Chamari Athapaththu: 4 ಸಾವಿರ ಏಕದಿನ ರನ್‌ಗಳ ಮೈಲಿಗಲ್ಲು ತಲುಪಿದ ಚಾಮರಿ ಅತಪಟ್ಟು; ಲಂಕಾದ ಮೊದಲ ಸಾಧಕಿ
SLW vs BANW: ಸಣ್ಣ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ಗೆಲುವಿನ ಹತ್ತಿರಕ್ಕೆ ಬಂದಾಗ ಅನಗತ್ಯವಾಗಿ ಗಾಬರಿಗೊಂಡು 9 ವಿಕೆಟ್‌ಗೆ 195ರನ್ ಗಳಿಸಲಷ್ಟೇ ಶಕ್ತವಾಗಿ ಕೇವಲ 7 ರನ್‌ಗಳ ವೀರೋಚಿತ ಸೋಲು ಅನುಭವಿಸಿತು. ಲಂಕಾ ತಂಡ ಗೆದ್ದು ಸೆಮಿ ಪ್ರವೇಶದ ಆಸೆ ಜೀವಂತ ಉಳಿಸಿಕೊಂಡಿದೆ.

-

ನವಿ ಮುಂಬೈ: ಸೋಮವಾರ ನಡೆದ ಮಹಿಳಾ ವಿಶ್ವಕಪ್‌ನ(Womens World Cup 2025) ಬಾಂಗ್ಲಾದೇಶ(SLW vs BANW) ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ನಾಯಕಿ ಚಾಮರಿ ಅತಪಟ್ಟು(Chamari Athapaththu) ವಿಶೇಷ ಮೈಲುಗಲ್ಲೊಂದನ್ನು ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 4 ಸಾವಿರ ರನ್ ಪೂರೈಸಿದ ಶ್ರೀಲಂಕಾದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು.
ಈ ಮೈಲಿಗಲ್ಲು ಸಾಧಿಸಲು ಅಥಪತ್ತುಗೆ ಬಾಂಗ್ಲಾದೇಶ ಪಂದ್ಯಕ್ಕೂ ಮುನ್ನ ಕೇವಲ ಒಂದು ರನ್ ಅಗತ್ಯವಿತ್ತು. ಮಹಿಳಾ ಏಕದಿನ ಪಂದ್ಯಗಳಲ್ಲಿ 4,000 ರನ್ ಗಳಿಸಿದ ನಾಲ್ಕನೇ ಏಷ್ಯನ್ ಮತ್ತು ಒಟ್ಟಾರೆ 20 ನೇ ಮಹಿಳಾ ಬ್ಯಾಟರ್ ಆಗಿ ಹೊರಹೊಮ್ಮಿದರು. ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್(7,805) ಅಗ್ರಸ್ಥಾನದಲ್ಲಿದ್ದಾರೆ.
ನವಿ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅತಪಟ್ಟು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇನ್ನಿಂಗ್ಸ್ ಆರಂಭಿಸಿದ ಅವರು 43 ಎಸೆತಗಳಲ್ಲಿ 46 ರನ್ ಗಳಿಸಿ ಔಟಾದರು. 4 ರನ್ ಅಂತರದಿಂದ ಅರ್ಧಶತಕ ಬಾರಿಸುವ ಅವಕಾಶ ಕಳೆದುಕೊಂಡರು. ಹಾಸಿನಿ ಪೆರೇರಾ 85 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇವರ ಬ್ಯಾಟಿಂಗ್ ಬಲದಿಂದ ಲಂಕಾ 202 ರನ್ ಬಾರಿಸಿತು.
HISTORY MADE! 🇱🇰👑
— Sri Lanka Cricket 🇱🇰 (@OfficialSLC) October 20, 2025
A massive congratulations to our trailblazer, Chamari Athapaththu, on becoming the first Sri Lankan and only the fourth Asian batter to cross the 4️⃣0️⃣0️⃣0️⃣ run mark in ODIs!
She also now holds the record for the most ODI caps for Sri Lanka! #CWC25 #SLvBAN… pic.twitter.com/tXGtFvUnX5
ಸಣ್ಣ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ಗೆಲುವಿನ ಹತ್ತಿರಕ್ಕೆ ಬಂದಾಗ ಅನಗತ್ಯವಾಗಿ ಗಾಬರಿಗೊಂಡು 9 ವಿಕೆಟ್‌ಗೆ 195ರನ್ ಗಳಿಸಲಷ್ಟೇ ಶಕ್ತವಾಗಿ ಕೇವಲ 7 ರನ್‌ಗಳ ವೀರೋಚಿತ ಸೋಲು ಅನುಭವಿಸಿತು. ಲಂಕಾ ತಂಡ ಗೆದ್ದು ಸೆಮಿ ಪ್ರವೇಶದ ಆಸೆ ಜೀವಂತ ಉಳಿಸಿಕೊಂಡಿದೆ.