ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs AFG: ವಿರಾಟ್‌ ಕೊಹ್ಲಿ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಆಕಾಶ್‌ ಚೋಪ್ರಾ!

ಭಾರತ ಹಾಗೂ ಅಫ್ಘಾನಿಸ್ತಾನ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಕ್ಕೂ ಮುನ್ನ ವಿರಾಟ್‌ ಕೊಹ್ಲಿ ಅವರು ಗಾಯದ ಕಾರಣ ಹೊರ ನಡೆದಿದ್ದರು. ಅವರ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ, ಭಾರತದ ಪ್ಲೇಯಿಂಗ್‌ XIನಲ್ಲಿ ಕೊಹ್ಲಿಯ ಮೂರನೇ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕೆಂದು ಮಾಜಿ ಟೆಸ್ಟ್‌ ಆರಂಭಿಕ ಆಕಾಶ್‌ ಚೋಪ್ರಾ ಆರಿಸಿದ್ದಾರೆ.

ವಿರಾಟ್‌ ಕೊಹ್ಲಿಯ ಮೂರನೇ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಚೋಪ್ರಾ.

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ (IND vs AFG) ಭಾರತ ತಂಡದ ಮೂರನೇ ಕ್ರಮಾಂಕಕ್ಕೆ ಇಶಾನ್‌ ಕಿಶನ್‌ (Ishan Kishan) ಹಾಗೂ ಯಶಸ್ವಿ ಜೈಸ್ವಾಲ್‌ ನಡುವೆ ಪೈಪೋಟಿ ನಡೆಯುತ್ತಿದೆ. ವಿರಾಟ್‌ ಕೊಹ್ಲಿ ಅವರು ಸ್ನಾಯ ಸೆಳೆತದ ಗಾಯದಿಂದಾಗಿ ಏಕದಿನ ಸರಣಿಯಿಂ ಹೊರ ಬಿದ್ದಿದ್ದಾರೆ. ಹಾಗಾಗಿ ಮೂರನೇ ಕ್ರಮಾಂಕದಲ್ಲಿ ಯಾರು ಆಡಬಹುದೆಂದು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಇದೀಗ ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಆಕಾಶ್‌ ಚೋಪ್ರಾ (Aakash Chopra), ಮೂರನೇ ಕ್ರಮಾಂಕಕ್ಕೆ ಇಶಾನ್‌ ಕಿಶನ್‌ ಅವರನ್ನು ಆಯ್ಕೆ ಮಾಡಿದ್ದಾರೆ.

ವಿರಾಟ್‌ ಕೊಹ್ಲಿ 2026ರ ಐಪಿಎಲ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಬ್ಯಾಟ್‌ ಮಾಡುವಾಗ ಸ್ನಾಯು ಸೆಳೆತದ ಗಾಯಕ್ಕೆ ಒಳಗಾಗಿದ್ದರು. ಅವರು ಇನ್ನೂ ಸಂಪೂರ್ಣವಾಗಿ ಫಿಟ್‌ ಆಗಿಲ್ಲವಾದ್ದರಿಂದ ಅವರು ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ. ಅವರ ಆಡುತ್ತಿದ್ದ ಮೂರನೇ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕೆಂದು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಂತೆ ಆಕಾಶ್‌ ಚೋಪ್ರಾ ಅವರು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಇಶಾನ್‌ ಕಿಶನ್‌ ಅವರನ್ನು ಆಯ್ಕೆ ಮಾಡಿದ್ದಾರೆ.

ಆರು ತಿಂಗಳುಗಳ ಹಿಂದೆ ಇಶಾನ್‌ ಕಿಶನ್‌ ಅವರ ಬಳಿ ಬಿಸಿಸಿಐ ಕೇಂದ್ರ ಒಪ್ಪಂದವೇ ಇರಲಿಲ್ಲ. ಆದರೆ, ಕಠಿಣ ಪರಿಶ್ರಮ ಪಟ್ಟು ತಮ್ಮ ನಾಯಕತ್ವದಲ್ಲಿ ಜಾರ್ಖಂಡ್‌ ತಂಡವನ್ನು ಇತಿಹಾಸದಲ್ಲೇ ಮೊದಲ ಬಾರಿ ಸೈಯದ್‌ ಮುಸ್ತಾಕ್‌ ಅಲಿ ಟ್ರೋಫಿಯನ್ನು ಗೆದ್ದುಕೊಟ್ಟಿದ್ದರು. ಇದು ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿತ್ತು. ಅವರು ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ದಾಖಲಿಸಿದ್ದರು.

ಸಚಿನ್‌-ಗಂಗೂಲಿ ಜೋಡಿ ಅಲ್ಲ; ಭಾರತ ತಂಡಕ್ಕೆ ಬೆಸ್ಟ್‌ ಓಪನರ್ಸ್‌ ಹೆಸರಿಸಿದ ಆಕಾಶ್‌ ಚೋಪ್ರಾ!

2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕಿಶನ್ ಭಾರತ ತಂಡದ ಅತ್ಯುತ್ತಮ ಪ್ರದರ್ಶನವನ್ನು ತೋರಿದ ಬ್ಯಾಟ್ಸ್‌ಮನ್‌ಗಳ ಪೈಕಿ ಒಬ್ಬರಾಗಿದ್ದು, ಭಾರತ ತಂಡ ಸತತ ಎರಡನೇ ಬಾರಿ ಟಿ20 ವಿಶ್ವಕಪ್‌ ಗೆಲುವಿನಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸಿದ್ದರು. ಅಲ್ಲದೆ, 2026ರ ಐಪಿಎಲ್‌ ಟೂರ್ನಿಯಲ್ಲಿ ಎಡಗೈ ಬ್ಯಾಟರ್ ಕಿಶನ್, ಯಶಸ್ವಿ ಜೈಸ್ವಾಲ್‌ ಅವರಿಗಿಂತ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇತ್ತೀಚಿನ ತಿಂಗಳುಗಳಲ್ಲಿ ತೋರಿದ ಸ್ಥಿರ ಪ್ರದರ್ಶನ, ನಾಯಕತ್ವ ಗುಣಗಳು ಹಾಗೂ ದೊಡ್ಡ ಪಂದ್ಯಗಳಲ್ಲಿ ನೀಡಿದ ಪ್ರದರ್ಶನಗಳ ಫಲವಾಗಿ ಇಶಾನ್ ಕಿಶನ್ ರಾಷ್ಟ್ರೀಯ ತಂಡಕ್ಕೆ ಮರಳುವಲ್ಲಿ ಯಶಸ್ವಿಯಾದರು.

ಮೂರನೇ ಕ್ರಮಾಂಕದಲ್ಲಿ ಇಶಾನ್‌ ಕಿಶನ್‌ ಆಡಬೇಕು: ಚೋಪ್ರಾ

"ಮತ್ತೊಮ್ಮೆ ಹೇಳುವುದಾದರೆ, ಈ ಕ್ಷಣದಲ್ಲಿ ಇಶಾನ್‌ ಕಿಶನ್‌ ದೇವರ ಆಶೀರ್ವಾದ ಪಡೆದ ಆಟಗಾರನಂತೆ ಕಾಣುತ್ತಿದ್ದಾರೆ. ಅವರಿಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ, ಅವಕಾಶ ಸಿಕ್ಕರೆ ಅವರು ಖಂಡಿತವಾಗಿಯೂ ರನ್ ಗಳಿಸುತ್ತಾರೆ ಎಂದು ನಾನು ನಂಬುತ್ತೇನೆ. ಅವರು ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇದರ ಜೊತೆಗೆ, ಯಾವಾಗ ಅವಕಾಶದ ಬಾಗಿಲು ತೆರೆಯುತ್ತದೆಯೋ, ಆಗ ಅದರಲ್ಲಿ ಮೊದಲಿಗರಾಗಿ ಪ್ರವೇಶಿಸುವವರು ಇಶಾನ್ ಕಿಶನ್ ಅವರೇ. ಅವಕಾಶ ಸಿಕ್ಕ ತಕ್ಷಣ ತಂಡದಲ್ಲಿ ಸ್ಥಾನ ಪಡೆದು, ರನ್‌ಗಳನ್ನು ಗಳಿಸಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು ಅವರ ವಿಶೇಷತೆ. ಅವರು ಪ್ರತಿಬಾರಿಯೂ ಅದನ್ನೇ ಮಾಡುತ್ತಾ ಬಂದಿದ್ದಾರೆ,” ಎಂದು ಆಕಾಶ ಚೋಪ್ರಾ ತಮ್ಮ ಯೂಟ್ಯೂಬ್ ವಿಡಿಯೊದಲ್ಲಿ ಹೇಳಿದ್ದಾರೆ.

IND vs AFG 1st ODI: ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್‌ ವಿಳಂಬ

ಕಳೆದ 2026ರ ಐಪಿಎಲ್‌ ಟೂರ್ನಿಯಲ್ಲಿ ಇಶಾನ್‌ ಕಿಶನ್‌ 15 ಪಂದ್ಯಗಳಿಂದ 40.13ರ ಸರಾಸರಿ ಹಾಗೂ 182.42ರ ಸ್ಟ್ರೈಕ್‌ ರೇಟ್‌ನಲ್ಲಿ 602 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ಮೂರನೇ ಕ್ರಮಾಂಕದ ರೇಸ್‌ನಲ್ಲಿ ಕಿಶನ್‌ಗೆ ಪೈಪೋಟಿ ನೀಡುತ್ತಿರುವ ಜೈಸ್ವಾಲ್‌, ಐಪಿಎಲ್‌ ಟೂರ್ನಿಯಲ್ಲಿ ಆಡಿದ 16 ಪಂದ್ಯಗಳಿಂದ 30.50ರ ಸರಾಸರಿ ಮತ್ತು 152.50ರ ಸ್ಟ್ರೈಕ್‌ ರೇಟ್‌ನಲ್ಲಿ 427 ರನ್‌ಗಳನ್ನು ಗಳಿಸಿದ್ದಾರೆ.