Gauribidanur News: ಜೆಡಿಎಸ್ ಎಸ್ಸಿ ವಿಭಾಗಕ್ಕೆ ವಕೀಲ ನರಸಿಂಹಮೂರ್ತಿ ನೇಮಕ
ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮದವರಾದ ನರಸಿಂಹಮೂರ್ತಿ ದಲಿತ ಸಂಘಟನೆಗಳ ಮುಖಂಡರಾಗಿ,ಹೋರಾಟಗಾರರಾಗಿ ಗುರುತಿಸಿಕೊಂಡವರು. ವಕೀಲರಾಗಿರುವ ನರಸಿಂಹ ಮೂರ್ತಿ, ಅತಿ ಕಿರಿಯ ವಯಸ್ಸಿನಲ್ಲೇ ಗ್ರಾಮ ಪಂಚಾಯಿತಿ ಸದಸ್ಯರಾಗಿ ನಂತರ ತಾಲೂಕು ಪಂಚಾಯತಿ ಸದಸ್ಯ ರಾಗಿ ಚುನಾಯಿತರಾಗಿ ಕೆಲಸವನ್ನು ಮಾಡಿದ್ದಾರೆ.

ನರಸಿಂಹಮೂರ್ತಿ -

ಗೌರಿಬಿದನೂರು : ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ) ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ವಕೀಲ ನರಸಿಂಹಮೂರ್ತಿ ಅವರನ್ನು ನೇಮಕ ಮಾಡ ಲಾಗಿದೆ.
ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮದವರಾದ ನರಸಿಂಹಮೂರ್ತಿ ದಲಿತ ಸಂಘಟನೆ ಗಳ ಮುಖಂಡರಾಗಿ,ಹೋರಾಟಗಾರರಾಗಿ ಗುರುತಿಸಿಕೊಂಡವರು. ವಕೀಲರಾಗಿರುವ ನರಸಿಂಹ ಮೂರ್ತಿ, ಅತಿ ಕಿರಿಯ ವಯಸ್ಸಿನಲ್ಲೇ ಗ್ರಾಮ ಪಂಚಾಯಿತಿ ಸದಸ್ಯರಾಗಿ ನಂತರ ತಾಲೂಕು ಪಂಚಾ ಯತಿ ಸದಸ್ಯರಾಗಿ ಚುನಾಯಿತರಾಗಿ ಕೆಲಸವನ್ನು ಮಾಡಿದ್ದಾರೆ.
ಇದನ್ನೂ ಓದಿ: Gauribidanur News: ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು: ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀ ಗಣೇಶ್
ಮೊದಲಿನಿಂದಲೂ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷದ ಸಂಘಟನೆಗೆ ಶ್ರಮಿಸಿ ರುವ ನರಸಿಂಹಮೂರ್ತಿ ಅವರನ್ನು ಗುರುತಿಸಿದ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು ನರಸಿಂಹಮೂರ್ತಿ ಅವರನ್ನು ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲು ಸೂಚಿಸಿದ ಹಿನ್ನೆಲೆಯಲ್ಲಿ ವಕೀಲ ನರಸಿಂಹಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.