INDW vs PAKW: ಭಾರತ-ಪಾಕ್ ಮಹಿಳಾ ಹೈವೋಲ್ಟೇಜ್ ಪಂದ್ಯಕ್ಕೆ ಕೀಟ ಬಾಧೆ; 15 ನಿಮಿಷ ಪಂದ್ಯ ಸ್ಥಗಿತ
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಭರ್ತಿ 50 ಓವರ್ ಆಡಿ 247ರನ್‌ಗೆ ಆಲೌಟ್ ಆಯಿತು. ತಂಡದ ಪರ ಹರ್ಲೀನ್ ಡಿಯೋಲ್ 46, ಜೆಮಿಮಾ ರೋಡ್ರಿಗಸ್ 32 ಮತ್ತು ರಿಚಾ ಘೋಷ್ ಅಜೇಯ 35 ರನ್ ಬಾರಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾದರು. ಅವರ ಗಳಿಕೆ 19 ರನ್‌ಗೆ ಸೀಮಿತವಾಯಿತು.

-

ಕೊಲಂಬೊ: ಪಾಕಿಸ್ತಾನ ಮತ್ತು ಭಾರತ(INDW vs PAKW) ನಡುವಣ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದ(women's World Cup) ವೇಳೆ ಕೀಟಗಳ ಹಾವಳಿಯಿಂದ ಪಂದ್ಯಕ್ಕೆ ಅಡಚಣೆ ಉಂಟಾಯಿತು. ಭಾರತ ಬ್ಯಾಟಿಂಗ್ ಇನಿಂಗ್ಸ್‌ನ ಕೊನೆಯ ಕೆಲವು ಓವರ್ ಬಾಕಿ ಇರುವಾಗ ಮೈದಾನ ಫ್ಲಡ್ ಲೈಟ್‌ಗಳನ್ನು ಹಾಕಲಾಯಿತು. ಈ ವೇಳೆ ಕೀಟಗಳು ಏಕಾಏಕಿ ಮೈದಾನಕ್ಕೆ ನುಗ್ಗಲಾರಂಭಿಸಿತು.
ಕೀಟಗಳ ದಾಳಿಗೆ ಆಟಗಾರ್ತಿಯರು ಮೈದಾನ ತೊರೆದು ಡಗೌಟ್ ಕಡೆ ಓಡಲಾರಂಭಿಸಿದರು. ಬಳಿಕ ಗ್ರೌಂಡ್ ಸಿಬ್ಬಂದಿಗಳು ಹೊಗೆಯನ್ನು ಹಾಕಿ ಕೀಟಗಳನ್ನು ಓಡಿಸುವ ಪ್ರಯತ್ನ ಮಾಡಿದರು. ಹೀಗಾಗಿ ಪಂದ್ಯ 15 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಯಿತು. ಸದ್ಯ ಕೀಟಗಳ ಹಾವಳಿಯ ವಿಡಿಯೊ ವೈರಲ್ ಆಗಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಭರ್ತಿ 50 ಓವರ್ ಆಡಿ 247ರನ್‌ಗೆ ಆಲೌಟ್ ಆಯಿತು. ತಂಡದ ಪರ ಹರ್ಲೀನ್ ಡಿಯೋಲ್ 46, ಜೆಮಿಮಾ ರೋಡ್ರಿಗಸ್ 32 ಮತ್ತು ರಿಚಾ ಘೋಷ್ ಅಜೇಯ 35 ರನ್ ಬಾರಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾದರು. ಅವರ ಗಳಿಕೆ 19 ರನ್‌ಗೆ ಸೀಮಿತವಾಯಿತು.
ಇದನ್ನೂ ಓದಿ ಮಹಿಳಾ ವಿಶ್ವಕಪ್‌ನಲ್ಲೂ ಮುಂದುವರಿದ ನೋ ಶೇಕ್‌ಹ್ಯಾಂಡ್ ವಾರ್; ಪಾಕ್ ನಾಯಕಿ ಕೈಕುಲುಕದ ಭಾರತೀಯ ನಾಯಕಿ
Never before seen on a cricket field. The cricket field being cleared of insects #INDvsPAK #WomensWorldCup2025 #colombo pic.twitter.com/akJvBpFXqe
— Santosh Menon (@santoshm) October 5, 2025
ದ್ವಿಪಕ್ಷೀಯ ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ, ಐಸಿಸಿ ಟೂರ್ನಿಯಲ್ಲಿ ಸದಾ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರುವ ಸ್ಮೃತಿ ಮಂಧಾನ ತಮ್ಮ ಕಳಪೆ ಫಾರ್ಮ್ ಅನ್ನು ಏಕದಿನ ವಿಶ್ವಕಪ್‌ನಲ್ಲಿಯೂ ಮುಂದುವರಿಸಿದ್ದಾರೆ. ಆಡಿದ ಎರಡೂ ಪಂದ್ಯಗಳಲ್ಲಿಯೂ ಎರಡಂಕಿ ಮೊತ್ತ ಪೇರಿಸಲು ವಿಫಲವಾಗಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಕೆಲ ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದ್ದಾರೆ.
ಪಾಕಿಸ್ತಾನ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಡಯಾನಾ ಬೇಗ್ ಒಂದು ಮೇಡನ್ ಸಹಿತ 69 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತರು. ಉಳಿದಂತೆ ಸಾದಿಯಾ ಇಕ್ಬಾಲ್ ಮತ್ತು ನಾಯಕಿ ಫಾತಿಮಾ ಸನಾ ತಲಾ ಎರಡು ವಿಕೆಟ್ ಉರುಳಿಸಿದರು.