ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ತಂಡಕ್ಕೆ ವೈಭವ್‌ ಸೂರ್ಯವಂಶಿ ಆಯ್ಕೆ; ಮೌನ ಮುರಿದ ಬಿಸಿಸಿಐ ಕಾರ್ಯದರ್ಶಿ

Vaibhav Sooryavanshi: 15 ವರ್ಷ ತುಂಬಿರುವ ಕಾರಣ ಸೂರ್ಯವಂಶಿಗೆ ಇನ್ನು ಭಾರತೀಯ ತಂಡದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಅರ್ಹರಾಗಿದ್ದಾರೆ. ಐಸಿಸಿ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಆಡಬೇಕಾದರೆ 15 ವರ್ಷ ತುಂಬಿರಬೇಕು. ಹೀಗಾಗಿ ಅವರಿಗೆ ಭಾರತೀಯ ತಂಡದಲ್ಲಿ ಅವಕಾಶ ಸಿಕ್ಕರೆ ಆಡಬಹುದು.

ಭಾರತ ತಂಡಕ್ಕೆ ಸೂರ್ಯವಂಶಿ; ಮೌನ ಮುರಿದ ಬಿಸಿಸಿಐ ಕಾರ್ಯದರ್ಶಿ

Vaibhav Sooryavanshi -

Abhilash BC
Abhilash BC Jun 2, 2026 12:26 PM

ನವದೆಹಲಿ, ಜೂ.2: ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕ ಗಮನಸೆಳೆದಿರುವ 15 ವರ್ಷದ ವೈಭವ್‌ ಸೂರ್ಯವಂಶಿಗೆ ಭಾರತೀಯ ಸೀನಿಯರ್‌ ತಂಡದಲ್ಲಿ ಅವಕಾಶ ಕಲ್ಪಿಸಬೇಕು ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ದೇವಜಿತ್ ಸೈಕಿಯಾ, ಸೂರ್ಯವಂಶಿ ಅವರನ್ನು ಹಿರಿಯರ ಭಾರತೀಯ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯಂತೆ ಸೂರ್ಯವಂಶಿ ಶೀಘ್ರದಲ್ಲೇ ಹಿರಿಯರರ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ದೃಢಪಡಿಸಿದ್ದಾರೆ.

ಐಪಿಎಲ್‌ ಫೈನಲ್‌ ಬಳಿಕ ಹಿಂದೂಸ್ತಾನ್ ಟೈಮ್ಸ್‌ ಜತೆ ಮಾತನಾಡಿದ ಸೈಕಿಯಾ, 'ಬಿಸಿಸಿಐ ಆಯ್ಕೆದಾರರು ಐಪಿಎಲ್ 2026 ರಲ್ಲಿ ಆಟಗಾರರ ಮೇಲೆ ನಿಗಾ ಇಟ್ಟಿದ್ದಾರೆ ಮತ್ತು ಸೂರ್ಯವಂಶಿ ಅವರಿಗೆ ಭಾರತದ ಹಿರಿಯ ಆಟಗಾರರ ತಂಡದಲ್ಲಿ ಮೊದಲ ಸ್ಥಾನ ಸಿಗಲು ಹೆಚ್ಚು ಸಮಯ ಬೇಕಾಗಿಲ್ಲ' ಎಂದು ದೃಢಪಡಿಸಿದರು.

'ವೈಭವ್ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಅದ್ಭುತ ಮಗು, ಮತ್ತು ಮುಂಬರುವ ದಿನಗಳಲ್ಲಿ ಅವರು ಜಗತ್ತನ್ನೇ ಬಿರುಗಾಳಿಯಂತೆ ಆಡುತ್ತಾರೆ ಎಂದು ನನಗೆ ಖಚಿತವಾಗಿದೆ' ಎಂದು ಸೈಕಿಯಾ ತಿಳಿಸಿದರು.

15 ವರ್ಷ ತುಂಬಿರುವ ಕಾರಣ ಸೂರ್ಯವಂಶಿಗೆ ಇನ್ನು ಭಾರತೀಯ ತಂಡದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಅರ್ಹರಾಗಿದ್ದಾರೆ. ಐಸಿಸಿ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಆಡಬೇಕಾದರೆ 15 ವರ್ಷ ತುಂಬಿರಬೇಕು. ಹೀಗಾಗಿ ಅವರಿಗೆ ಭಾರತೀಯ ತಂಡದಲ್ಲಿ ಅವಕಾಶ ಸಿಕ್ಕರೆ ಆಡಬಹುದು.

ಇಂಡೋನೇಷ್ಯಾ ಓಪನ್; ಭರವಸೆಯ ಗೆಲುವಿನೊಂದಿಗೆ ಪಿ.ವಿ ಸಿಂಧು ಪ್ರೀ ಕ್ವಾರ್ಟರ್‌ಗೆ ಪ್ರವೇಶ

19ನೇ ಆವೃತ್ತಿಯ ಐಪಿಎಲ್‌ನಲ್ಲಿ ವಿಶ್ವದ ದಿಗ್ಗಜ ಬೌಲರ್‌ಗಳಿಗೆ ಚಳಿ ಬಿಡಿಸಿದ್ದರು. ಮಾತ್ರವಲ್ಲದೆ ತಮ್ಮ ವಿಸ್ಪೋಟಕ ಬ್ಯಾಟಿಂಗ್‌ ಮೂಲಕ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದ್ದರು. ಅವರು 16 ಪಂದ್ಯಗಳಲ್ಲಿ 237.31 ಸ್ಟ್ರೈಕ್ ರೇಟ್‌ನಲ್ಲಿ ದಾಖಲೆಯ 72 ಸಿಕ್ಸರ್‌ಗಳು ಮತ್ತು 63 ಬೌಂಡರಿಗಳೊಂದಿಗೆ 776 ರನ್ ಗಳಿಸಿ ಹಲವು ದಾಖಲೆಯನ್ನು ತನ್ನ ಹೆಸರಿಗೆ ಬರೆದಿದ್ದರು.

ಸದ್ಯ ಮುಂಬರುವ ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ ಎ ವಿರುದ್ಧದ ಏಕದಿನ ತ್ರಿಕೋನ ಸರಣಿಗಾಗಿ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ಸೂರ್ಯವಂಶಿ ಶೀಘ್ರದಲ್ಲೇ ಭಾರತದ ಹಿರಿಯರ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜೂನ್‌ನಲ್ಲಿ ಮೆನ್ ಇನ್ ಬ್ಲೂ ತಮ್ಮ ಯುಕೆ ಪ್ರವಾಸವನ್ನು ಪ್ರಾರಂಭಿಸಲಿದ್ದು, ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ವಿಭಿನ್ನ ವೈಟ್-ಬಾಲ್ ಸರಣಿಗಳಲ್ಲಿ ಎದುರಿಸಲಿದೆ. ಈ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಿದೆ.