ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಚಿನ್‌-ಗಂಗೂಲಿ ಜೋಡಿ ಅಲ್ಲ; ಭಾರತ ತಂಡಕ್ಕೆ ಬೆಸ್ಟ್‌ ಓಪನರ್ಸ್‌ ಹೆಸರಿಸಿದ ಆಕಾಶ್‌ ಚೋಪ್ರಾ!

ಭಾರತ ಕ್ರಿಕೆಟ್‌ ತಂಡಕ್ಕೆ ಅತ್ಯುತ್ತಮ ಓಪನಿಂಗ್‌ ಬ್ಯಾಟ್ಸ್‌ಮನ್‌ಗಳು ಯಾರೆಂದು ಮಾಜಿ ಟೆಸ್ಟ್‌ ಆರಂಭಿಕ ಆಕಾಶ್‌ ಚೋಪ್ರಾ ಆರಿಸಿದ್ದಾರೆ. ಅವರು ದಿಗ್ಗಜ ಬ್ಯಾಟ್ಸ್‌ಮನ್‌ಗಳಾದ ಸಚಿನ್‌ ತೆಂಡೂಲ್ಕರ್‌ ಹಾಗೂ ಸೌರವ್‌ ಗಂಗೂಲಿಯನ್ನು ಕಡೆಗಣಿಸಿ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಅವರನ್ನು ಆಯ್ಕೆ ಮಾಡಿದ್ದಾರೆ.

ಭಾರತ ತಂಡಕ್ಕೆ ಬೆಸ್ಟ್‌ ಓಪನರ್ಸ್‌ ಹೆಸರಿಸಿದ ಆಕಾಶ್‌ ಚೋಪ್ರಾ!

ಭಾರತ ಏಕದಿನ ತಂಡಕ್ಕೆ ಬೆಸ್ಟ್‌ ಓಪನರ್ಸ್‌ ಹೆಸರಿಸಿದ ಆಕಾಶ್‌ ಚೋಪ್ರಾ. -

Profile
Ramesh Kote Jun 13, 2026 4:19 PM

ನವದೆಹಲಿ: ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಹಲವು ಆರಂಭಿಕ ಜೋಡಿಗಳನ್ನು ನೋಡಿದ್ದೇವೆ. ಸಚಿನ್‌ ತೆಂಡೂಲ್ಕರ್‌-ಸೌರವ್‌ ಗಂಗೂಲಿ, ಸಚಿನ್‌ ತೆಂಡೂಲ್ಕರ್‌-ವೀರೇಂದ್ರ ಸೆಹ್ವಾಗ್‌, ವೀರೇಂದ್ರ ಸೆಹ್ವಾಗ್‌-ಗೌತಮ್‌ ಗಂಭೀರ್‌ ಸೇರಿದಂತೆ ಭಾರತ ತಂಡದ ಪರ ಸಾಕಷ್ಟು ಆರಂಭಿಕ ಜೋಡಿಗಳು ಆಡಿ ಹೋಗಿವೆ. ಆದರೆ, ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಆಕಾಶ ಚೋಪ್ರಾ (Aakash Chopra) ಇದೀಗ ಭಾರತ ಒಡಿಐ ತಂಡಕ್ಕೆ ಬೆಸ್ಟ್‌ ಓಪನಿಂಗ್‌ ಜೋಡಿಯನ್ನು ಆಯ್ಕೆ ಮಾಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಪರ ಇನಿಂಗ್ಸ್‌ ಆರಂಭಿಸಬಲ್ಲ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ (Rohit Sharma-Shubman Gill) ಜೋಡಿಯನ್ನು ಚೋಪ್ರಾ ಗುಣಗಾನ ಮಾಡಿದ್ದಾರೆ.

ರೋಹಿತ್‌ ಶರ್ಮಾ ಅವರು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಕ್ರಮಣಕಾರಿಯಾಗಿ ಬ್ಯಾಟ್‌ ಮಾಡುತ್ತಾರೆ ಹಾಗೂ ಬೌಲರ್‌ಗಳ ಮೇಲೆ ಒತ್ತಡ ಹೇರುವ ಮೂಲಕ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಡುತ್ತಾರೆ. ಇವರಿಗೆ ಮತ್ತೊಂದು ತುದಿಯಲ್ಲಿ ಶುಭಮನ್‌ ಗಿಲ್‌ ಉತ್ತಮವಾಗಿ ಸಾಥ್‌ ನೀಡುತ್ತಾರೆ. ಈ ಜೋಡಿ ಹಲವು ವರ್ಷಗಳಿಂದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸುತ್ತಿದ್ದಾರೆ. ಅದರಂತೆಯೂ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

ಇಂದಿನ ಏಕದಿನ ಪಂದ್ಯದಲ್ಲಿ ಮಹತ್ವದ ದಾಖಲೆ ಬರೆಯಲು ಸಜ್ಜಾದ ಶ್ರೇಯಸ್‌ ಅಯ್ಯರ್‌

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿಯನ್ನು ಶ್ಲಾಘಿಸಿದ್ದಾರೆ. ಈ ಇಬ್ಬರೂ ಅತ್ಯುತ್ತಮ ಅಂಕಿಗಳನ್ನು ಹೊಂದಿದ್ದಾರೆ. ಒಡಿಐ ಕ್ರಿಕೆಟ್‌ ಇತಿಹಾಸದಲ್ಲಿಯೇ ಭಾರತ ತಂಡಕ್ಕೆ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಅತ್ಯುತ್ತಮ ಜೋಡಿ ಎಂದು ಆಕಾಶ ಚೋಪ್ರಾ ಗುಣಗಾನ ಮಾಡಿದ್ದಾರೆ.

"ಶುಭಮನ್‌ ಗಿಲ್‌ ಹಾಗೂ ರೋಹಿತ್‌ ಶರ್ಮಾ ಅವರ ಆರಂಭಿಕ ವಿಕೆಟ್‌ ಜೊತೆಯಾಟ ಅದ್ಭುತವಾಗಿದೆ ಹಾಗೂ ಪ್ರಸ್ತುತ ಒಡಿಐ ಕ್ರಿಕೆಟ್‌ನಲ್ಲಿ ಭಾರತ ತಂಡದ ಅತ್ಯುತ್ತಮ ಓಪನಿಂಗ್‌ ಜೋಡಿಯಾಗಿದೆ. ನಾವು ಮಾತನಾಡುತ್ತಿರುವುದು 2000ಕ್ಕೂ ಅಧಿಕ ರನ್‌ಗಳು. ನಾನು ಸರಾಸರಿಯನ್ನು ನೋಡಿ ಹೇಳುತ್ತಿದ್ದೇನೆ. ರೋಹಿತ್‌ ಹಾಗೂ ಗಿಲ್‌ ಜೋಡಿಯ ಸರಾಸರಿ 63.8, ಜಾನಿ ಬೈರ್‌ಸ್ಟೋವ್‌ ಹಾಗೂ ಜೇಸನ್‌ ರಾಯ್‌ ಅವರ ಸರಾಸರಿ 52.6 ಇದೆ. ಸೌರವ್‌ ಗಂಗೂಲಿ ಹಾಗೂ ಸಚಿನ್‌ ತೆಂಡೂಲ್ಕರ್‌ ಅವರ ಸರಾಸರಿ 49.3 ರಷ್ಟಿದೆ," ಎಂದು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.

IND vs AFG ಮೊದಲನೇ ಒಡಿಐಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಆಕಾಶ್‌ ಚೋಪ್ರಾ!

"ರೋಹಿತ್‌ ಹಾಗೂ ಗಿಲ್‌ ಅವರು 2,360 ರನ್‌ಗಳನ್ನು ಕಲೆ ಹಾಕಿದ್ದಾರೆ ಹಾಗೂ 14 ಅರ್ಧಶತಕಗಳ ಜೊತೆಯಾಟ ಹಾಗೂ 7 ಶತಕಗಳ ಜೊತೆಯಾಟವನ್ನು ಮೊದಲನೇ ವಿಕೆಟ್‌ಗೆ ಆಡಿದ್ದಾರೆ. ಸರಾಸರಿ ಲೆಕ್ಕದಲ್ಲಿ ಈ ಜೋಡಿ ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ಆರಂಭಿಕ ಜೋಡಿಯಾಗಿದೆ. ಇದು ನಜಕ್ಕೂ ಅತ್ಯುತ್ತಮ ಸ್ಟೋರಿಯಾಗಿದೆ," ಎಂದು ಅವರು ಶ್ಲಾಘಿಸಿದ್ದಾರೆ.

ರೋಹಿತ್‌ ಶರ್ಮಾ ಅದ್ಭುತ ಆರಂಭಿಕ ಬ್ಯಾಟ್ಸ್‌ಮನ್‌

"ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ 16000 ರನ್‌ಗಳನ್ನು ಪೂರ್ಣಗೊಳಿಸಲು ಇನ್ನು ಕೇವಲ 6 ರನ್‌ ಮಾತ್ರ ಅಗತ್ಯವಿದೆ. ಇದು ಒಂದು ಪರಂಪರೆ. ಸಚಿನ್‌ ತೆಂಡೂಲ್ಕರ್‌ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಎರಡನೇ ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲು ರೋಹಿತ್‌ಗೆ ಕೇವಲ ಒಂದು ಶತಕದ ಅಗತ್ಯವಿದೆ. ದಾಖಲೆಯನ್ನು ಮುರಿಯವ ಅಥವಾ ಬರೆಯುವ ಹಂತದಲ್ಲಿ ಇದೀಗ ರೋಹಿತ್‌ ಶರ್ಮಾ ಬಂದು ನಿಂತಿದ್ದಾರೆ," ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.