊತ್ತವನ್ನು ಸ್ವೀಕರಿಸಿತು.‌

ಮುಂಬಯಿ: 2025 ರ ಮಹಿಳಾ ವಿಶ್ವಕಪ್‌ನ ಫೈನಲ್(Women’s World Cup 2025) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮಹಿಳೆಯರ ತಂಡವನ್ನು ಸೋಲಿಸುವ ಮೂಲಕ ಇತಿಹಾಸ ಬರೆದ ಹರ್ಮನ್‌ಪ್ರೀತ್‌ ಕೌರ್‌(Harmanpreet Kaur) ಸಾರಥ್ಯದ ಭಾರತ ಮಹಿಳಾ ತಂಡಕ್ಕೆ ಬಿಸಿಸಿಐ(BCCI) (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ನಗದು ಬಹುಮಾನವನ್ನು ಘೋಷಿಸಿದೆ. ಭಾರತೀಯ ತಂಡ, ಸಹಾಯಕ ಸಿಬ್ಬಂದಿ ಮತ್ತು ತರಬೇತುದಾರರಿಗೆ 51 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಈ ನಗದು ಬಹುಮಾನವನ್ನು ಘೋಷಿಸಿದರು.

"ಜಯ್ ಶಾ ಬಿಸಿಸಿಐನ ಮುಖ್ಯಸ್ಥರಾದಾಗಿನಿಂದ, ಅವರು ಮಹಿಳಾ ಕ್ರಿಕೆಟ್‌ನಲ್ಲಿ ಅನೇಕ ರೂಪಾಂತರಗಳನ್ನು ತಂದಿದ್ದಾರೆ. ವೇತನ ಸಮಾನತೆಯ ಬಗ್ಗೆಯೂ ಚರ್ಚಿಸಲಾಯಿತು. ಕಳೆದ ತಿಂಗಳು, ಐಸಿಸಿ ಅಧ್ಯಕ್ಷ ಜಯ್ ಶಾ ಮಹಿಳೆಯರ ಬಹುಮಾನದ ಹಣವನ್ನು ಶೇ. 300 ಹೆಚ್ಚಿಸಿದರು. ಬಿಸಿಸಿಐ ಇಡೀ ತಂಡದ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ 51 ಕೋಟಿ ರೂ.ಗಳ ಬಹುಮಾನ ಬಹುಮಾನವನ್ನು ಘೋಷಿಸಿದೆ ”ಎಂದು ದೇವಜಿತ್ ಸೈಕಿಯಾ ANI ಗೆ ತಿಳಿಸಿದರು.



ವಿಶ್ವ ಚಾಂಪಿಯನ್ ಆದ ನಂತರ, ಭಾರತೀಯ ಮಹಿಳಾ ತಂಡವು ಸುಮಾರು ₹39.77 ಕೋಟಿ ರು. ನಗದು ಬಹುಮಾನವನ್ನು ಪಡೆದುಕೊಂಡಿದೆ. ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ನಗದು ಬಹುಮಾನವಾಗಿದೆ. ರನ್ನರ್ ಅಪ್‌ಗೆ ತೃಪ್ತಿಪಟ್ಟ ದಕ್ಷಿಣ ಆಫ್ರಿಕಾ 2.24 ಮಿಲಿಯನ್ ಯುಎಸ್ ಡಾಲರ್ (ಸುಮಾರು ₹19.88 ಕೋಟಿ) ಮೊತ್ತವನ್ನು ಸ್ವೀಕರಿಸಿತು.‌

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡ, ಉತ್ತಮ ಪ್ರದರ್ಶನವನ್ನು ತೋರಿತು. ಶಫಾಲಿ ವರ್ಮಾ (87) ಹಾಗೂ ದೀಪ್ತಿ ಶರ್ಮಾ (58) ಅವರ ಅರ್ಧಶತಕಗಳ ಬಲದಿಂದ ಭಾರತ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 298 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ನಾಯಕಿ ಲಾರಾ ವಾಲ್ವಾರ್ಡ್ಟ್‌ ಅವರ ಏಕಾಂಗಿ ಹೋರಾಟದ ಹೊರತಾಗಿಯೂ 45.3 ಓವರ್‌ಗಳಿಗೆ 246 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ 52 ರನ್‌ ಸೋಲೊಪ್ಪಿಕೊಂಡಿತು.