IPL 2025: ರಾಜಸ್ಥಾನ್ ರಾಯಲ್ಸ್ 3 ಪಂದ್ಯಗಳಿಗೆ ರಿಯಾನ್ ಪರಾಗ್ ನಾಯಕ
Riyan Parag: 'ಯುವ ಆಲ್‌ರೌಂಡರ್ ಪರಾಗ್ ಸಾರಥ್ಯದಲ್ಲಿ ರಾಜಸ್ಥಾನ್ ತಂಡ ಮಾರ್ಚ್ 23 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ, ನಂತರ ಮಾರ್ಚ್ 26 ರಂದು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮಾರ್ಚ್ 30 ರಂದು ನಡೆಯುವ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತವರಿನ ಪಂದ್ಯದಲ್ಲಿ ಆಡಲಿದೆ' ಎಂದು ಫ್ರಾಂಚೈಸಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ


ನವದೆಹಲಿ: 18ನೇ ಆವೃತ್ತಿಯ ಐಪಿಎಲ್‌ನ(IPL 2025) ಮೊದಲ ಮೂರು ಪಂದ್ಯಗಳಲ್ಲಿ ಉದಯೋನ್ಮುಖ ಬ್ಯಾಟರ್ ರಿಯಾನ್ ಪರಾಗ್(Riyan Parag) ಅವರು ರಾಜಸ್ಥಾನ್ ರಾಯಲ್ಸ್(Rajasthan Royals) ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ತಂಡದ ಖಾಯಂ ನಾಯಕ ಸಂಜು ಸ್ಯಾಮ್ಸನ್(Sanju Samson) ಬೆರಳಿನ ಶಸ್ತ್ರಚಿಕಿತ್ಸೆಯ ನಂತರ ವಿಕೆಟ್ ಕೀಪಿಂಗ್ ಮಾಡಲು ಇನ್ನೂ ಅನುಮತಿ ಪಡೆಯದ ಕಾರಣ ಸಂಜು ಇಂಪ್ಯಾಕ್ಟ್ ಬದಲಿ ಆಟಗಾರನಾಗಿ ಆಡಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ರಾಜಸ್ಥಾನ್ ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್ 23 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.
ಮುಂಬೈನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಜೋಫ್ರಾ ಆರ್ಚರ್ ಎಸೆತದಿಂದ ಸ್ಯಾಮ್ಸನ್ ಅವರ ಬೆರಳಿಗೆ ಮೂಳೆ ಮುರಿತ ಉಂಟಾಗಿತ್ತು. ನಂತರ ಅವರು ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತೇಚರಿಕೆ ಕಂಡಿದ್ದರೂ ಕೂಡ ಅವರಿಗೆ ಬ್ಯಾಟಿಂಗ್ ಮಾಡಲು ಮಾತ್ರ ಬಿಸಿಸಿಐ ಅನುಮತಿ ನೀಡಲಾಗಿದೆ ಎನ್ನಲಾಗಿದೆ. ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿರುವ ವೈದ್ಯಕೀಯ ಮತ್ತು ಕ್ರೀಡಾ ವಿಜ್ಞಾನ ತಂಡಗಳು ವಿಕೆಟ್ ಕೀಪಿಂಗ್ ಪ್ರಾರಂಭಿಸುವ ಮೊದಲು ಸಂಜು ತಮ್ಮ ಬೆರಳುಗಳಿಗೆ ಸ್ವಲ್ಪ ವಿಶ್ರಾಂತಿ ನೀಡಬೇಕೆಂದು ತಿಳಿಸಿದ್ದು ಹೀಗಾಗಿ ಅವರು ಮೊದಲ ಮೂರು ಪಂದ್ಯದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಕೇವಲ ಬ್ಯಾಟಿಂಗ್ ಮಾತ್ರ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಂಜು ಅನುಪಸ್ಥಿತಿಯಲ್ಲಿ 23 ವರ್ಷದ ರಿಯಾನ್ ಪರಾಗ್ ಅವರು ಹಂಗಾಮಿ ನಾಯಕನಾಇ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ಅವರು ನಾಯಕನಾದರೆ ವಿರಾಟ್ ಕೊಹ್ಲಿ ನಂತರ ಐಪಿಎಲ್‌ನಲ್ಲಿ ನಾಯಕತ್ವವಹಿಸಿದ ಅತ್ಯಂತ ಕಿರಿಯ ನಾಯಕ ಎನಿಸಿಕೊಳ್ಳಲಿದ್ದಾರೆ.
🚨 RIYAN PARAG AS CAPTAIN 🚨
— Johns. (@CricCrazyJohns) March 20, 2025
- Riyan Parag will lead Rajasthan Royals in the first 3 matches in IPL 2025. [PTI] pic.twitter.com/HjICaYZ6J3
'ಯುವ ಆಲ್‌ರೌಂಡರ್ ಪರಾಗ್ ಸಾರಥ್ಯದಲ್ಲಿ ರಾಜಸ್ಥಾನ್ ತಂಡ ಮಾರ್ಚ್ 23 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ, ನಂತರ ಮಾರ್ಚ್ 26 ರಂದು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮಾರ್ಚ್ 30 ರಂದು ನಡೆಯುವ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತವರಿನ ಪಂದ್ಯದಲ್ಲಿ ಆಡಲಿದೆ' ಎಂದು ಫ್ರಾಂಚೈಸಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
'ರಾಯಲ್ಸ್ ತಂಡದ ಅವಿಭಾಜ್ಯ ಅಂಗವಾಗಿರುವ ಸ್ಯಾಮ್ಸನ್, ವಿಕೆಟ್ ಕೀಪಿಂಗ್ ಮತ್ತು ಫೀಲ್ಡಿಂಗ್‌ಗೆ ಅನುಮತಿ ಪಡೆಯುವವರೆಗೂ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಪ್ರಮುಖ ಕೊಡುಗೆ ನೀಡುವ ವಿಶ್ವಾಸವಿದೆ. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಅವರು ನಾಯಕನಾಗಿ ಮರಳುತ್ತಾರೆ' ಎಂದು ಫ್ರಾಂಚೈಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.