ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಈ ಬಾರಿಯೂ ಆರ್‌ಸಿಬಿ ಅಭಿಮಾನಿಗಳಿಗೆ ಬಿಸಿ ತುಪ್ಪವಾದ ತವರಿನ ಪಂದ್ಯಗಳ ಟಿಕೆಟ್‌ ದರ

RCB Home Game Tickets: ಆರ್‌ಸಿಬಿ ತಂಡದ ತವರಿನ ಪಂದ್ಯಗಳ ಟಿಕೆಟ್‌ ಮಾರಾಟವನ್ನು ಫ್ರಾಂಚೈಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಈಗಾಗಲೇ ಪ್ರಕಟಿಸಿದ್ದು, ಕನಿಷ್ಠ 2300 ನಿಗದಿಪಡಿಸಲಾಗಿದೆ. ಗರಿಷ್ಠ ಮೊತ್ತದ ಟಿಕೆಟ್‌ ಮೌಲ್ಯ 42000 ಇದೆ. ಟಿಕೆಟ್‌ಗಳ ಬೆಲೆ ದುಬಾರಿಯಾಗಿದ್ದರೂ, ಮೊದಲ ಪಂದ್ಯದ ಟಿಕೆಟ್‌ಗಳು ಈಗಾಗಲೇ ಖಾಲಿಯಾಗಿವೆ.

ಬೆಂಗಳೂರು: 18ನೇ ಆವೃತ್ತಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2025) ಆರಂಭಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಮಾ.22ರಂದು ಟೂರ್ನಿಗೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಆರ್‌ಸಿಬಿ ವಿರುದ್ಧ(RCB vs KKR) ಸೆಣಸಾಡಲಿದೆ. ಈ ಬಾರಿಯೂ ಆರ್‌ಸಿಬಿ ಅಭಿಮಾನಿಗಳು ತವರಿನಲ್ಲಿ ಪಂದ್ಯದ ಟಿಕೆಟ್‌ ದರ(Rcb Match Tickets Price) ಬಿಸಿ ತುಪ್ಪವಾಗಿದೆ. ಆರ್‌ಸಿಬಿ ತನ್ನ ತವರು ಬೆಂಗಳೂರಿನ(RCB Home Game Tickets) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 7 ಪಂದ್ಯಗಳನ್ನಾಡಲಿವೆ.

ಆರ್‌ಸಿಬಿ ತಂಡದ ತವರಿನ ಪಂದ್ಯಗಳ ಟಿಕೆಟ್‌ ಮಾರಾಟವನ್ನು ಫ್ರಾಂಚೈಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಈಗಾಗಲೇ ಪ್ರಕಟಿಸಿದ್ದು, ಕನಿಷ್ಠ 2300 ನಿಗದಿಪಡಿಸಲಾಗಿದೆ. ಗರಿಷ್ಠ ಮೊತ್ತದ ಟಿಕೆಟ್‌ ಮೌಲ್ಯ 42000 ಇದೆ. ಟಿಕೆಟ್‌ಗಳ ಬೆಲೆ ದುಬಾರಿಯಾಗಿದ್ದರೂ, ಮೊದಲ ಪಂದ್ಯದ ಟಿಕೆಟ್‌ಗಳು ಈಗಾಗಲೇ ಖಾಲಿಯಾಗಿವೆ.

ಆರ್‌ಸಿಬಿ ಪಂದ್ಯಗಳ ವೇಳಾಪಟ್ಟಿ

ಆರ್‌ಸಿಬಿ vs ಕೆಕೆಆರ್‌; ಮಾ.22 ಕೋಲ್ಕತಾ ಸಂಜೆ 7.30

ಆರ್‌ಸಿಬಿ vs ಚೆನ್ನೈ; ಮಾ.28 ಚೆನ್ನೈ ಸಂಜೆ 7.30

ಆರ್‌ಸಿಬಿ vs ಗುಜರಾತ್‌; ಏ.2 ಬೆಂಗಳೂರು ಸಂಜೆ 7.30

ಆರ್‌ಸಿಬಿ vs ಮುಂಬೈ; ಏ.7 ಮುಂಬೈ ಸಂಜೆ 7.30

ಆರ್‌ಸಿಬಿ vs ಡೆಲ್ಲಿ; ಏ.10 ಬೆಂಗಳೂರು ಸಂಜೆ 7.30

ಆರ್‌ಸಿಬಿ vs ರಾಜಸ್ಥಾನ; ಏ.13 ಜೈಪುರ ಮಧ್ಯಾಹ್ನ 3.30

ಆರ್‌ಸಿಬಿ vs ಪಂಜಾಬ್‌; ಏ.18 ಬೆಂಗಳೂರು ಸಂಜೆ 7.30

ಆರ್‌ಸಿಬಿ vs ಪಂಜಾಬ್‌; ಏ.20 ಚಂಡೀಗಢ ಮಧ್ಯಾಹ್ನ 3.30

ಆರ್‌ಸಿಬಿ vs ರಾಜಸ್ಥಾನ; ಏ.24 ಬೆಂಗಳೂರು ಸಂಜೆ 7.30

ಆರ್‌ಸಿಬಿ vs ಡೆಲ್ಲಿ; ಏ.27 ನವದೆಹಲಿ ಸಂಜೆ 7.30

ಆರ್‌ಸಿಬಿ vs ಚೆನ್ನೈ; ಮೇ 3 ಬೆಂಗಳೂರು ಸಂಜೆ 7.30

ಆರ್‌ಸಿಬಿ vs ಲಕ್ನೋ; ಮೇ 9 ಲಕ್ನೋ ಸಂಜೆ 7.30

ಆರ್‌ಸಿಬಿ vs ಸನ್‌ರೈಸರ್ಸ್‌; ಮೇ 9 ಬೆಂಗಳೂರು ಸಂಜೆ 7.30

ಆರ್‌ಸಿಬಿ vs ಕೆಕೆಆರ್‌; ಮೇ 17 ಬೆಂಗಳೂರು ಸಂಜೆ 7.30

ಇದನ್ನೂ ಓದಿ IPL 2025: ರಾಜಸ್ಥಾನ್‌ ರಾಯಲ್ಸ್‌ 3 ಪಂದ್ಯಗಳಿಗೆ ರಿಯಾನ್‌ ಪರಾಗ್ ನಾಯಕ

ಆರ್‌ಸಿಬಿ ತಂಡ

ವಿರಾಟ್‌ ಕೊಹ್ಲಿ,ರಜತ್‌ ಪಾಟೀದಾರ್‌, ಯಶ್‌ ದಯಾಳ್‌,ಜೋಶ್​ ಹ್ಯಾಸಲ್​ವುಡ್,​ ಫಿಲ್​ ಸಾಲ್ಟ್​, ಜಿತೇಶ್​ ಶರ್ಮ, ಲಿಯಾಮ್​ ಲಿವಿಂಗ್​ಸ್ಟೋನ್​, ರಸಿಕ್​ ಸಲಾಂ, ಸುಯಶ್​ ಶರ್ಮ, ಭುವನೇಶ್ವರ್​ ಕುಮಾರ್,ಕೃನಾಲ್​ ಪಾಂಡ್ಯ, ಟಿಮ್​ ಡೇವಿಡ್, ಜೇಕಬ್​ ಬೆಥೆಲ್, ದೇವದತ್​ ಪಡಿಕ್ಕಲ್​, ನುವಾನ್​ ತುಷಾರ, ರೊಮಾರಿಯೊ ಶೆರ್ಡ್​, ಸ್ವಪ್ನಿಲ್​ ಸಿಂಗ್​, ಮನೋಜ್​ ಭಾಂಡಗೆ, ಸ್ವಸ್ತಿಕ್​ ಚಿಕರ, ಮೋಹಿತ್​ ರಾಥೀ, ಅಭಿನಂದನ್​ ಸಿಂಗ್​, ಲುಂಗಿ ಎನ್​ಗಿಡಿ.