IPL 2026: ಸುಂದರ್ ಸಿಎಸ್‌ಕೆಗೆ ವರ್ಗಾವಣೆ?; ಇಶಾನ್ ಕಿಶನ್‌ಗೆ 3 ಫ್ರಾಂಚೈಸಿ ಪೈಪೋಟಿ
ಸುಂದರ್ ಗುಜರಾತ್ ಪರ 3.2 ಕೋಟಿ ರೂ. ಒಪ್ಪಂದ ಹೊಂದಿದ್ದಾರೆ. ಸಿಎಸ್‌ಕೆ ಸಂಪೂರ್ಣ ನಗದು ಹಣಕ್ಕೆ ಸುಂದರ್ ವರ್ಗಾವಣೆಯಾಗಿದೆ. ಇತ್ತೀಚೆಗೆ ಸುಂದರ್ ಭಾರತ ಪರ ಉತ್ತಮ ಪ್ರದರ್ಶನ ತೋರುತ್ತಿರುವ ಕಾರಣ ಅವರನ್ನು ಗುಜರಾತ್ ತಂಡದಿಂದ ಬಿಡುಗಡೆ ಮಾಡಲು ಒಪ್ಪಿಕೊಳ್ಳಬಹುದೇ ಎಂಬ ಪ್ರಶ್ನೆಯೂ ಇದೆ.
-
Abhilash BC
Oct 24, 2025 11:48 AM
ಚೆನ್ನೈ: ಮುಂದಿನ ಋತುವಿನ ಐಪಿಎಲ್(IPL 2026) ಮಿನಿ ಹರಾಜಿಗೂ(IPL 2026 Auction) ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings), ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್(Washington Sundar) ಅವರನ್ನು ಟ್ರೇಡಿಂಗ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಸದ್ಯ ಸುಂದರ್ ಗುಜರಾತ್ ಟೈಟಾನ್ಸ್(Gujarat Titans) ತಂಡದ ಆಟಗಾರನಾಗಿದ್ದಾರೆ. ಇಶಾನ್ ಕಿಶನ್(Ishan Kishan) ಅವರನ್ನು ವರ್ಗಾವಣೆ ಮಾಡಿಕೊಳ್ಳಲು ಕೋಲ್ಕತಾ ನೈಟ್ ರೇಡರ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ತೀವ್ರ ಪೈಪೋಟಿಗೆ ಬದ್ದಿದೆ ಎನ್ನಲಾಗಿಎ.
ಆರ್. ಅಶ್ವಿನ್ ಅವರು ಐಪಿಎಲ್ ನಿವೃತ್ತ ಬಳಿಕ ಅವರ ಸ್ಥಾನ ಖಾಲಿ ಇದೆ. ಈ ಸ್ಥಾನಕ್ಕೆ ಸುಂದರ್ ಅವರನ್ನು ಕರೆತರುವುದು ಫ್ರಾಂಚೈಸಿಯ ಯೋಚಿಸಿದೆ. ಸುಂದರ್ ಗುಜರಾತ್ ಪರ 3.2 ಕೋಟಿ ರೂ. ಒಪ್ಪಂದ ಹೊಂದಿದ್ದಾರೆ. ಸಿಎಸ್‌ಕೆ ಸಂಪೂರ್ಣ ನಗದು ಹಣಕ್ಕೆ ಸುಂದರ್ ವರ್ಗಾವಣೆಯಾಗಿದೆ. ಇತ್ತೀಚೆಗೆ ಸುಂದರ್ ಭಾರತ ಪರ ಉತ್ತಮ ಪ್ರದರ್ಶನ ತೋರುತ್ತಿರುವ ಕಾರಣ ಅವರನ್ನು ಗುಜರಾತ್ ತಂಡದಿಂದ ಬಿಡುಗಡೆ ಮಾಡಲು ಒಪ್ಪಿಕೊಳ್ಳಬಹುದೇ ಎಂಬ ಪ್ರಶ್ನೆಯೂ ಇದೆ.
ಎಂಎಸ್ ಧೋನಿ ಅವರನ್ನು ಐಪಿಎಲ್ 2026 ರ ಹರಾಜಿಗೆ ಮುಂಚಿತವಾಗಿ ತಂಡದಿಂದ ಕೈಬಿಡಲು ನಿರ್ಧರಿಸಿದೆ ಎಂಬ ಸ್ಫೋಟಕ ಸುದ್ದದಿಯೊಂದು ಹೊರಬಿದ್ದಿದೆ. ಒಂದು ವೇಳೆ ಫ್ರಾಂಚೈಸಿ ಧೋನಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದರೆ, ಅದು ಕೇವಲ ಒಬ್ಬ ಆಟಗಾರನನ್ನು ಕೈಬಿಡುವುದಲ್ಲ ಒಂದು ಪರಂಪರೆಯನ್ನು ಕೊನೆಗೊಳಿಸಿದಂತಾಗುತ್ತದೆ. ಸಿಎಸ್‌ಕೆ ಯಶಸ್ಸಿಗೆ ಅವರು ಕೇಂದ್ರಬಿಂದುವಾಗಿದ್ದರಿಂದ ಅವರ ಸ್ಥಾನವನ್ನು ತುಂಬುವ ಮತ್ತೊಂದು ಆಟಗಾರ ಆಯ್ಕೆಯಲ್ಲಿ ಫ್ರಾಂಚೈಸಿ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗುತ್ತದೆ.
ಇದನ್ನೂ ಓದಿ IPL 2026: ಮಿನಿ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಬೇಕಾದ ಮೂವರು ಆಟಗಾರರು!
ಐಪಿಎಲ್ 2026 ಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮರಳಲು ನಾರಾಯಣ್ ಜಗದೀಶನ್ ಪ್ರಬಲ ಸ್ಪರ್ಧಿಯಾಗಬಹುದು. ಈ ಹಿಂದೆ ಫ್ರಾಂಚೈಸಿಯ ಭಾಗವಾಗಿದ್ದ ಜಗದೀಶನ್, ಚೆನ್ನೈ ಮೂಲದ ಫ್ರಾಂಚೈಸಿಯ ಸಂಸ್ಕೃತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಕಳೆದ ಎರಡು ದೇಶೀಯ ಋತುಗಳಲ್ಲಿ, ಅವರು ಅದ್ಭುತ ಫಾರ್ಮ್‌ನಲ್ಲಿದ್ದು, ಎಲ್ಲಾ ಸ್ವರೂಪಗಳಲ್ಲಿ ಉತ್ತಮ ಸ್ಕೋರ್ ಗಳಿಸಿದ್ದಾರೆ.