ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lionel Messi: ಮೆಸ್ಸಿ ನೋಡಲು ನವ ದಂಪತಿ ಮಾಡಿದ್ದೇನು ಗೊತ್ತಾ? ಕೊನೆಗೂ ಸಿಗಲಿಲ್ಲ ಆ ಅವಕಾಶ

ಅರ್ಜೆಂಟೀನಾದ ಸ್ಟಾರ್‌ ಫುಟ್‌ಬಾಲ್‌ ಆಟಗಾರ ಲಿಯೋನೆಲ್‌ ಮೆಸ್ಸಿ (Lionel Messi) ಶನಿವಾರ ಮೂರು ದಿನಗಳ ಗೋಟ್‌ ಇಂಡಿಯಾ ಪ್ರವಾಸದ (GOAT India Tour 2025) ನಿಮಿತ್ತ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ (Lionel Messi in Kolkata) ಬಂದಿಳಿದಿದ್ದಾರೆ.

ಮೆಸ್ಸಿ ನೋಡಲು ನವ ದಂಪತಿ ಮಾಡಿದ್ದೇನು ಗೊತ್ತಾ?

ಸಂಗ್ರಹ ಚಿತ್ರ -

Vishakha Bhat
Vishakha Bhat Dec 13, 2025 2:07 PM

ಕೊಲ್ಕತ್ತಾ: ಅರ್ಜೆಂಟೀನಾದ ಸ್ಟಾರ್‌ ಫುಟ್‌ಬಾಲ್‌ ಆಟಗಾರ ಲಿಯೋನೆಲ್‌ ಮೆಸ್ಸಿ (Lionel Messi) ಶನಿವಾರ ಮೂರು ದಿನಗಳ ಗೋಟ್‌ ಇಂಡಿಯಾ ಪ್ರವಾಸದ (GOAT India Tour 2025) ನಿಮಿತ್ತ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ (Lionel Messi in Kolkata) ಬಂದಿಳಿದಿದ್ದಾರೆ. ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ವಿಮಾನ ನಿಲ್ದಾಣದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಮೆಸ್ಸಿಯವರನ್ನು ನೋಡಿ ಸಂಭ್ರಮಿಸಿದರು. ಈ ಪ್ರವಾಸದಲ್ಲಿ ಅವರು ಕೊಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ನವದದೆಹಲಿಗೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ಮುಂಜಾನೆ 2:30ಕ್ಕೆ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೆಸ್ಸಿಯವರನ್ನು ಸ್ವಾಗತಿಸಲು ಅಭಿಮಾನಿಗಳು ಕಿಕ್ಕಿರಿದು ನಿಂತಿದ್ದರು. ಸದ್ಯ ಮೆಸ್ಸಿಯನ್ನು ನೋಡಲು ಬಂದ ಕೆಲ ಅಭಿಮಾನಿಗಳು ನಿರಾಸೆಗೆಗೊಳಗಾಗಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾಗಿದ್ದ ನವ ದಂಪತಿಯೊಬ್ಬರು ಮೆಸ್ಸಿ ನೋಡಲು ಬಂದಿದ್ದು ಅವರ ಹೇಳಿಕೆ ವೈರಲ್‌ ಆಗಿದೆ.

ದಂಪತಿ ತಮ್ಮ ಹನಿಮೂನ್‌ ಮೊಟಕುಗೊಳಿಸಿ ಮೆಸ್ಸಿ ನೋಡಲು ಬಂದಿದ್ದೇವೆ ಎಂದು ಹೇಳಿದ್ದಾರೆ. 2010ರಿಂದ ಮೆಸ್ಸಿಯವರನ್ನು ನೋಡಲು ನಾನು ಚಡಪಡಿಸುತ್ತಿದ್ದೆ ಯುವತಿ ಹೇಳಿದ್ದಳೆ. ನಾವು ಮೆಸ್ಸಿಯನ್ನು ನೋಡಲು ಇಲ್ಲಿಗೆ ಬಂದಿದ್ದೇವೆ. ಹೌದು, ಅದನ್ನು ನಾನೇ ಬರೆದಿದ್ದೆ (ಪ್ಲಕಾರ್ಡ್‌), ನಾನು ಕಳೆದ ಶುಕ್ರವಾರ ವಿವಾಹವಾದೆ, ಆದರೆ ಮೆಸ್ಸಿ ನಮ್ಮ ನಗರಕ್ಕೆ ಬರುತ್ತಿರುವುದರಿಂದ ನನ್ನ ಪತಿ ಮತ್ತು ನಾನು ನಮ್ಮ ಹನಿಮೂನ್ ಅನ್ನು ಮುಂದೂಡಲು ನಿರ್ಧರಿಸಿದೆವು. ನಾವು 2010 ರಿಂದ ಮೆಸ್ಸಿಯನ್ನು ಅನುಸರಿಸುತ್ತಿದ್ದೇವೆ. ಅವರು 2011 ರ ಆರಂಭದಲ್ಲಿ ಇಲ್ಲಿಗೆ ಬಂದಿದ್ದರು. ಆದರೆ ಆಗ ನಮಗೆ ನೋಡಲು ಅವಕಾಶ ಸಿಕ್ಕಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ ಎಂದು ಆಕೆ ಹೇಳಿದ್ದಾಳೆ.

ವೈರಲ್‌ ವಿಡಿಯೋ



ಲಿಯೋನೆಲ್‌ ಮೆಸ್ಸಿ ಅವರು 2011 ರಲ್ಲಿ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ವೆನೆಜುವೆಲಾವನ್ನು 1-0 ಗೋಲುಗಳ ಅಂತರದಲ್ಲಿ ಸೋಲಿಸಿದ ಬಳಿಕ ಭಾರತಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಅಭಿಮಾನಿಗಳು ಮೆಸ್ಸಿ ನೋಡಲು 25 ಸಾವಿರ ರೂ. ಗಳ ವರೆಗೂ ಹಣ ನೀಡಿ ಟಿಕೆಟ್‌ ಖರೀಸಿದ್ದು, ಇದೀಗ ಅವರನ್ನು ಹತ್ತಿರದಿಂದ ನೋಡಲಾಗದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಸ್ಸಿಯ ಸಮೀಪದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಇತರ ಅತಿಥಿಗಳು ಇರುವುದರಿಂದ ಅಭಿಮಾನಿಗಳು ಅವರನ್ನು ಸ್ಟ್ಯಾಂಡ್‌ಗಳಿಂದ ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹಲವರು ಆಯೋಜಕರ ವಿರುದ್ಧ ಕಿಡಿ ಕಾರಿದ್ದು, ಭಾರೀ ಗಲಾಟೆ ಸೃಷ್ಟಿಸಿದರು.

Lionel Messi: ಸಾವಿರ ಸಾವಿರ ಕೊಟ್ಟರೂ ಮೆಸ್ಸಿ ನೋಡೋಕೆ ಆಗಿಲ್ಲ; ಬಾಟಲ್‌, ಚೇರ್‌ ಎಸೆದು ಅಭಿಮಾನಿಗಳಿಂದ ಆಕ್ರೋಶ

ಮೆಸ್ಸಿ ತಮ್ಮ ಸಹ ಆಟಗಾರರಾದ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಅವರೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ಮೆಸ್ಸಿಯವರ ಭಾರತ ಪ್ರವಾಸವನ್ನು 'ಗೋಟ್ ಟೂರ್' (ಸಾರ್ವಕಾಲಿಕ ಶ್ರೇಷ್ಠ ಪ್ರವಾಸ) ಎಂದು ಕರೆಯಲಾಗಿದೆ.