ನವದೆಹಲಿ: ಅಂಡರ್-19 ಏಷ್ಯಾಕಪ್ 2026ರ ಟೂರ್ನಿಯಲ್ಲಿ (U19 Asia Cup 2026) ಭಾರತ ತಂಡ ಭರ್ಜರಿ ಆರಂಭ ಪಡೆದಿದೆ. ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ (IND vs NEP) ನೇಪಾಳ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿದ ಭಾರತ, ಶುಭಾರಂಭ ಮಾಡಿದೆ. ಈ ಗೆಲುವಿನಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ (Aryavir Sehwag) ಅವರ ಬ್ಯಾಟಿಂಗ್ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು.
ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ ಆರ್ಯವೀರ್ ಸೆಹ್ವಾಗ್ 52 ಎಸೆತಗಳಲ್ಲಿ ಅಜೇಯ 70 ರನ್ ಸಿಡಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ನಾಯಕ ಲಕ್ಷ್ಯ ರೈಚಂದಾನಿ 53 ರನ್ ಗಳಿಸಿದರು. ಈ ಇಬ್ಬರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ ಗೆಲುವಿನ ಗುರಿ ತಲುಪಿತು.
IND vs NZ 2nd ODI: ತಂಡಗಳ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ ವಿವರ!
ಇದಕ್ಕೂ ಮೊದಲು ಬೌಲಿಂಗ್‌ನಲ್ಲೂ ಭಾರತ ಮೇಲುಗೈ ಸಾಧಿಸಿತ್ತು. ಇಶಾನ್ ಸೂದ್ ಮೂರು ವಿಕೆಟ್‌ಗಳನ್ನು ಕಬಳಿಸಿ ನೇಪಾಳದ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು. ಬೌಲರ್‌ಗಳ ಸಂಘಟಿತ ಪ್ರದರ್ಶನದ ಬಳಿಕ ಬ್ಯಾಟರ್‌ಗಳ ಅಬ್ಬರ ಭಾರತಕ್ಕೆ ಸುಲಭ ಜಯ ತಂದುಕೊಟ್ಟಿತು. ನೇಪಾಳ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಇದೀಗ ಮುಂದಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ.
ಉಭಯ ತಂಡಗಳ ಪ್ಲೇಯಿಂಗ್ XI
ನೇಪಾಳ ಅಂಡರ್-19: ಆಶಿಶ್ ಲುಹಾರ್ (ವಿಕೆಟ್ ಕೀಪರ್), ಅಭಯ್ ಯಾದವ್, ಬಿಪಿನ್ ಶರ್ಮಾ (ನಾಯಕ), ದರ್ಶ್ ಸೋನಾರ್, ನೀರಜ್ ಕುಮಾರ್ ಯಾದವ್, ನಿಶ್ಚಲ್ ಛೆಟ್ರಿ, ನಿತೇಶ್ ಪಟೇಲ್, ಪ್ರಶಿಧ್ ಜೈಸಿ, ಸಚಿನ್ ಭಟ್, ಸುಶೀಲ್ ರಾವಲ್, ಸೂರ್ಯಾಂಶು ಕೊಯಿರಾಲಾ
ಭಾರತ ಅಂಡರ್-19 ತಂಡ: ಆರ್ಯವೀರ್ ಸೆಹ್ವಾಗ್, ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ಅರ್ಜುನ್ ರಜಪೂತ್, ಇಶಾನ್ ಸೂದ್, ಕಾವ್ಯ ಪಟೇಲ್, ಲಕ್ಷ್ಯ ರಾಜೇಶ್ ರೈಚಂದಾನಿ (ನಾಯಕ), ಮನಲ್ ಚೌಹಾಣ್, ಮೋಹಿತ್ ಉಲ್ವಾ, ಯಶ್ವೀರ್ ಗೌಡ್, ವಿ.ಕೆ. ವಿನೀತ್, ಯಶವರ್ಧನ್ ಚೌಹಾಣ್