Congress leader passes away: ಕಾಂಗ್ರೆಸ್ ಮುಖಂಡ ಬಾಬುರೆಡ್ಡಿ ನಿಧನ
ಬಾಗೆಪಲ್ಲಿ ಪಟ್ಟಣ ಪಂಚಾಯಿತಿಗೆ ಸತತವಾಗಿ ೪ ಭಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆನ ಹಿರಿಯ ಮುಖಂಡರಾದ ಆರ್.ಎಲ್.ಜಾಲಪ್ಪ, ವಿ.ಕೃಷ್ಣರಾವ್, ಬಿ.ಎನ್.ವೆಂಕಟಸ್ವಾಮಿ ಅವರ ಒಡನಾಡಿಯಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು. ಪಟ್ಟಣದ ಶಿರಿಡಿಸಾಯಿ ಸೇವಾನಾಥ್ ಟ್ರಸ್ಟ್ನ ಅಧ್ಯಕ್ಷರಾಗಿದ್ದರು.

-

ಬಾಗೇಪಲ್ಲಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ವಿ.ಬಾಬುರೆಡ್ಡಿ(೮೦) ಅನಾರೋಗ್ಯದಿಂದ ಆಂಧ್ರಪ್ರದೇಶದ ಆನಂತಪುರದಲ್ಲಿ ಸೋಮವಾರ ಮಧ್ಯಾಹ್ನ ೧-೩೦ ಗಂಟೆಗೆ ನಿಧನರಾಗಿದ್ದಾರೆ.
ಬಾಗೆಪಲ್ಲಿ ಪಟ್ಟಣ ಪಂಚಾಯಿತಿಗೆ ಸತತವಾಗಿ ೪ ಭಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆನ ಹಿರಿಯ ಮುಖಂಡರಾದ ಆರ್.ಎಲ್.ಜಾಲಪ್ಪ, ವಿ.ಕೃಷ್ಣರಾವ್, ಬಿ.ಎನ್.ವೆಂಕಟಸ್ವಾಮಿ ಅವರ ಒಡನಾಡಿಯಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು. ಪಟ್ಟಣದ ಶಿರಿಡಿಸಾಯಿ ಸೇವಾನಾಥ್ ಟ್ರಸ್ಟ್ನ ಅಧ್ಯಕ್ಷರಾಗಿದ್ದರು.
ಇದನ್ನೂ ಓದಿ: Bagepally News: ಪ್ರತಿ 6 ತಿಂಗಳಿಗೊಮ್ಮೆ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಿ: ಕೆ.ಟಿ.ವೀರಾಂಜನೇಯ
೧೫ ವರ್ಷಗಳಿಂದ ಆಂಧ್ರಪ್ರದೇಶದ ಆನಂತಪುರದ ಸಾಯಿನಗರ್‌ನಲ್ಲಿ ವಾಸವಾಗಿದ್ದ ಇವರು ೪ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ ಮಧ್ಯಾಹ್ನ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ರಾಪ್ತಾಡು ಕ್ಷೇತ್ರದ ಮಾಜಿ ಶಾಸಕ ತೋಪುದುರ್ತಿ ಕೆ.ಪ್ರಕಾಶ್‌ರೆಡ್ಡಿ ತಿಳಿಸಿದ್ದಾರೆ. ಮೃತರು ಪತ್ನಿ ಸುಜಾತಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಆನಂತಪುರದಿಂದ ರಾತ್ರಿ ೯ ಗಂಟೆಗೆ ಅವರ ಪಾರ್ಥಿವ ಶರೀರವನ್ನು ಬಾಗೇಪಲ್ಲಿ ಪಟ್ಟಣಕ್ಕೆ ತಂದು ಪುರಸಭೆ ಹಾಗೂ ಅವರ ಹಳೇ ಮನೆ ಮುಂದೆ ಕೆಲ ಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.
ನಂತರ ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿ ಮೃತರ ಮೆರವಣಿಗೆ ಮಾಡಲಾಯಿತು. ಈ ವೇಳೆ ಪಟ್ಟಣದ ಕಾಂಗ್ರೆಸ್, ಸಿಪಿಐ(ಎಂ), ಜೆಡಿಎಸ್ ಮುಖಂಡರು, ಪುರಸಭಾ ಅಧಿಕಾರಿಗಳು, ಸದಸ್ಯರು ಸಾರ್ವಜನಿಕರು, ಮೃತರಿಗೆ ಹೂಮಾಲೆ ಹಾಕಿ, ಅಂತಿಮ ದರ್ಶನ ಪಡೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.