ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಬಿದ್ದ ಫರ್ಗುಸನ್: ಜೇಮಿಸನ್‌ ಬದಲಿ ಆಟಗಾರ

Champions Trophy: ತಂಡದ ಪ್ರಧಾನ ವೇಗಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಕೈಲ್‌ ಜೇಮಿಸನ್‌, ಗಾಯದ ಸಮಸ್ಯೆಗೆ ಸಿಲುಕಿ ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಕಿವೀಸ್‌ ತಂಡದ ಪರ ಅವರು ಕೊನೆಯ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದು 2023ರಲ್ಲಿ. ಬಾಂಗ್ಲಾ ವಿರುದ್ಧದ ಸರಣಿಯಾಗಿತ್ತು.

2 ವರ್ಷದ ಬಳಿಕ ನ್ಯೂಜಿಲ್ಯಾಂಡ್‌ ತಂಡ ಸೇರಿದ ಜೇಮಿಸನ್‌

Profile Abhilash BC Feb 18, 2025 4:28 PM

ಕರಾಚಿ: ಚಾಂಪಿಯನ್ಸ್‌ ಟ್ರೋಫಿ(Champions Trophy) ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ನಾಳೆ(ಬುಧವಾರ, ಫೆ.19) ನಡೆಯುವ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮುಖಾಮಿಖಿಯಾಗಲಿದೆ. ಪಂದ್ಯ ಆರಂಭಕ್ಕೆ ಮುನ್ನ ದಿನವೇ ಸ್ಟಾರ್‌ ಆಲ್‌ರೌಂಡರ್‌ ಲಾಕಿ ಫರ್ಗುಸನ್ ಕೂಟದಿಂದಲೇ ಹೊರಬಿದ್ದಿದ್ದಾರೆ. ಫರ್ಗುಸನ್ ಬದಲಿಗೆ ನೀಳಕಾಯದ ವೇಗಿ ಕೈಲ್‌ ಜೇಮಿಸನ್‌ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ 2 ವರ್ಷಗಳ ಬಳಿಕ ಅವರು ಏಕದಿನ ತಂಡಕ್ಕೆ ಮರಳಿದರು.

ತಂಡದ ಪ್ರಧಾನ ವೇಗಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಕೈಲ್‌ ಜೇಮಿಸನ್‌, ಗಾಯದ ಸಮಸ್ಯೆಗೆ ಸಿಲುಕಿ ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಕಿವೀಸ್‌ ತಂಡದ ಪರ ಅವರು ಕೊನೆಯ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದು 2023ರಲ್ಲಿ. ಬಾಂಗ್ಲಾ ವಿರುದ್ಧದ ಸರಣಿಯಾಗಿತ್ತು. 30 ವರ್ಷದ ಆಲ್‌ರೌಂಡರ್‌ ಆಗಿರುವ ಜೇಮಿಸನ್‌, ಕಿವೀಸ್‌ ಪರ ಇದುವರೆಗೆ 13 ಏಕದಿನ ಪಂದ್ಯಗಳನ್ನಾಡಿ 14 ವಿಕೆಟ್ ಕಿತ್ತಿದ್ದಾರೆ.



ನ್ಯೂಜಿಲ್ಯಾಂಡ್‌ ಪರಿಷ್ಕೃತ ತಂಡ

ಮಿಚೇಲ್‌ ಸ್ಯಾಂಟ್ನರ್ (ನಾಯಕ), ಮಿಚೇಲ್‌ ಬ್ರೇಸ್‌ವೆಲ್‌, ಮಾರ್ಕ್‌ ಚಾಪ್‌ಮನ್‌, ಡೆವೋನ್‌ ಕಾನ್ವೇ, ಕೈಲ್‌ ಜೇಮಿಸನ್‌, ಮ್ಯಾಟ್‌ ಹೆನ್ರಿ, ಟಾಪ್‌ ಲಥಾಮ್‌, ಡೆರಿಲ್‌ ಮಿಚೇಲ್‌, ವಿಲ್‌ ಓ‘ರೂರ್ಕಿ, ಗ್ಲೆನ್‌ ಫಿಲಿಪ್ಸ್‌, ರಚಿನ್‌ ರವೀಂದ್ರ, ನಾಥನ್‌ ಸ್ಮಿತ್‌, ಕೇನ್‌ ವಿಲಿಯಮ್ಸನ್‌, ವಿಲ್‌ ಯಂಗ್‌, ಜೇಕಬ್‌ ಡಫ್ಫಿ.

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್​ ರಾಬಿನ್​ ಲೀಗ್​ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿ ಫೈನಲ್​ಗೇರಲಿವೆ. 2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಅಗ್ರ 8 ಸ್ಥಾನ ಪಡೆದ ತಂಡಗಳು ಟೂರ್ನಿಗೆ ನೇರ ಅರ್ಹತೆ ಪಡೆದಿತ್ತು.

ಇದನ್ನೂ ಓದಿ India at ICC Champions Trophy: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತದ ಸಾಧನೆಯ ಹಿನ್ನೋಟ

ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯ ವಿಶೇಷತೆ ಎಂದರೆ, ಹೈಬ್ರಿಡ್‌ ಮಾದರಿ. ಭಾರತ ತಂಡವನ್ನು ಪಾಕಿಸ್ತಾನದ ನೆಲಕ್ಕೆ ಕಾಲಿಡಲು ಬಿಸಿಸಿಐ ನಿರಾಕರಿಸಿದ ಕಾರಣ ಐಸಿಸಿ ಈ ಕ್ರಮ ಕೈಗೊಂಡಿದೆ. ಭಾರತದ ಪಂದ್ಯಗಳಿಗೆ ದುಬೈ ಆತಿಥ್ಯ ವಹಿಸಲಿದೆ. ಉಳಿದ 6 ತಂಡಗಳು ಪಾಕಿಸ್ತಾನದಲ್ಲಿ ಆಡಲಿದೆ. ಪಂದ್ಯಗಳು ಪಾಕಿಸ್ತಾನದ ಲಾಹೋರ್‌, ಕರಾಚಿ ಹಾಗೂ ರಾವಲ್ಪಿಂಡಿಯ ಜತೆಗೆ ದುಬೈನಲ್ಲಿ ನಡೆಯಲಿವೆ.

ಇದು 1996ರ ಏಕದಿನ ವಿಶ್ವಕಪ್​ ಬಳಿಕ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿರುವ ಮೊದಲ ಐಸಿಸಿ ಟೂರ್ನಿಯಾಗಿದೆ. 2027ರವರೆಗೆ ಭಾರತದಲ್ಲಿ ನಿಗದಿಯಾಗಿರುವ ಐಸಿಸಿ ಟೂರ್ನಿಗಳನ್ನೂ ಹೈಬ್ರಿಡ್​ ಮಾದರಿಯಲ್ಲಿ ನಡೆಸುವ ಸೂತ್ರದ ಅನ್ವಯ, ಪಾಕಿಸ್ತಾನ ಈ ಬಾರಿ ಆತಿಥ್ಯವನ್ನು ಉಳಿಸಿಕೊಂಡಿದೆ.