ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಪಿಎಲ್‌ ಖ್ಯಾತಿಯ ಬೆನ್ನಲ್ಲೇ ಬ್ರ್ಯಾಂಡ್‌ ಮೌಲ್ಯ ಹೆಚ್ಚಿಸಿಕೊಂಡ ಸೂರ್ಯವಂಶಿ!

Vaibhav Sooryavanshi: ರಾಜಸ್ಥಾನ ರಾಯಲ್ಸ್ ತಂಡದ ವಾರ್ಷಿಕ ರಿಟೇನರ್ ಮೊತ್ತವಾದ 1.10 ಕೋಟಿ ರೂ. ಹಾಗೂ ವಿವಿಧ ಪ್ರಶಸ್ತಿಗಳ ನಗದು ಬಹುಮಾನಗಳ ಜೊತೆಗೆ, ವೈಭವ್ ಸೂರ್ಯವಂಶಿ ಅವರು ಆಡಿದ ಪ್ರತಿಯೊಂದು ಪಂದ್ಯಕ್ಕೂ 7.5 ಲಕ್ಷ ರೂಪಾಯಿ ಪಂದ್ಯದ ಸಂಭಾವನೆಯನ್ನು (ಮ್ಯಾಚ್ ಫೀ) ಪಡೆದಿದ್ದಾರೆ. ಈ ಸೀಸನ್‌ನಲ್ಲಿ ಅವರು ರಾಜಸ್ಥಾನ ತಂಡದ ಪರ ಒಟ್ಟು 16 ಪಂದ್ಯಗಳನ್ನು ಆಡಿದ್ದು, ಆ ಮೂಲಕ ಕೇವಲ ಪಂದ್ಯದ ಸಂಭಾವನೆಯಿಂದಲೇ ಬರೋಬ್ಬರಿ 1.20 ಕೋಟಿ ರೂ. ಗಳಿಸಿದ್ದಾರೆ.

Vaibhav Sooryavanshi

ಬೆಂಗಳೂರು, ಜೂ.2: ಐಪಿಎಲ್‌ ಟೂರ್ನಿಯಲ್ಲಿ ತನ್ನ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಖ್ಯಾತಿ ಗಳಿಸುತ್ತಿದ್ದಂತೆ, ವೈಭವ್‌ ಸೂರ್ಯವಂಶಿ(Vaibhav Sooryavanshi) ತನ್ನ ಜಾಹೀರಾತು ಬ್ರ್ಯಾಂಡ್‌ ಮೌಲ್ಯವನ್ನು ಹಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. 2026 ರ ಐಪಿಎಲ್ ಪ್ರಾರಂಭವಾಗುವ ಮೊದಲು, ಅವರು ತಲಾ 1 ಕೋಟಿ ರೂ. ಪಡೆಯುತ್ತಿದ್ದ ಅವರು, ಅದ್ಭುತ ಪ್ರದರ್ಶನದ ಬಳಿಕ ಈಗ ಪ್ರತಿ ಒಪ್ಪಂದಕ್ಕೆ 1.5 ರಿಂದ 2 ಕೋಟಿ ರೂ.ಗಳವರೆಗೆ ಶುಲ್ಕ ವಿಧಿಸುತ್ತಿದ್ದಾರೆ ಎನ್ನಲಾಗಿದೆ.

ಹೆಸರು ಹೇಳಲು ಇಚ್ಛಿಸದ ಉದ್ಯಮ ತಜ್ಞರೊಬ್ಬರು ಎನ್‌ಡಿಟಿವಿ(NDTV)ಗೆ ನೀಡಿದ ಮಾಹಿತಿ ಪ್ರಕಾರ, "ಐಪಿಎಲ್‌ಗೂ ಮುನ್ನ ಸೂರ್ಯವಂಶಿ ಕೆಲವು ಬ್ರ್ಯಾಂಡ್‌ಗಳೊಂದಿಗೆ 1 ಕೋಟಿ ರೂ. ಬೆಲೆಯ ಒಪ್ಪಂದ ಮಾಡಿಕೊಂಡಿದ್ದರು, ಆದರೆ ಈಗ ಅವರು 1.5 ರಿಂದ 2 ಕೋಟಿ ರೂ.ಗಳ ನಿರೀಕ್ಷೆಯಲ್ಲಿದ್ದಾರೆ. ಅವರು ಕಾಂಪ್ಲಾನ್ ಮತ್ತು ರೆಡ್ ಬುಲ್ ಜೊತೆ 1 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಈಗ ಅವರು 1.5 ರಿಂದ 2 ಕೋಟಿ ರೂ.ಗಳ ನಿರೀಕ್ಷೆಯಲ್ಲಿದ್ದಾರೆ" ಎಂದು ತಿಳಿಸಿದರು.

15 ನೇ ವಯಸ್ಸಿನಲ್ಲಿ ಸೂರ್ಯವಂಶಿ ತಮ್ಮ ಕ್ರಿಕೆಟ್ ವೃತ್ತಿಜೀವನದ ಆರಂಭದಲ್ಲಿದ್ದಾರೆ. ಐಪಿಎಲ್ 2026 ಭಾರತೀಯ ಕ್ರಿಕೆಟ್‌ನಲ್ಲಿ ಅವರ ಬ್ರಾಂಡ್ ಮೌಲ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವುದರಿಂದ, ಅವರ ಪೋಷಕರು ಮತ್ತು ನಿರ್ವಹಣಾ ತಂಡವು ಈ ಅವಕಾಶಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವುದು ಬಹಳ ಮುಖ್ಯ.

ಭಾರತ ತಂಡಕ್ಕೆ ವೈಭವ್‌ ಸೂರ್ಯವಂಶಿ ಆಯ್ಕೆ; ಮೌನ ಮುರಿದ ಬಿಸಿಸಿಐ ಕಾರ್ಯದರ್ಶಿ

ಅನೇಕ ಮಾಜಿ ಕ್ರಿಕೆಟಿಗರು, ದಂತಕಥೆಗಳಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ಸುನಿಲ್ ಗವಾಸ್ಕರ್ ಸೇರಿ ಹಲವರು ಈಗಾಗಲೇ ಸೂರ್ಯವಂಶಿ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಅವರ ಪ್ರತಿಭೆಯನ್ನು ಅಲ್ಲಗಳೆಯುವಂತಿಲ್ಲವಾದರೂ, ಈ ಯುವಕ ಇನ್ನೂ ಬಹಳ ದೂರ ಸಾಗಬೇಕಾಗಿದೆ.

ರಾಜಸ್ಥಾನ ರಾಯಲ್ಸ್ ತಂಡದ ವಾರ್ಷಿಕ ರಿಟೇನರ್ ಮೊತ್ತವಾದ 1.10 ಕೋಟಿ ರೂ. ಹಾಗೂ ವಿವಿಧ ಪ್ರಶಸ್ತಿಗಳ ನಗದು ಬಹುಮಾನಗಳ ಜೊತೆಗೆ, ವೈಭವ್ ಸೂರ್ಯವಂಶಿ ಅವರು ಆಡಿದ ಪ್ರತಿಯೊಂದು ಪಂದ್ಯಕ್ಕೂ 7.5 ಲಕ್ಷ ರೂಪಾಯಿ ಪಂದ್ಯದ ಸಂಭಾವನೆಯನ್ನು (ಮ್ಯಾಚ್ ಫೀ) ಪಡೆದಿದ್ದಾರೆ. ಈ ಸೀಸನ್‌ನಲ್ಲಿ ಅವರು ರಾಜಸ್ಥಾನ ತಂಡದ ಪರ ಒಟ್ಟು 16 ಪಂದ್ಯಗಳನ್ನು ಆಡಿದ್ದು, ಆ ಮೂಲಕ ಕೇವಲ ಪಂದ್ಯದ ಸಂಭಾವನೆಯಿಂದಲೇ ಬರೋಬ್ಬರಿ 1.20 ಕೋಟಿ ರೂ. ಗಳಿಸಿದ್ದಾರೆ.

ಸೂರ್ಯವಂಶಿ ಪ್ರಶಸ್ತಿಗಳ ಜತೆಗೆ ಭಾರೀ ಮೊತ್ತದ ನಗದು ಬಹುಮಾನಗಳನ್ನು ಕೂಡ ಪಡೆದಿದ್ದಾರೆ. ಅವುಗಳ ಪಟ್ಟಿ ಇಲ್ಲಿದೆ.

ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್: 15 ಲಕ್ಷ ರೂ.

ಆರೆಂಜ್ ಕ್ಯಾಪ್ (ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು): 10 ಲಕ್ಷ ರೂ.

ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್: 10 ಲಕ್ಷ ರೂ. (ಜೊತೆಗೆ ಟಾಟಾ ಸಿಯೆರಾ ಕಾರು)

ಸೂಪರ್ ಸಿಕ್ಸರ್ಸ್ ಆಫ್ ದಿ ಸೀಸನ್: 10 ಲಕ್ಷ ರೂ.

ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್: 10 ಲಕ್ಷ ರೂ.