BCCI Apex Council meeting: ಐಪಿಎಲ್ ವಿಜಯೋತ್ಸವಕ್ಕೆ ಮಾರ್ಗಸೂಚಿ; ತ್ರಿಸದಸ್ಯ ಸಮಿತಿ ರಚನೆ
ಸೈಯದ್ ಮುಷ್ತಾದ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪ್ಲೇಟ್ ಗುಂಪಿನಲ್ಲಿ ಸೂಪರ್ ಲೀಗ್ ಜಾರಿ ಮಾಡಲಾಗುತ್ತಿದೆ. ಹೋದ ವರ್ಷದವರೆಗೂ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಹಂತದಲ್ಲಿ ನಾಕೌಟ್ ಪಂದ್ಯಗಳು ನಡೆದಿದ್ದವು. ಈಗ ಸೂಪರ್ ಲೀಗ್ ಮಾಡುವುದರಿಂದ 3 ಪಂದ್ಯಗಳು ಹೆಚ್ಚಾಗಲಿವೆ ಎ ಮತ್ತು ಬಿ ಗುಂಪಿನ ಅಗ್ರ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.


ಮುಂಬಯಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಐಪಿಎಲ್ ಪ್ರಶಸ್ತಿ ಜಯಿಸಿದ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ಸಂಭವಿಸಿದ(Bengaluru stampede) ದುರ್ಘಟನೆಯಂತೆ ಮತ್ತೆ ಮರುಕಳಿಸಬಾರದೆಂಬ ಕಾಳಜಿ ವ್ಯಕ್ತಪಡಿಸಿರುವ ಬಿಸಿಸಿಐ ಐಪಿಎಲ್(BCCI Apex Council meeting) ಸಂಭ್ರಮಾಚರಣೆಗೆ ಸೂಕ್ತ ಮಾರ್ಗಸೂಚಿಯೊಂದನ್ನು ರಚಿಸಲು ಮುಂದಾಗಿದೆ. ಇದಕ್ಕಾಗಿ ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಯಿತು. ದೇವಜಿತ್ ಸೈಕಿಯಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಖಜಾಂಚಿ ಪ್ರಭತೇಜ್ ಸಿಂಗ್ ಭಾಟಿಯಾ ಅವರನ್ನು ಈ ಸಮಿತಿ ಒಳಗೊಂಡಿದೆ. ಜೂನ್ 4ರಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಮೃತರಾಗಿದ್ದರು. 56 ಮಂದಿ ಗಾಯಗೊಂಡಿದ್ದರು.
ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ವೇಳಾಪಟ್ಟಿಯ ಬಗ್ಗೆ ಮಾಹಿತಿ ನೀಡಲಾಯಿತು. ಅಕ್ಟೋಬರ್ 15ರಿಂದ ಫೆ. 28ರವರೆಗೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಸಲದ ಟೂರ್ನಿಯು ಎರಡು ಭಾಗಗಳಲ್ಲಿ ನಡೆಯಲಿದೆ ಮೊದಲ ಹಂತವು ಅ.15 ರಿಂದ ನ.19ರವರೆಗೆ ನಡೆಯುವುದು. ಎರಡನೇಯದ್ದು ಜ.22ರಿಂದ ಫೆ.1 ರವರೆಗೆ ನಡೆಯಲಿದೆ. ನಾಕೌಟ್ ಹಂತವು ಫೆ. 6 ರಿಂದ 28ರವರೆಗೆ ಆಯೋಜನೆಯಾಗಲಿದೆ.
ದುಲೀಪ್ ಟ್ರೋಫಿ ಟೂರ್ನಿಯನ್ನು ಮತ್ತೆ ವಲಯ ತಂಡಗಳ ಮಾದರಿಯಲ್ಲಿ ನಡೆಸಲು ತೀರ್ಮಾ ಕೈಗೊಳ್ಳಲಾಯಿತು. ಆಗಸ್ಟ್ 28ರಿಂದ ಸೆಪ್ಟೆಂಬರ್ 15ರವರೆಗೆ ಪಂದ್ಯಾವಳಿ ನಡೆಯಲಿದೆ. ತಂಡಗಳನ್ನು ವಲಯ ಆಯ್ಕೆ ಸಮಿತಿಗಳು ಆಯ್ಕೆ ಮಾಡಲಿವೆ ಎಂದು ಬಿಸಿಸಿಐ ತಿಳಿಸಿದೆ.
ಇದನ್ನೂ ಓದಿ ಮಾಲಿನ್ಯ ಸಮಸ್ಯೆ; ನವೆಂಬರ್ ಟೆಸ್ಟ್ ಪಂದ್ಯವನ್ನು ದೆಹಲಿಯಿಂದ ಸ್ಥಳಾಂತರಿಸಿದ ಬಿಸಿಸಿಐ
ಇರಾನಿ ಕಪ್ ಟೂರ್ನಿಯು ಅಕ್ಟೋಬರ್ 1 ರಿಂದ 5ರವರೆಗೆ ನಡೆಯಲಿದೆ. ಸೈಯದ್ ಮುಷ್ತಾದ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪ್ಲೇಟ್ ಗುಂಪಿನಲ್ಲಿ ಸೂಪರ್ ಲೀಗ್ ಜಾರಿ ಮಾಡಲಾಗುತ್ತಿದೆ. ಹೋದ ವರ್ಷದವರೆಗೂ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಹಂತದಲ್ಲಿ ನಾಕೌಟ್ ಪಂದ್ಯಗಳು ನಡೆದಿದ್ದವು. ಈಗ ಸೂಪರ್ ಲೀಗ್ ಮಾಡುವುದರಿಂದ 3 ಪಂದ್ಯಗಳು ಹೆಚ್ಚಾಗಲಿವೆ ಎ ಮತ್ತು ಬಿ ಗುಂಪಿನ ಅಗ್ರ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಟೂರ್ನಿಯು ನವೆಂಬರ್ 26 ರಿಂದ ಡಿಸೆಂಬರ್ 18ರವರೆಗೆ ನಡೆಯಲಿದೆ.