ಹೈದರಾಬಾದ್: ವಿಶ್ವದ ಶ್ರೇಷ್ಠದ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿರುವ ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ (Lionel Messi) ಅವರು ಸದ್ಯ ಮೂರು ದಿನಗಳ ಭಾರತದ ಪ್ರವಾಸದಲ್ಲಿದ್ದಾರೆ. ಕೋಲ್ಕತಾದಲ್ಲಿ ಮೊದಲನೇ ದಿನದ ಪ್ರವಾಸವನ್ನು ಮುಗಿಸಿರುವ ಮೆಸ್ಸಿ, ಇದೀಗ ಎರಡನೇ ದಿನಕ್ಕಾಗಿ ಹೈದರಾಬಾದ್‌ಗೆ (Hyderabd) ತೆರಳಿದ್ದಾರೆ. ಹೈದರಾಬಾದ್‌ನಲ್ಲಿ ತಮ್ಮ ನೆಚ್ಚಿನ ಫುಟ್ಬಾಲ್ ಆಟಗಾರನನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದರೆ. ಅಂದ ಹಾಗೆ ಮೆಸ್ಸಿಯ ಹೈದರಾಬಾದ್ ಭೇಟಿಗೆ ಸಂಬಂಧಿಸಿದಂತೆ ಅಚ್ಚರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಅದೇನೆಂದು ಇಲ್ಲಿ ವಿವರಿಸಲಾಗಿದೆ.
ಲಿಯೊನೆಲ್ ಮೆಸ್ಸಿ ಅವರ ಹೈದರಾಬಾದ್ ಪ್ರವಾಸದಲ್ಲಿ ಫೋಟೋ ಸೆಷನ್ ಬಗ್ಗೆ ಹಲವು ಸಂಗತಿಗಳು ಹೊರಬಿದ್ದಿವೆ. ಮೆಸ್ಸಿ ಅವರನ್ನು ಖಾಸಗಿಯಾಗಿ ಭೇಟಿ ಮಾಡಿ ಸಂಭಾಷಣೆ ಹಾಗೂ ಫೋಟೋಗಳನ್ನು ತೆಗೆಸಿಕೊಳ್ಳಲು ಒಬ್ಬ ವ್ಯಕ್ತಿಗೆ ತಲಾ ಜಿಎಸ್‌ಟಿ ಸೇರಿ 10 ಲಕ್ಷ ರು ಗಳ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.
ಕೋಲ್ಕತಾದಲ್ಲಿ ಲಿಯೊನೆಲ್ ಮೆಸ್ಸಿ ಕಾರ್ಯಕ್ರಮ ವಿಫಲ, ಟಿಕೆಟ್ ಹಣ ಮರು ಪಾವತಿಗೆ ಆದೇಶ!
ಟಿಕೆಟ್‌ನಲ್ಲಿ ಮೆಸ್ಸಿಯೊಂದಿಗೆ ಹ್ಯಾಂಡ್‌ಶೇಕ್, ಪ್ರತಿ ಫೋಟೋಗೆ ಆರು ಜನರೊಂದಿಗೆ ಗುಂಪು ಛಾಯಾಚಿತ್ರ, ಬಫೆ ಪ್ರವೇಶ ಮತ್ತು ಸ್ಥಳಕ್ಕೆ ಪ್ರವೇಶವಿದೆ. ಗುಲ್ಟೆಯಲ್ಲಿನ ಇತ್ತೀಚಿನ ವರದಿಯ ಪ್ರಕಾರ, ಹೈದರಾಬಾದ್‌ನಿಂದ ಸುಮಾರು 60 ಜನರು ಈಗಾಗಲೇ ಈ ಪ್ರೀಮಿಯಂ ಫೋಟೋ ಶೂಟ್ ಟಿಕೆಟ್ ಅನ್ನು ಬುಕ್ ಮಾಡಿದ್ದಾರೆ, ಇದು ನಗರದಲ್ಲಿನ ಮೆಸ್ಸಿ ಅಭಿಮಾನಿಗಳ ತೀವ್ರತೆಯನ್ನು ತೋರಿಸುತ್ತದೆ. ವರದಿಯ ಪ್ರಕಾರ, ಇನ್ನೂ 40 ಸ್ಲಾಟ್‌ಗಳು ಲಭ್ಯವಿದೆ.
ಮೆಸ್ಸಿಗೆ ಹೈದರಾಬಾದ್‌ನಲ್ಲಿ ದೊಡ್ಡ ಕಾರ್ಯಕ್ರಮ
ಮೆಸ್ಸಿ ಉಪ್ಪಳ ಕ್ರೀಡಾಂಗಣದಲ್ಲಿ ನಡೆಯುವ ಭವ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5.30 ರಿಂದ ಸಂಗೀತ ಪ್ರದರ್ಶನಗಳು ಆರಂಭವಾಗಲಿದ್ದು, ನಂತರ ಮೆಸ್ಸಿ ಸಂಜೆ 7 ರಿಂದ 7.30 ರ ಸುಮಾರಿಗೆ ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ. ಅವರು ಸುಮಾರು ಒಂದು ಗಂಟೆ ಕಾಲ ಮೈದಾನದಲ್ಲಿಯೇ ಇರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
Lionel Messi: ಮೆಸ್ಸಿ ನೋಡಲು ನವ ದಂಪತಿ ಮಾಡಿದ್ದೇನು ಗೊತ್ತಾ? ಕೊನೆಗೂ ಸಿಗಲಿಲ್ಲ ಆ ಅವಕಾಶ
ಈ ಕಾರ್ಯಕ್ರಮದ ಸಂದರ್ಭದಲ್ಲಿ ಮೆಸ್ಸಿ ಪೆನಾಲ್ಟಿ ಶೂಟೌಟ್‌ನಲ್ಲಿ ಭಾಗವಹಿಸಲಿದ್ದಾರೆ, ಯುನಿಸೆಫ್ ಸೌಹಾರ್ದ ರಾಯಭಾರಿಯಾಗಿ ಮಕ್ಕಳೊಂದಿಗೆ ಸಂವಹನ ನಡೆಸಲಿದ್ದಾರೆ, ಆಯ್ದ 24 ಮಕ್ಕಳಿಗೆ ವಿಶೇಷ ಮಾಸ್ಟರ್‌ಕ್ಲಾಸ್ ನಡೆಸಲಿದ್ದಾರೆ ಮತ್ತು ಆಯೋಜಕರಿಂದ ಅವರನ್ನು ಸನ್ಮಾನಿಸಲಾಗುವುದು. ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಕೂಡ ಭಾಗವಹಿಸುವ ನಿರೀಕ್ಷೆಯಿದ್ದು, ಇದು ಸ್ಪರ್ಧೆಯ ಕುತೂಹಲಕ್ಕೆ ಮತ್ತಷ್ಟು ಇಂಬು ನೀಡಿದೆ.