ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತವನ್ನು ಮುನ್ನಡೆಸಬಲ್ಲ ಮೂವರು ಆಟಗಾರರು!

2025ರ ಏಷ್ಯಾ ಕಪ್‌ ಟೂರ್ನಿಯು ಮುಂದಿನ ತಿಂಗಳು ಆರಂಭವಾಗಲಿದೆ. ಆದರೆ, ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಈ ಟೂರ್ನಿಗೆ ಲಭ್ಯರಾಗುವ ಬಗ್ಗೆ ಇನ್ನು ಯಾವುದೇ ಖಚಿತತೆ ಇಲ್ಲ. ಒಂದು ವೇಳೆ ಸೂರ್ಯ ಆಡಿಲ್ಲವಾದರೆ, ಭಾರತ ತಂಡವನ್ನು ಮುನ್ನಡೆಸಬಲ್ಲ ಮೂವರು ಆಟಗಾರರನ್ನು ಇಲ್ಲಿ ವಿವರಿಸಲಾಗಿದೆ.

ಸೂರ್ಯಕುಮಾರ್‌ ಅಲಭ್ಯರಾದರೆ, ಭಾರತಕ್ಕೆ ನಾಯಕ ಯಾರು?

ಸೂರ್ಯಕುಮಾರ್‌ ಯಾದವ್‌ ಏಷ್ಯಾ ಕಪ್‌ ಆಡುವುದು ಅನುಮಾನ.

Profile Ramesh Kote Aug 12, 2025 5:11 PM

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಭಾರತ ತಂಡದ (India) ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರು ಆಡುವ ಬಗ್ಗೆ ಇನ್ನೂ ಖಚಿತತೆ ಇಲ್ಲ. ಅವರು ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಹಾಗೂ ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಗುಣಮುಖರಾಗಿ ಮ್ಯಾಚ್‌ ಫಿಟ್‌ನೆಸ್‌ಗೆ ಮರಳಲು ಬಹುಶಃ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಒಂದು ವೇಳೆ ಸೂರ್ಯಕುಮಾರ್‌ ಯಾದವ್‌ ಅವರು ಏಷ್ಯಾ ಕಪ್‌ ಟೂರ್ನಿಯಿಂದ ಹೊರ ಬಿದ್ದರೆ, ಭಾರತ ತಂಡವನ್ನು ಯಾರು ಮುನ್ನಡೆಸಲಿದ್ದಾರೆಂಬ ಪ್ರಶ್ನೆಗಳು ಎದುರಾಗುವೆ.

ಭಾರತ ಟಿ20ಐ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಜೂನ್‌ ತಿಂಗಳಲ್ಲಿ ಹೆರಿನಾ ಸರ್ಜರಿಗೆ ಒಳಗಾಗಿದ್ದರು ಹಾಗೂ ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರು ಏಷ್ಯಾ ಕಪ್‌ ಟೂರ್ನಿಯಲ್ಲಿ ಸೂರ್ಯಕುಮಾರ್‌ ಯಾದವ್‌ ಅವರು ಆಡುವ ಬಗ್ಗೆ ಇನ್ನು ಖಚಿತವಿಲ್ಲ. ಒಂದು ವೇಳೆ ಸೂರ್ಯ ಹೊರ ಬಿದ್ದರೆ, ಅವರ ಸ್ಥಾನದಲ್ಲಿ ಭಾರತ ತಂಡವನ್ನು ಈ ಮೂವರು ಆಟಗಾರರಲ್ಲಿ ಒಬ್ಬರು ಮುನ್ನಡೆಸಬಹುದು.

Asia Cup 2025: ಏಷ್ಯಾ ಕಪ್‌ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಆತಂಕ

ಸೂರ್ಯಕುಮಾರ್‌ ಯಾದವ್‌

ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ತಂಡಕ್ಕೆ ಶುಭಮನ್‌ ಗಿಲ್‌ ಉಪ ನಾಯಕನಾಗುವ ಸಾಧ್ಯತೆ ಇದೆ. ಒಂದು ವೇಳೆ ಸೂರ್ಯಕುಮಾರ್‌ ಯಾದವ್‌ ಅವರು ಟೂರ್ನಿಯಿಂದ ಹೊರ ಬಿದ್ದರೆ, ಬಹುಶಃ ಶುಭಮನ್‌ ಗಿಲ್‌ ಅವರು ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಕಳೆದ ವರ್ಷ ಜೂನ್‌ ತಿಂಗಳಲ್ಲಿ ಶ್ರೀಲಂಕಾ ವಿರುದ್ದದ ಟಿ20ಐ ಸರಣಿಯಲ್ಲಿ ಸೂರ್ಯಕುಮಾರ್‌ ಯಾದವ್‌ ಯಾದವ್‌ಗೆ ಗಿಲ್‌ ಉಪ ನಾಯಕರಾಗಿದ್ದರು. ಇದಾದ ಬಳಿಕ ಅವರು ಟೆಸ್ಟ್‌ ಹಾಗೂ ಒಡಿಐ ಕಡೆಗೆ ಹೆಚ್ಚಿನ ಗಮನ ಕೊಡುವ ಕಾರಣ ಅವರು ಟಿ20ಐ ಸರಣಿಯಿಂದ ಹೊರಗುಳಿದಿದ್ದರು.

ಅಕ್ಷರ್‌ ಪಟೇಲ್‌

ಅಕ್ಷರ್‌ ಪಟೇಲ್‌ ಜನವರಿ-ಫೆಬ್ರವರಿಯಲ್ಲಿ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯಲ್ಲಿ ಭಾರತ ಟಿ20ಐ ತಂಡಕ್ಕೆ ಉಪ ನಾಯಕರಾಗಿದ್ದರು. ಅಕ್ಷರ್‌ ಪಟೇಲ್‌ ಭಾರತ ತಂಡಕ್ಕೆ ಅತ್ಯಂತ ಪ್ರಮುಖ ಆಟಗಾರ. 2025ರ ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಅಕ್ಷರ್‌ ಪಟೇಲ್‌ ಮುನ್ನಡೆಸಿದ್ದರು.‌

Rishabh Pant: ಏಷ್ಯಾ ಕಪ್‌ ಟೂರ್ನಿಗೂ ಮುನ್ನ ಭಾರತ ತಂಡಕ್ಕೆ ದೊಡ್ಡ ತಲೆ ನೋವು!

ಹಾರ್ದಿಕ್‌ ಪಾಂಡ್ಯ

ರೋಹಿತ್‌ ಶರ್ಮಾ ಅವರ ಬಳಿಕ ಭಾರತ ಟಿ20 ತಂಡಕ್ಕೆ ಹಾರ್ದಿಕ್‌ ಪಾಂಡ್ಯ ಅವರು ನಾಯಕನಾಗುವ ಸಾಧ್ಯತೆ ಇತ್ತು. ಅದರಂತೆ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಯೂ ಹಾರ್ದಿಕ್‌ ಪಾಂಡ್ಯ ಉಪ ನಾಯಕರಾಗಿದ್ದರು. ಹಾರ್ದಿಕ್‌ ಪಾಂಡ್ಯ 16 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಕಾರಣ ಹಾರ್ದಿಕ್‌ ಪಾಂಡ್ಯ ಬದಲು ಸೂರ್ಯಕುಮಾರ್‌ ಯಾದವ್‌ಗೆ ನಾಯಕತ್ವವನ್ನು ನೀಡಲಾಗಿತ್ತು. ಅಂದ ಹಾಗೆ ಸೂರ್ಯ ಅಕಭ್ಯರಾದರೆ, ಹಾರ್ದಿಕ್‌ ಪಾಂಡ್ಯ ತಂಡವನ್ನು ಮುನ್ನಡೆಸಬಹುದು.